ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಉತ್ತಮ ಆಡಳಿತ ನೀಡಿದ್ರೆ ಜನ ಮೆಚ್ಚುತ್ತಾರೆ: ಅಡ್ವಾಣಿ (BJP | L.k.advani | Congress | Jagannath Bhavan | Yeddyurappa | Ishwarappa)
ಉತ್ತಮ ಆಡಳಿತ ನೀಡಿದ್ರೆ ಜನ ಮೆಚ್ಚುತ್ತಾರೆ: ಅಡ್ವಾಣಿ
ಬೆಂಗಳೂರು, ಗುರುವಾರ, 28 ಏಪ್ರಿಲ್ 2011( 18:52 IST )
ಚುನಾವಣೆಗಳಲ್ಲಿ ಗೆಲುವು ಸಾಧಿಸಿ ಅಧಿಕಾರ ಹಿಡಿಯುವುದಕ್ಕಿಂತ ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವುದು ತುಂಬಾ ಪ್ರಮುಖವಾದದ್ದು ಎಂದು ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಕಿವಿಮಾತು ಹೇಳಿದ್ದಾರೆ.
ನಗರದ ಮಲ್ಲೇಶ್ವರಂನಲ್ಲಿ ನೂತನವಾಗಿ ನಿರ್ಮಾಣಗೊಂಡ ಜಗನ್ನಾಥ ಭವನ ಉದ್ಘಾಟಿಸಿದ ನಂತರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಯಾವುದೇ ರಾಜಕೀಯ ಪಕ್ಷಗಳಿಗೆ ಚುನಾವಣೆಯನ್ನು ಗೆಲ್ಲುವುದು, ಅಧಿಕಾರ ಹಿಡಿಯುವುದಕ್ಕಿಂತ ತುಂಬಾ ಮಹತ್ವವಾದದ್ದು ಜನರಿಗೆ ಕೊಟ್ಟ ಭರವಸೆ ಈಡೇರಿಸುವುದಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಆಡಳಿತ ಇಡೀ ರಾಷ್ಟ್ರಕ್ಕೆ ಮಾದರಿ ಆಡಳಿತವಾಗಿದೆ ಎಂದರು. ಯಾವುದೇ ಸರಕಾರಗಳು ಜನರಿಗೆ ಇಷ್ಟವಾಗುವ ರೀತಿಯಲ್ಲಿ ಉತ್ತಮ ಆಡಳಿತ ನೀಡಿದರೆ ಜನ ಮೆಚ್ಚುತ್ತಾರೆ. ಮತ್ತೆ ಆ ಪಕ್ಷವನ್ನೇ ಬೆಂಬಲಿಸುತ್ತಾರೆ ಎಂದು ಹೇಳಿದರು.
ಬಿಜೆಪಿ ಸಾಮಾನ್ಯ ಪಕ್ಷವಲ್ಲ, ಅಸಾಮಾನ್ಯ ಪಕ್ಷ. ಬೇರೆ ಪಕ್ಷಗಳಂತೆ ಅಧಿಕಾರವಿದ್ದಾಗ ಲೂಟಿ ಮಾಡುವ ಪಕ್ಷವಲ್ಲ. ಇದನ್ನು ಅರಿತು ಕೆಲಸ ಮಾಡಿದರೆ ಯಾವುದೇ ತೊಂದರೆ ತಲೆದೋರದು ಎಂದರು.