ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಗಣಿ ಸಾಬೀತು; ಸಚಿವ ರೆಡ್ಡಿ ಪದಚ್ಯುತಗೊಳಿಸಿ (BJP | Congress | Illegal Mining | Janardana Reddy | Ballary)
ಗಣಿಧಣಿ, ಸಚಿವ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ ಎಂಬುದಕ್ಕೆ ಸಿಇಸಿ ಮತ್ತು ಲೋಕಾಯುಕ್ತ ವರದಿ ಮೂಲಕ ದಾಖಲೆಗಳು ಲಭ್ಯವಾಗಿದ್ದು, ಆ ನಿಟ್ಟಿನಲ್ಲಿ ಸರಕಾರ ರೆಡ್ಡಿಯನ್ನು ಸಚಿವ ಸ್ಥಾನದಿಂದ ಪದಚ್ಯುತಗೊಳಿಸುವಂತೆ ರಾಷ್ಟ್ರೀಯ ನೈಸರ್ಗಿಕ ಸಂಪನ್ಮೂಲಗಳ ರಕ್ಷಣಾ ಸಮಿತಿ ಸಂಯೋಜಕ ರಾಘವೇಂದ್ರ ಒತ್ತಾಯಿಸಿದ್ದಾರೆ.

ರೆಡ್ಡಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿರುವ ಕುರಿತು ಸಿಇಸಿ, ಲೋಕಾಯುಕ್ತ ವರದಿ ಮೂಲಕ ದಾಖಲೆ ಲಭ್ಯವಾಗಿದ್ದರೂ, ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿಲ್ಲ ಎಂದು ಹೇಳಿ ಗಣಿಕೋರರನ್ನು ರಕ್ಷಿಸಲು ಮುಂದಾಗಿದೆ ಎಂದು ಆರೋಪಿಸಿದರು.

ಜನಾರ್ದನ ರೆಡ್ಡಿ ಸಂಬಂಧಿಕರಾದ ಬಿ.ವಿ.ಶ್ರೀನಿವಾಸ ರೆಡ್ಡಿ ಹಾಗೂ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾರೆಡ್ಡಿ ಅವರು ಟ್ರೈಡೆಂಟ್ ಮಿನರಲ್ ಹಾಗೂ ಮೆಹಬೂಬ ಟ್ರೇಡರ್ಸ್ ರೇಷನ್ ಸನ್ ಕಂಟ್ರಾಕ್ಟ್‌ಗೆ ಚಾಲನೆ ನೀಡಿರುವ ಬಗ್ಗೆ ಸಂಪೂರ್ಣ ದಾಖಲೆ ಇದೆ. ಹಾಗಾಗಿ ಸರಕಾರ ರೆಡ್ಡಿಯನ್ನು ಸಚಿವ ಸ್ಥಾನದಿಂದ ಕೈಬಿಡಬೇಕು ಎಂದರು. ಜನಾರ್ದನ ರೆಡ್ಡಿಯನ್ನು ಸಂಪುಟದಿಂದ ಕೈಬಿಟ್ಟು, ಬಳ್ಳಾರಿ ಜಿಲ್ಲೆಗೆ ದಕ್ಷ ಮತ್ತು ಪ್ರಾಮಾಣಿಕ ಸಚಿವರನ್ನು ನಿಯೋಜಿಸುವಂತೆ ಸಲಹೆ ನೀಡಿದರು.
ಇವನ್ನೂ ಓದಿ