ಸಕ್ರಿಯ ರಾಜಕಾರಣದಲ್ಲಿ ತೊಡಗುವಂತೆ ವಿಪಕ್ಷ ನಾಯಕರುಗಳಾದ ಸಿದ್ಧರಾಮಯ್ಯ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮನವಿ ಮಾಡಿದ್ದಾರೆ.
ಈ ಹಿಂದೆ ಸಮಕಾಲೀನ ರಾಜಕಾರಣದ ಬಗ್ಗೆ ವಿಪಕ್ಷ ನಾಯಕರು ಸಾಕಷ್ಟು ಬೇಸರವನ್ನು ವ್ಯಕ್ತಪಡಿಸಿದ್ದರು. ಸಿಎಂ ಮಂತ್ರಿ ಮಂಡಲದ ವಿರುದ್ಧ ಸಾಕಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿದರ ಹೊರತಾಗಿಯೂ ಕ್ರಮ ಕೈಗೊಳ್ಳಲು ಸಿಎಂ ಮುಂದಾಗುತ್ತಿಲ್ಲ. ಇದರಿಂದಾಗಿ ರಾಜೀಕಿಯದಲ್ಲಿ ಜಿಗುಪ್ಸೆ ಉಂಟಾಗಿದೆ ಎಂದು ಹೇಳಿದ್ದರು
ಆದರೆ ಈ ಬಗ್ಗೆ ಮೈಸೂರಿನಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ, ಇಬ್ಬರೂ ಅನುಭವ ರಾಜಕಾರಣಿಗಳಾಗಿದ್ದು, ಸಕ್ರಿಯವಾಗಿ ಉಳಿಯುವಂತೆ ಮನವಿ ಮಾಡಿದ್ದಾರೆ.
ಸಮಾಜದಲ್ಲಿರುವ ಅಣುಕು ತೊಡಕುಗಳನ್ನು ನಿವಾರಿಸಬೇಕು. ಆದರೆ ಎಲ್ಲ ಪ್ರಶ್ನೆಗಳಿಗೂ ನಿವೃತ್ತಿಯೊಂದೇ ಉತ್ತರವಲ್ಲ. ಹಿರಿಯ ನಾಯಕರಾದ ಸಿದ್ಧರಾಮಯ್ಯ ಹಾಗೂ ಎಚ್‌ಡಿಕೆ ರಾಜಕೀಯವಾಗಿ ಜಾಗೃತರಾಗಿದ್ದು, ಎಲ್ಲರು ಸೇರಿ ಒಟ್ಟಾಗಿ ಹೋಗೋಣ ಎಂದು ಸಿಎಂ ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಅಕ್ರಮ ಗಣಿಗಾರಿಕೆ ಲಿಖಿತ ಉತ್ತರ ಎಪ್ರಿಲ್ 21ರೊಳಗೆ ನೀಡಲಾವುಗುವುದು ಎಂಬುದನ್ನು ಸಿಎಂ ಸ್ಪಷ್ಟಪಡಿಸಿದರು.