ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಐವರು ಪಕ್ಷೇತರರು ಸೇರಿ 16 ಶಾಸಕರು ಬಚಾವ್:ಸುಪ್ರೀಂ ತೀರ್ಪು (Supreme court | dissqualify | BJP | Congress | Yeddyurappa)
WD
ಆಡಳಿತಾರೂಢ ಬಿಜೆಪಿಯ 16 ಮಂದಿ ಶಾಸಕರ ಅನರ್ಹತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶುಕ್ರವಾರ ಸ್ಪೀಕರ್ ಅವರು ನೀಡಿದ್ದ ಅನರ್ಹ ಆದೇಶ ರದ್ದುಗೊಳಿಸಿ, ಹೈಕೋರ್ಟ್ ತೀರ್ಪನ್ನು ವಜಾಗೊಳಿಸಿ ಮಹತ್ವದ ಆದೇಶ ನೀಡುವ ಮೂಲಕ 16 ಮಂದಿ ತಮ್ಮ ಶಾಸಕ ಸ್ಥಾನವನ್ನು ಉಳಿಸಿಕೊಂಡಂತಾಗಿದೆ. ಆದರೆ ಆಡಳಿತಾರೂಢ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ.

ಶಾಸಕರ ಅನರ್ಹತೆ ಪ್ರಕರಣದಲ್ಲಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರು ಸರಿಯಾಗಿ ಕಾರ್ಯನಿರ್ವಹಿಸಿಲ್ಲ, ಶಾಸಕರ ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದು ಸರಿಯಾದ ಕ್ರಮವಲ್ಲ ಎಂದು ಸುಪ್ರೀಂಕೋರ್ಟ್ ನ್ಯಾಮೂರ್ತಿಗಳಾದ ಸಿರಿಯಾಕ್ ಜೋಸೆಫ್, ನ್ಯಾ.ಅಲ್ತಮಸ್ ಕಬೀರ್ ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

WD
ಐವರು ಪಕ್ಷೇತರರು ಹಾಗೂ 11 ಮಂದಿ ಬಿಜೆಪಿ ಶಾಸಕರ ಅನರ್ಹತೆ ಪ್ರಕರಣ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಹುಟ್ಟುಹಾಕಿತ್ತು. ಇದೀಗ ಸ್ಪೀಕರ್ ಕೆಜಿ ಬೋಪಯ್ಯ ಅವರು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿ, ಹೈಕೋರ್ಟ್ ಕೊಟ್ಟ ತೀರ್ಪನ್ನು ವಜಾಗೊಳಿಸಿದೆ. ಇದರಿಂದಾಗಿ 16 ಮಂದಿ ಶಾಸಕ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.

11 ಮಂದಿ ಬಿಜೆಪಿ ಶಾಸಕರಾದ ದೇವದುರ್ಗ-ಶಿವನಗೌಡ ನಾಯಕ್, ಅರಭಾವಿ-ಬಾಲಚಂದ್ರ ಜಾರಕಿಹೊಳಿ,ಕಾರವಾರ- ಆನಂದ್ ಅಸ್ನೋಟಿಕರ್, ಇಂಡಿ-ಡಾ.ಸಾರ್ವಭೌಮ ಬಗಲಿ, ಸಾಗರ-ಬೇಳೂರು ಗೋಪಾಲಕೃಷ್ಣ, ನೆಲಮಂಗಲ-ಎಂ.ವಿ.ನಾಗರಾಜ್, ಕೆಜಿಎಫ್-ವೈ.ಸಂಪಂಗಿ, ಬಸವನ ಬಾಗೇವಾಡಿ- ಎಸ್.ಕೆ.ಬೆಳ್ಳುಬ್ಬಿ, ಚಾಮರಾಜನಗರ- ಶಂಕರಲಿಂಗೇಗೌಡ, ಕೊಳ್ಳೇಗಾಲ- ನಂಜುಂಡಸ್ವಾಮಿ, ಹಾಗೂ ಕಾಗವಾಡ-ರಾಜು ಕಾಗೆ ಮುಖ್ಯಮಂತ್ರಿ ವಿರುದ್ಧ ಬಂಡಾಯ ಸಾರಿದ್ದರು.

