ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲೋಕಾಯುಕ್ತ ಹುದ್ದೆಯಲ್ಲಿ ಮುಂದುವರಿಯಲು ಬಯಸುವುದಿಲ್ಲ: ಹೆಗ್ಡೆ (Santosh Hegde | Karnataka Lokayukta | Lokpal Bill | Anna Hazare)
PR
ಲೋಕಾಯುಕ್ತ ನ್ಯಾಯಮೂರ್ತಿ ಹುದ್ದೆಯ ಅವಧಿ ಅಗಸ್ಟ್ ತಿಂಗಳಿಗೆ ಮುಕ್ತಾಯಗೊಳ್ಳಲಿದ್ದು, ಎರಡನೇ ಅವಧಿಗೆ ಮುಂದುವರಿಯಲು ಬಯಸುವುದಿಲ್ಲ ಎಂದು ಲೋಕಪಾಲ ಕರಡು ಸಮಿತಿಯ ಸದಸ್ಯರು ಹಾಗೂ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದ್ದಾರೆ.

ಒಂದು ವೇಳೆ ಸರಕಾರ ನನ್ನ ಅಧಿಕಾರವಧಿಯನ್ನು ವಿಸ್ತರಿಸಿದಲ್ಲಿ ಕೂಡಾ, ಅಧಿಕಾರದಲ್ಲಿ ಮುಂದುವರಿಯುವ ಇಚ್ಚೆಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಸಮರ ಸಾರಿದ ಹೆಗ್ಡೆ, ಅಧಿಕಾರವಧಿಯಲ್ಲಿ ದಕ್ಷತೆಯಿಂದ ಸಾಕಷ್ಟು ಕೆಲಸ ಮಾಡಿದ್ದೇನೆ. ಅದೇ ಹೊಣೆಗಾರಿಕೆಯನ್ನು ಮುಂದುವರಿಸಿಕೊಂಡು ಹೋಗಲು ಬಯಸುವುದಿಲ್ಲ ಎಂದು ಡೊನಾ ಪೌಲಾದಲ್ಲಿ ಸುದ್ದಿಗಾರರೊಂದಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಗಣಿಗಾರಿಕೆಯಂತಹ ವಿಷಯಗಳನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಡೆ, ಪ್ರಸ್ತುತ ಲೋಕಾಯುಕ್ತದಲ್ಲಿರುವ ಅಧಿಕಾರಿಗಳು ನಿರ್ಗಮಿಸುತ್ತಿದ್ದು, ನೂತನ ಅಧಿಕಾರಿಗಳ ಆಯ್ಕೆಯಲ್ಲಿ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಲೋಕಾಯುಕ್ತ ಹುದ್ದೆಯನ್ನು ಸಮರ್ಥವಾಗಿ ಮುಂದುವರಿಸಿಕೊಂಡು ಸಾಗುವ ಬಗ್ಗೆ ಯೋಚಿಸಿಲ್ಲ. ರಾಜ್ಯ ಸರಕಾರಕ್ಕೆ ಕೂಡಾ, ನಾನು ಅಧಿಕಾರದಲ್ಲಿ ಮುಂದುವರಿಯುವುದು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.

ಲೋಕಾಯುಕ್ತ ಸಂಸ್ಥೆ, ಕಳೆದ ನಾಲ್ಕು ವರ್ಷ ಏಳು ತಿಂಗಳ ಅವಧಿಯಲ್ಲಿ ಶಾಸಕರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳು ಸೇರಿದಂತೆ ಒಟ್ಟು 1,400 ಅದಿಕಾರಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿ ಹೆಗ್ಡೆ ವಿವರಣೆ ನೀಡಿದ್ದಾರೆ.

1999-2000ರಲ್ಲಿ ದಾಖಲಾದ ಪ್ರಕರಣಗಳು ಹಲವು ನ್ಯಾಯಾಲಯಗಳಲ್ಲಿ ಇನ್ನೂ ನೆನೆಗುದಿಯಲ್ಲಿವೆ. ಪ್ರಕರಣಗಳ ವಿಚಾರಣೆ ಮುಕ್ತಾಯಗೊಳ್ಳುವವರೆಗೆ 2020ರ ವರ್ಷಕ್ಕೆ ತಲುಪಬಹುದು ಅಂದರೆ, ಯಾವ ರೀತಿ ನ್ಯಾಯ ದೊರೆಯುತ್ತದೆ ಎನ್ನುವುದು ನೀವು ಉಹಿಸಬಹುದು ಎಂದರು.

ಭ್ರಷ್ಟಾಚಾರ ವಿರೋಧಿ ಹೋರಾಟವನ್ನು ಮುಂದುವರಿಸಿರುವ ಸಮಾಜ ಸುಧಾರಕ, ಗಾಂಧಿವಾದಿ ಅಣ್ಣಾ ಹಜಾರೆಯವರಿಗೆ ದೇಶಾದ್ಯಂತ ಭಾರಿ ಬೆಂಬಲ ವ್ಯಕ್ತವಾಗಿದೆ ಎಂದು ಸಂತೋಷ್ ಹೆಗ್ಡೆ ತಿಳಿಸಿದ್ದಾರೆ.
ಇವನ್ನೂ ಓದಿ