ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಎಂಡೋಸಲ್ಫಾನ್‌: ಸಂಸತ್‌ ಎದುರು ಪ್ರತಿಭಟನೆಗೆ ಶೋಭಾ (Endosulfan | Shobha Karandlaje | Parliament | Fast,)
ಹಾನಿಕಾರಕ ಕೀಟನಾಶಕ ಎಂಡೋಸಲ್ಫಾನ್‌ ನಿಷೇಧಕ್ಕೆ ಆಗ್ರಹಿಸಿ ಶೀಘ್ರದಲ್ಲೇ ಸಂಸತ್‌ ಭವನದ ಎದುರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವುದಾಗಿ ಇಂಧನ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಜಿನೆವಾದಲ್ಲಿ ನಡೆಯುತ್ತಿರುವ ಜಾಗತಿಕ ಸಮಾವೇಶದಲ್ಲಿ ಎಂಡೋಸಲ್ಫಾನ್‌ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಕೇಂದ್ರ ಸರಕಾರ ದನಿ ಎತ್ತಬೇಕು ಎಂದು ಹೇಳಿದರು.ದೇಶಾದ್ಯಂತ ಎಂಡೋಸಲ್ಫಾನ್‌ ಸಂಪೂರ್ಣ ನಿಷೇಧಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಎಂಡೋಸಲ್ಫಾನ್‌ ಕೀಟಕಾಶಕದಿಂದಾಗಿ ಕರ್ನಾಟಕ ಕರಾವಳಿ ಪ್ರದೇಶದ ಸಾವಿರಾರು ಜನರು ರೋಗಪೀಡಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಎಂಡೋಸಲ್ಫಾನ್‌ ನಿಷೇಧಕ್ಕಾಗಿ ತಾವು ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ, ಬಿಹಾರ, ಆಂಧ್ರ ಪ್ರದೇಶ ಹಾಗೂ ಹಿಮಾಚಲ ಪ್ರದೇಶ ಸರಕಾರಗಳ ಬೆಂಬಲ ಕೋರಿರುವುದಾಗಿ ಶೋಭಾ ತಿಳಿಸಿದರು.

ಎಂಡೋಸಲ್ಫಾನ್‌ ವಿರುದ್ಧ ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್‌ ಅವರು ನಡೆಸಿರುವ ಹೋರಾಟಕ್ಕೆ ಪ್ರಶಂಸೆ ವ್ಯಕ್ತಪಡಿಸಿದ ಶೋಭಾ, ಅವರೊಂದಿಗೆ ಕೈಜೋಡಿಸಲು ತಮಗೆ ಹಿಂಜರಿಕೆ ಇಲ್ಲ ಎಂದು ಶೋಭಾ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಸ್ವದೇಶಿ ಜಾಗರಣ ಮಂಚ್‌ನ ಸಂಘಟನಾ ಕಾರ್ಯದರ್ಶಿ ಜಗದೀಶ್‌, ಎಂಡೋಸಲ್ಫಾನ್‌ ವಿರುದ್ಧ ಹೋರಾಟ ನಡೆಸುತ್ತಿರುವ ಸಿಪಿಎಂ ಜತೆಗೆ ಕೈಜೋಡಿಸಲು ಯಾವುದೇ ಹಿಂಜರಿಕೆ ಇಲ್ಲ ಎಂದು ಹೇಳಿದ್ದಾರೆ.

ಶೋಭಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಪಿಎಂ ಮುಖಂಡ ಜಿ.ಎನ್‌.ನಾಗರಾಜ್‌, 'ಎಂಡೋಸಲ್ಫಾನ್‌ ವಿರುದ್ಧ ನಾವು ಮೊದಲು ಹೋರಾಟ ಆರಂಭಿಸಿದ್ದೆವು, ಬಿಜೆಪಿ ಹಾಗೂ ಸಂಘ ಪರಿವಾರಕ್ಕೆ ತಡವಾಗಿ ಜ್ಞಾನೋದಯವಾಗಿದೆ' ಎಂದು ಕುಟುಕಿದ್ದಾರೆ.
ಇವನ್ನೂ ಓದಿ