ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ದಂಡುಪಾಳ್ಯ ಗ್ಯಾಂಗ್‌ನ ಐವರು ಹಂತಕರಿಗೆ ಗಲ್ಲುಶಿಕ್ಷೆ (Dandhu palya | Murder | Rape | Bangalore | Court | Hang punishment)
2000 ಇಸವಿಯಲ್ಲಿ ಸರಣಿ ಕೊಲೆಗಳ ಮೂಲಕ ಇಡೀ ರಾಜ್ಯವನ್ನೇ ದಂಗುಬಡಿಸಿದ್ದ ದಂಡುಪಾಳ್ಯದ ಸರಣಿ ಹಂತಕರದಲ್ಲಿ ಐವರಿಗೆ ವಿಶೇಷ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿ ಆದೇಶ ನೀಡಿದೆ.

ಪ್ರಕರಣದಲ್ಲಿ ದೊಡ್ಡ ಹನುಮಪ್ಪ, ವೆಂಕಟೇಶ್, ಮುನಿಕೃಷ್ಣ, ನಲ್ಲತಿಮ್ಮ, ಲಕ್ಷ್ಮಿ ಎಂಬುವರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. 2000ರಲ್ಲಿ ದಂಡುಪಾಳ್ಯದ ಹಂತಕರಿಂದ 2000ನೇ ಅಕ್ಟೋಬರ್ 22ರಂದು ಹತ್ಯೆಯಾಗಿದ್ದ ಮಂಜುಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಚ್.ಆರ್.ಶ್ರೀನಿವಾಸ್ ಗಲ್ಲುಶಿಕ್ಷೆ ವಿಧಿಸಿ ಆದೇಶ ನೀಡಿದರು.14 ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳಿಗೆ ಮರಣ ದಂಡನೆ ಶಿಕ್ಷೆ ಮತ್ತು ಉಳಿದ ಪ್ರಕರಣಗಳಲ್ಲಿ 10 ವರ್ಷ ಸಜೆ ಹಾಗೂ ತಲಾ 25 ಸಾವಿರ ರೂಪಾಯಿ ದಂಡ ವಿಧಿಸಿದೆ.

ಮಹಿಳೆಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಂಡುಪಾಳ್ಯದ ಗ್ಯಾಂಗ್‌ನ ಹತ್ತು ಮಂದಿಗೆ 2010, ಸೆಪ್ಟೆಂಬರ್ 30ರಂದು ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದ್ದು, ಅದರಲ್ಲಿ ಈಗ ಶಿಕ್ಷೆಗೊಳಗಾದವರೂ ಸೇರಿದ್ದಾರೆ.

ವಿಜಯನಗರದಲ್ಲಿ 1999ರ ಅ.28ರಂದು ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ದಂಡುಪಾಳ್ಯ ಗ್ಯಾಂಗ್ ನಂತರ 2.50 ಲಕ್ಷ ರೂ.ಮೌಲ್ಯದ ಆಭರಣ ದೋಚಿತ್ತು. ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ 2000ರ, ಮಾ.22ರಂದು ಸುಧಾಮಣಿ ಎಂಬುವರನ್ನು ಕೊಲೆ ಮಾಡಿ ಒಂದು ಲಕ್ಷ ರೂ.ಮೌಲ್ಯದ ಚಿನ್ನಾಭರಣ ಲೂಟಿ ಮಾಡಿತ್ತು. ಇದೇ ವರ್ಷ ರಾಮಮೂರ್ತಿನಗರ ಠಾಣೆ ವ್ಯಾಪ್ತಿಯಲ್ಲಿ ರಕ್ಷಾ ಶೆಟ್ಟಿ ಎಂಬುವರನ್ನು ಹತ್ಯೆ ಮಾಡಲಾಗಿತ್ತು.ಅಲ್ಲದೇ ಕಾಮಾಕ್ಷಿಪಾಳ್ಯ ಠಾಣೆ ವ್ಯಾಪ್ತಿಯಲ್ಲಿ ಗೀತಾ ಎಂಬುವರನ್ನು ದಂಡುಪಾಳ್ಯ ಗ್ಯಾಂಗ್ ಕೊಲೆಗೈದಿತ್ತು.
ಇವನ್ನೂ ಓದಿ