ಮುಖಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ತನ್ನ ಕುರ್ಚಿ ಅಲುಗಾಡದಂತೆ ನೋಡಿಕೊಳ್ಳುವುದೇ ಕೆಲಸವಾಗಿರುವುದರಿಂದ ರಾಜ್ಯದ ಜನತೆಯ ಸಮಸ್ಯೆಗಳನ್ನು ಆಲಿಸಲು ಸಮಯವೆಲ್ಲಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟೀಕಾಪ್ರಹಾರ ಮಾಡಿದ್ದಾರೆ.
ಸಿಎಂ ಅವರಿಗೆ ಕುರ್ಚಿ ಉಳಿಸಿಕೊಳ್ಳುವುದರಲ್ಲೇ ಮಗ್ನರಾಗಿದ್ದು, ಜನಸಾಮಾನ್ಯರ ಬಗ್ಗೆ ತಲೆಕೆಡಿಸಿಕೊಳ್ಳಲು ಸಮಯವಿಲ್ಲ ಎಂದವರು ಟೀಕಿಸಿದರು.
ರಾಜ್ಯ ಸರಕಾರದ ದುರಾಡಳಿತದಿಂದ ಬೆಸತ್ತಿರುವ ಜನತೆ ತಕ್ಕ ಉತ್ತರ ನೀಡಲು ಕಾಯುತ್ತಿದ್ದಾರೆ. ಇಲ್ಲಿ ಸರಕಾರ ಇದೆಯೋ ಇಲ್ಲವೋ ಎಂಬುದೇ ಗೊತ್ತಾಗುತ್ತಿಲ್ಲ ಎಂದವರು ಕಿಡಿ ಕಾರಿದರು.
ರಾಜೀನಾಮೆ ಬೇಡ... ಈ ನಡುವೆ ರಾಜಕೀಯ ಟೀಕೆಗಳಿಗೆ ಮನನೊಂದು ಜನಲೋಕಪಾಲ ಕರಡು ಮಸೂದೆ ಸಮಿತಿಗೆ ರಾಜೀನಾಮೆ ನೀಡಬಾರದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅವರಿಗೆ ಎಚ್‌ಡಿಕೆ ಮನವಿ ಮಾಡಿದ್ದಾರೆ.
ರಾಜಕೀಯ ಟೀಕೆಗಳಿಂದ ಬೆಸತ್ತು ರಾಜೀನಾಮೆ ನೀಡುವುದು ಬೇಡ. 40 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜನಲೋಕಪಾಲ ಮಸೂದೆ ಮಂಡನೆಯಾಗಬೇಕು ಎಂದವರು ಆಗ್ರಹಿಸಿದರು.