ಪವಾಡಗಳಿಂದಲೇ ಪ್ರಖ್ಯಾತರಾಗಿದ್ದ ಸತ್ಯ ಸಾಯಿ ಬಾಬಾ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲಿನಲ್ಲಿದ್ದ ಬಿಜೆಪಿ (ಅಂದಿನ ಜನಸಂಘ) ಮುಖಂಡ ಆಡ್ವಾಣಿ ಅವರ ಬಿಡುಗಡೆ ಬಗ್ಗೆಯೂ ಭವಿಷ್ಯ ನುಡಿದಿದ್ದರು. ಈ ವಿಷಯವನ್ನು ಸ್ವತಃ ಆಡ್ವಾಣಿಯವರೇ ಬಹಿರಂಗಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಬಿಜೆಪಿ ಕಚೇರಿ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಆಡ್ವಾಣಿ, ಬಾಬಾ ಅವರ ಮಹಿಮೆಯನ್ನು ವಿವರಿಸಿದ್ದು ಹೀಗೆ. 1977ರಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ತಾವು ಜೈಲಿನಲ್ಲಿದ್ದಾಗ ತಮ್ಮ ಪತ್ನಿ ಸಾಯಿ ಬಾಬಾ ಆಶ್ರಮಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ನಿಮ್ಮ ಪತಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾರೆ ಎಂದು ಬಾಬಾ ಹೇಳಿದ್ದರು.
ತಮ್ಮ ಪತ್ನಿ ಆಶ್ರಮದಿಂದ ಮರಳಿದ ದಿನವೇ ಆಡ್ವಾಣಿ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಜೈಲಿನ ಅಧಿಕಾರಿಯಿಂದ ಫೋನ್ ಬಂದಿತ್ತು ಎಂಬುದನ್ನು ಆಡ್ವಾಣಿ ನೆನಪಿಸಿಕೊಂಡರು.