ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಪಪ್ರಚಾರ ಆಂದೋಲನ: ಸಮಿತಿಗೆ ಸಂತೋಷ್ ಹೆಗ್ಡೆ ಗುಡ್‌ಬೈ? (Anti-corruption crusade | Anna Hazare | Lok Pal Bill | Drafting committee | Santosh Hegde | Vilification campaign)
ಭ್ರಷ್ಟಾಚಾರ ನಿಯಂತ್ರಣಕ್ಕಾಗಿ ಹೋರಾಡುತ್ತಿರುವ ಲೋಕಪಾಲ ಕರಡು ರಚನಾ ಸಮಿತಿಯ ನಾಗರಿಕ ಸದಸ್ಯರ ವಿರುದ್ಧ ನಿರಂತರವಾಗಿ ನಡೆಯುತ್ತಿರುವ ತೇಜೋವಧೆ ಆಂದೋಲನದಿಂದ ಆಕ್ರೋಶಿತಗೊಂಡಿರುವ ಕರ್ನಾಟಕ ಲೋಕಾಯುಕ್ತ ಸಂತೋಷ್ ಹೆಗ್ಡೆ, ತಾವು ಸಮಿತಿಯಿಂದಲೇ ಹೊರಬರುವ ಕುರಿತು ಚಿಂತಿಸುತ್ತಿರುವುದಾಗಿ ಹೇಳಿದ್ದಾರೆ.

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮಸೂದೆಯೊಂದು ಸಿದ್ಧವಾಗುತ್ತಿದೆ ಎಂದಾಗ, ಎಲ್ಲೆಂಲ್ಲಿಂದಲೋ ಸಿಡಿಗಳು ಹೊರಬರುತ್ತವೆ, ಅಂದು ಅಣ್ಣಾ ಹಜಾರೆ, ಈಗ ಭೂಷಣ್‌ದ್ವಯರು ಅಪಪ್ರಚಾರ ಆಂದೋಲನ ನಡೆಯುತ್ತದೆ. ಈಗ ತಾನೂ ಹೊರತಾಗಿಲ್ಲ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಅವರಂತೂ, ತನ್ನನ್ನೂ ಪ್ರಶ್ನೆ ಮಾಡಿದ್ದಾರೆ ಎಂದು ಸಂತೋಷ್ ಹೆಗ್ಡೆ ಅವರು ಗುರುವಾರ ನೋವಿನಿಂದ ಹೇಳಿಕೊಂಡಿದ್ದಾರೆ.

ಈ ಕುರಿತು ಶನಿವಾರ ದೆಹಲಿಗೆ ತೆರಳಲಿದ್ದು, ಸಮಿತಿಯ ಸದಸ್ಯರೊಂದಿಗೆ ಮಾತುಕತೆ ನಡೆಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದವರು ಹೇಳಿದ್ದಾರೆ. ಇದೀಗ ಭ್ರಷ್ಟರ ವಿರುದ್ಧ ಸಮರ ಸಾರಿರುವ ಜೊತೆಗೆ ಅಪಪ್ರಚಾರ ಆಂದೋಲನದ ವಿರುದ್ಧವೂ ಸಮರ ಸಾರಬೇಕಾಗಿದೆ ಎಂದವರು ವಿಷಾದಿಸಿದರು.

ಭ್ರಷ್ಟಾಚಾರದ ವಿರೋಧೀ ಆಂದೋಲನವು ಈ ರಾಜಕಾರಣಿಗಳಲ್ಲಿ ಭಯ ಹುಟ್ಟಿಸಿದೆ. ಹಜಾರೆಗೆ ದೊರೆತಿರುವ ಅದ್ಭುತ ಜನ ಬೆಂಬಲವನ್ನು ಅವರ್ಯಾರೂ ನಿರೀಕ್ಷಿಸಿರಲಿಲ್ಲ ಎಂದಿರುವ ಲೋಕಾಯುಕ್ತರು, ನಮ್ಮ ಹೋರಾಟದ ದಿಕ್ಕು ತಪ್ಪಿಸುವ ಸಂಚು ನಡೆಯುತ್ತಿರುವುದರಲ್ಲಿ ಸಂದೇಹವೇ ಇಲ್ಲ ಎಂದವರು ಹೇಳಿದ್ದಾರೆ.

ಭ್ರಷ್ಟರ ವಿರುದ್ಧ ಹೋರಾಡುತ್ತೇನೆ ಎನ್ನುತ್ತಿರುವ ಸಂತೋಷ್ ಹೆಗ್ಡೆ ಕರ್ನಾಟಕದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಏನು ಮಾಡಿದ್ದಾರೆ ಎಂದು ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, "ಯಡಿಯೂರಪ್ಪ ವಿರುದ್ಧ ನಾನು ಹೋರಾಟ ಮಾಡಿದಷ್ಟು ಬೇರಾರೂ ಮಾಡಿಲ್ಲ. ಈಗ ಅವರ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆಯಿದೆ. ಹೀಗಾಗಿ ಏನೂ ಮಾಡುವಂತಿಲ್ಲ. ಅವರ ಮೇಲೆ ಕ್ರಮ ಕೈಗೊಂಡಿದ್ದೇನೆ, ನೋಟೀಸ್ ಕಳುಹಿಸಿದ್ದೇನೆ, ವಿವರಣೆ ಕೇಳಿದ್ದೇನೆ" ಎಂದು ವಿವರಿಸಿದರು.

ಕರಡು ಸಮಿತಿಯಲ್ಲಿರುವ ಒಬ್ಬೊಬ್ಬರ ವಿರುದ್ಧ ಒಮ್ಮೊಮ್ಮೆ ಆರೋಪಗಳು ಕೇಳಿಬರತೊಡಗಿವೆ. 40 ವರ್ಷಗಳಿಂದ ಲೋಕಪಾಲವನ್ನು ರಚಿಸಿರಲಿಲ್ಲ. ಈಗ ಅದರ ರಚನೆಗೆ ಹೊರಟಿರುವಾಗ ಧೃತಿಗೆಟ್ಟಿರುವ ಈ ರಾಜಕಾರಣಿಗಳು ಇಲ್ಲಸಲ್ಲದ ಆರೋಪ ಮಾಡತೊಡಗಿದ್ದಾರೆ. ಎಂದೂ ಇಲ್ಲದ್ದು, ಈಗ ಲೋಕಪಾಲ ಮಸೂದೆ ಜಾರಿಗೆ ಕ್ಷಣಗಣನೆ ನಡೆಯುತ್ತಿದೆ ಎಂದಾದಾಗ, ದಿಢೀರ್ ಆಗಿ ಆರೋಪಗಳು ಬರುತ್ತವಾದರೂ ಎಲ್ಲಿಂದ? ಎಂದವರು ಪ್ರಶ್ನಿಸಿದರು.
ಇವನ್ನೂ ಓದಿ