ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಾಂಧಿ ವಿವಾದದ ಹೇಳಿಕೆಗೆ ಇವತ್ತಿಗೂ ಬದ್ಧ: ಕುಮಾರಸ್ವಾಮಿ (Kumaraswamy | Mahatma Gandhi | Politics | Corruption)
PTI
ದೇಶದ ಪಿತಾಮಹ ಮಹಾತ್ಮಾ ಗಾಂಧಿ ಪ್ರಸ್ತುತ ಸಂದರ್ಭದಲ್ಲಿ ರಾಜಕೀಯ ಪ್ರವೇಶಿಸಿದ್ದಲ್ಲಿ ಭ್ರಷ್ಟರಾಗುತ್ತಿದ್ದರು ಇಲ್ಲವೇ ರಾಜಕೀಯ ತೊರೆಯುತ್ತಿದ್ದರು ಎನ್ನುವ ಹೇಳಿಕೆಗೆ ಬದ್ಧರಾಗಿರುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ.

ಕುಮಾರಸ್ವಾಮಿಯವರ ಹೇಳಿಕೆಗೆ ದೇಶಾದ್ಯಂತ ಭಾರಿ ಟೀಕೆಗೆ ಒಳಗಾಗಿದ್ದು, ಉದ್ದೇಶಪೂರ್ವಕವಾಗಿ ಗಾಂಧಿಯವರ ಅವಹೇಳನ ಮಾಡಿದ್ದಾರೆ ಎಂದು ಹಲವು ಪಕ್ಷಗಳು ಮುಖಂಡರು ತೀವ್ರ ಅಸಮಧಾನ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಗಾಂಧಿಜಿ ಇದ್ದಿದ್ದರೆ ರಾಜಕೀಯ ತೊರೆಯಬೇಕಿತ್ತು ಅಥವಾ ಈ ವ್ಯವಸ್ಥೆ ಅವರನ್ನು ಭ್ರಷ್ಟರನ್ನಾಗಿ ಮಾಡುತ್ತಿತ್ತು ಎಂದಿದ್ದೆ. ಆದರೆ, ಭ್ರಷ್ಟಾಚಾರದಲ್ಲಿ ತೊಡಗಿರುವವರು ಮತ್ತು ಅದನ್ನು ಪೋಷಿಸುತ್ತಿರುವವರು ಈ ವಿಚಾರವನ್ನು ವಿವಾದವಾಗಿ ಬಿಂಬಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಜಕಾರಣಿಗಳು ಭ್ರಷ್ಟಾಚಾರಾದ ಬಗ್ಗೆ ಇರುವ ಸತ್ಯಾಂಶವನ್ನು ಹೇಳಲು ತಯಾರಿಲ್ಲ. ಆದರೆ, ನಾನು ಖಳನಾಟಕರಾದರೂ ಪರವಾಗಿಲ್ಲ. ಸತ್ಯವನ್ನು ಹೇಳಲು ಹೊರಟಿದ್ದೇನೆ ಯಾವುದೇ ರೀತಿಯ ಹೋರಾಟಕ್ಕೆ ಸಿದ್ಧ ಎಂದು ಘೋಷಿಸಿದ್ದಾರೆ.

ಮಹಾತ್ಮಾ ಗಾಂಧಿಯವರ ಬಗ್ಗೆ ಅಪಾರ ಗೌರವವಿದೆ. ದೇಶ ಕಂಡ ಪಿತಾಮಹನಿಗೆ ಯಾವತ್ತು ಅಗೌರವ ತೋರಿಲ್ಲ. ಅಥವಾ ಅಗೌರವ ತೋರುವ ಜಾಯಮಾನವೂ ನನ್ನದಲ್ಲ ಎಂದು ಹೇಳಿದ್ದಾರೆ.

ನಮ್ಮ ಪಕ್ಷದ ಕಚೇರಿಯಲ್ಲಿ ದೇಶಭಕ್ತರಾದ ಮಹಾತ್ಮಾ ಗಾಂಧಿ ಮತ್ತು ಜಯಪ್ರಕಾಶ್ ನಾರಾಯಣ್ ಅವರ ಭಾವಚಿತ್ರಗಳನ್ನು ಇಟ್ಟಿರುವುದು ಗೌರವ ಪೂರ್ವಕ ಸಂಕೇತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.
ಇವನ್ನೂ ಓದಿ