ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ಶೀಘ್ರವೇ ಹುಚ್ಚಾಸ್ಪತ್ರೆಗೆ: ವೆಂಕಟರಮಣಪ್ಪ (BJP | Yeddyurappa | Congress | Goolihuty shekar | JDS | Venkataramanappa)
WD
ಗಳಿಗೆಗೊಂದು ಹೇಳಿಕೆ ನೀಡುವ ಮೂಲಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶೀಘ್ರ ಮಾನಸಿಕ ಆಸ್ಪತ್ರೆಗೆ ದಾಖಲಾಗಲಿದ್ದಾರೆ ಎಂದು ಮಾಜಿ ಸಚಿವ, ಅನರ್ಹ ಶಾಸಕ ವೆಂಕಟರಮಣಪ್ಪ ತಿಳಿಸಿದ್ದಾರೆ.

ತಾಲೂಕಿನ ಕೆರೆ ಗುಡಿಹಳ್ಳಿ ಗ್ರಾಮದಲ್ಲಿ ಜಗಳೂರು ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ನಾನು ಐದು ವರ್ಷ ಪೂರೈಸುತ್ತೇನೆ ಎಂದು ಹೇಳಿದ ಕೆಲವೇ ಗಂಟೆಗಳಲ್ಲಿ ಇನ್ನೂ 20 ವರ್ಷ ನಾವೇ ಇರುತ್ತೇವೆ ಎಂದು ಮಾನಸಿಕ ಸ್ಥಿಮಿತ ಕಳೆದುಕೊಂಡು ಏನೇನೊ ಮಾತನಾಡುತ್ತಾರೆ. ಅವರು ಕುರ್ಚಿ ಬಿಟ್ಟ ತಕ್ಷಣ ಜೈಲುಕಂಬಿ ಎಣಿಸಬೇಕಾಗುತ್ತದೆ ಎಂದರು.

ಮಧ್ಯಂತರ ಚುನಾವಣೆ ಬರುವುದಕ್ಕೆ ಆಪರೇಷನ್ ಕಮಲ ಕಾರಣ. ಹಿಂದಿನ ಯಾವ ಮುಖ್ಯಮಂತ್ರಿಯೂ ಇಷ್ಟೊಂದು ಭ್ರಷ್ಟಾರಾಗಿದ್ದಿಲ್ಲ, ಯಡಿಯೂರಪ್ಪ ಮುಖ್ಯಮಂತ್ರಿ ಆಗಿರೋದು ರಾಜ್ಯದ ದುರ್ದೈವ ಎಂದು ಹೇಳಿದರು.
ಇವನ್ನೂ ಓದಿ