ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಸ್.ಎಲ್.ಭೈರಪ್ಪಗೆ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿ (S L Bhyrappa | Saraswati Samman | K K Birla Foundation | Mandra,)
PR
ಕನ್ನಡದ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪ (ಸಂತೇಶಿವರ ಲಿಂಗಣ್ಣಯ್ಯ ಭೈರಪ್ಪ) ಅವರ 'ಮಂದ್ರ' ಕಾದಂಬರಿಗೆ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ನವದೆಹಲಿಯ ಕೆಕೆ ಬಿರ್ಲಾ ಫೌಂಡೇಷನ್ ಭೈರಪ್ಪ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಮಂಗಳವಾರ ಘೋಷಿಸಿದೆ. ಪ್ರಶಸ್ತಿ 7.50 ಲಕ್ಷ ರೂಪಾಯಿ ನಗದು ಹಾಗೂ ಪ್ರಶಸ್ತಿ ಫಲಕ ಹೊಂದಿದೆ.

2000-2009ರವರೆಗೆ ಭಾರತೀಯ ಸಾಹಿತ್ಯ ಕ್ಷೇತ್ರದಲ್ಲಿ ಪ್ರಕಟಗೊಂಡ ಕೃತಿಯನ್ನು ಪರಿಶೀಲಿಸಿದ ನಂತರ, ಕನ್ನಡದ ಕಾದಂಬರಿಕಾರ ಎಲ್.ಎಲ್.ಭೈರಪ್ಪ ಅವರ ಮಂದ್ರ ಕಾದಂಬರಿಯನ್ನು ಸರಸ್ವತಿ ಸಮ್ಮಾನ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಗೆ ಭಾಜನರಾಗುತ್ತಿರುವ 20ನೇ ವ್ಯಕ್ತಿ ಭೈರಪ್ಪನವರಾಗಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

75ರ ಹರೆಯದ ಎಸ್.ಎಲ್.ಭೈರಪ್ಪ ಈವರೆಗೆ 22 ಕಾದಂಬರಿಗಳು ಪ್ರಕಟಗೊಂಡಿದೆ. 1959ರಲ್ಲಿ ಭೀಮಕಾಯ ಅವರ ಪ್ರಪ್ರಥಮ ಕಾದಂಬರಿ. ಅಲ್ಲದೇ ಕಳೆದ 25 ವರ್ಷಗಳಿಂದ ಕನ್ನಡ ಸಾಹಿತ್ಯ ಲೋಕದಲ್ಲಿ ಅತಿ ಹೆಚ್ಚು ಬೇಡಿಕೆಯ ಕಾದಂಬರಿಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಂದ್ರ ಕಾದಂಬರಿ ಕೂಡ ಸಾಹಿತ್ಯ ವಲಯದಲ್ಲಿ ಬಹು ಜನಪ್ರಿಯವಾಗಿತ್ತು.

ಅಲ್ಲದೇ ಭೈರಪ್ಪ ಅವರ ಧರ್ಮಶ್ರೀ, ವಂಶವೃಕ್ಷ, ತಬ್ಬಲಿಯೂ ನೀನಾದೆ ಮಗನೆ, ಮತದಾನ, ನಾಯಿ ನೆರಳು, ಅಂಚು, ಭಿತ್ತಿ, ಪರ್ವ, ಗೃಹಭಂಗ, ನಿರಾಕರಣ, ದಾಟು, ಸಾಕ್ಷಿ, ಸಾರ್ಥ ತುಂಬಾ ಜನಪ್ರಿಯ ಕಾದಂಬರಿಗಳಾಗಿದ್ದು, ಅವರ ಆವರಣ ಮತ್ತು ಕವಲು ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು.
ಇವನ್ನೂ ಓದಿ