ಜನಲೋಕಪಾಲ್ ಸಮಿತಿಗೆ ಸಿಎಂ ನೇಮಕ ಮಾಡಿ: ಎಚ್‌ಡಿಕೆ ವ್ಯಂಗ್ಯ
ಬೆಂಗಳೂರು, ಭಾನುವಾರ, 10 ಏಪ್ರಿಲ್ 2011( 14:18 IST )
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಜನ ಲೋಕಪಾಲ್ ಕರಡು ಮಸೂದೆ ಜಂಟಿ ಸಮಿತಿಗೆ ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ನೇಮಕ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಜಂಟಿ ಸಮಿತಿ ಕರಡು ಸಿದ್ದಪಡಿಸುವ ಮುನ್ನ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಲಹೆ ಪಡೆಯಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದರು. ಆ ನಿಟ್ಟಿನಲ್ಲಿ ಕೇಂದ್ರ ಸಚಿವರ ಜತೆಗೆ ಜಂಟಿ ಸಮಿತಿಯಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿಗಳ ಪ್ರತಿನಿಧಿಯಾಗಿ ನೇಮಕ ಮಾಡಬೇಕು ಎಂದರು.
ಭ್ರಷ್ಟಾಚಾರದಿಂದ ಅಭಿವೃದ್ಧಿ ಕುಂಠಿತವಾಗಿದೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಇದು ಅವರು ಮಾಡಿದ ಭ್ರಷ್ಟಾಚಾರದಿಂದಲೋ ಅಥವಾ ಅವರು ಭ್ರಷ್ಟಾಚಾರ ಮಾಡಿದ್ದಾರೆ ಎಂಬ ಆರೋಪದಿಂದಲೋ ಎಂಬುದನ್ನು ಸ್ಪಷ್ಟವಾಗಿ ಹೇಳಿಲ್ಲ. ಇದನ್ನೆಲ್ಲ ಗಮದಲ್ಲಿಟ್ಟುಕೊಂಡು ಅವರನ್ನು ಸಮಿತಿಗೆ ನೇಮಿಸಿದರೆ ಭ್ರಷ್ಟಾಚಾರದ ಬಗ್ಗೆ ಮೌಲ್ಯಯುತವಾದ ಸಲಹೆ ಕೊಡುತ್ತಿದ್ದರು ಎಂದು ವ್ಯಂಗ್ಯವಾಡಿದರು.