ರಾಜ್ಯ ಆಡಳಿತ ಪಕ್ಷ ಬಿಜೆಪಿಯಲ್ಲಿ ಉಂಟಾಗಿದ್ದ ಭಿನ್ನಮತದ ಜ್ವಾಲೆ ತಣ್ಣಗಾಗುತ್ತಿದ್ದಂತೆಯೇ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಪಕ್ಷದಲ್ಲೂ ಭಿನ್ನಮತ ಹೊಗೆಯಾಡಲಾರಂಭಿಸಿದೆ.
ಕೆಪಿಸಿಸಿ ಪುನರ್ ರಚನೆ, ಪದಾಧಿಕಾರಿಗಳ ನೇಮಕ ಕುರಿತಂತೆ ಕಾಂಗ್ರೆಸ್ ಪಕ್ಷದ ನಾಯಕರಲ್ಲಿ ಅತೃಪ್ತಿಗೆ ಕಾರಣವಾಗಿದ್ದು, ಶೀತಲ ಸಮರಕ್ಕೆ ಕಾರಣವಾಗಿದೆ.
ಪದಾಧಿಕಾರಿಗಳು ಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಕಾಂಗ್ರೆಸ್‌ನ ಕೆಲವು ಬಣಗಳು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿವೆ. ಸ್ಥಾನ ವಂಚಿತರಾದರವು ನಾಯಕರುಗಳ ಬಳಿ ಅತೃಪ್ತಿ ವ್ಯಕ್ತಪಡಿಸುತ್ತಿದ್ದಾರೆ.
ನೂತನ ಪದಾಧಿಕಾರಿಗಳ ನೇಮಕದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಬೆಂಬಲಿಗರಿಗೆ ಹೆಚ್ಚು ಅವಕಾಶ ದೊರಕಿಲ್ಲ ಎಂಬ ಆರೋಪವಿದೆ. ಇದರ ವಿರುದ್ಧ ಹೈಕಮಾಂಡ್‌ಗೆ ದೂರು ನೀಡಲು ನಿರ್ಧರಿಸಲಾಗಿದೆ. ಈ ನಡುವೆ ಅತೃಪ್ತರ ಸಭೆಯು ಸಿದ್ಧರಾಮಯ್ಯ ಅವರ ಮನೆಯಲ್ಲಿ ನಡೆದಿದೆ ಎನ್ನಲಾಗಿದೆ.
ಒಟ್ಟಿನಲ್ಲಿ ಬಿಜೆಪಿ ನಂತರ ಈಗ ಕಾಂಗ್ರೆಸ್ ಪಕ್ಷದಲ್ಲೂ ಭಿನ್ನಮತದ ಹೊಗೆಯಾಡಲಾರಂಭಿಸಿದೆ. ಪಕ್ಷದೊಳಗಿನ ವಿಚಾರವನ್ನು ಅಲ್ಲಿಗೆ ತಣ್ಣಗಾಗಿಸುವ ಪ್ರಯತ್ನವನ್ನೂ ಕಾಂಗ್ರೆಸ್ ನಡೆಸುತ್ತಿದೆ.