PTI
ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆಂದು ಆರೋಪಿಸಿ ಬಂಡಾಯವೆದ್ದ 11 ಮಂದಿ ಬಿಜೆಪಿ ಶಾಸಕರು ಹಾಗೂ ಐದು ಮಂದಿ ಪಕ್ಷೇತರರು ಸರಕಾರಕ್ಕೆ ತಾವು ನೀಡಿದ್ದ ಬೆಂಬಲ ವಾಪಸ್ ಪಡೆಯುವುದಾಗಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಪತ್ರ ಕೂಡ ಬರೆದಿದ್ದರು.

ಸರಕಾರದ ವಿರುದ್ಧ ಬಂಡಾಯವೆದ್ದಿದ್ದ ಕಾರಣ 11 ಮಂದಿಯನ್ನು ವಿಧಾನಸಭಾಧ್ಯಕ್ಷ ಕೆಜಿ ಬೋಪಯ್ಯ ಅನರ್ಹಗೊಳಿಸಿ ಆದೇಶ ನೀಡಿದ್ದರು. ಸಭಾಧ್ಯಕ್ಷರ ಆದೇಶವನ್ನು ಪ್ರಶ್ನಿಸಿ 11 ಮಂದಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹೈಕೋರ್ಟ್ ಕೂಡ ಸಭಾಧ್ಯಕ್ಷ ಕೆಜಿ ಬೋಪಯ್ಯ ಅವರ ನಿರ್ಧಾರವನ್ನೇ ಎತ್ತಿ ಹಿಡಿದಿತ್ತು. ಆ ಕಾರಣಕ್ಕಾಗಿ 11 ಮಂದಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.

ಪಕ್ಷೇತರ ಚಟುವಟಿಕೆ ನಡೆಸುತ್ತಿದಾರೆ ಎಂದು ಆರೋಪಿ ಅ.10ರಂದು ವಿಧಾನಸಭಾಧ್ಯಕ್ಷ ಕೆಜಿ ಬೋಪಯ್ಯ ಐವರು ಪಕ್ಷೇತರ ಶಾಸಕರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಆದೇಶ ಹೊರಡಿಸಿದ್ದರು. ಸಭಾಧ್ಯಕ್ಷರ ಕ್ರಮವನ್ನು ಪ್ರಶ್ನಿಸಿ ಐವರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದರಲ್ಲಿ ಪಕ್ಷೇತರ ಶಾಸಕರಾದ ಶಿವರಾಜ್ ತಂಗಡಗಿ, ಡಿ.ಸುಧಾಕರ್, ಗೂಳಿ ಹಟ್ಟಿ ಶೇಖರ್, ವೆಂಕಟರಮಣಪ್ಪ ಹಾಗೂ ಪಿಎಂ ನರೇಂದ್ರಸ್ವಾಮಿ ಕೂಡ ಸೇರಿದ್ದಾರೆ.

ಈಗ ವಿಧಾನಸಭೆಯಲ್ಲಿ ಪಕ್ಷಗಳ ಬಲಾಬಲ: ಒಟ್ಟು 224 ಸ್ಥಾನ (ಮ್ಯಾಜಿಕ್ ಸಂಖ್ಯೆ 113)
ಬಿಜೆಪಿ: 105 +3
ಕಾಂಗ್ರೆಸ್: 71
ಜೆಡಿಎಸ್: 26
ಪಕ್ಷೇತರ: 06
ಸ್ಪೀಕರ್: 01
ಭಿನ್ನ ಬಿಜೆಪಿ ಶಾಸಕರು-11
ಖಾಲಿ ಸ್ಥಾನ-01 (ಕೊಪ್ಪಳದ ಸಂಗಣ್ಣ ಕರಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು)

ಸರಕಾರಕ್ಕೆ ಕಂಟಕವೇ?:
ಸ್ಪೀಕರ್ ಹಾಗೂ ಖಾಲಿ ಸ್ಥಾನ ಹೊರತುಪಡಿಸಿ ವಿಧಾನಸಭೆಯಲ್ಲಿ ಪ್ರಸಕ್ತ ಬಲಾಬಲ 222 ಅಂದರೆ ಸರಳ ಬಹುಮತಕ್ಕೆ 112 ಮ್ಯಾಜಿಕ್ ಸಂಖ್ಯೆ ಬೇಕಾಗುತ್ತದೆ. ಆಡಳಿತಾರೂಢ ಬಿಜೆಪಿ ಹೊಂದಿರುವುದು 110 ಸ್ಥಾನ ಮಾತ್ರ, ಬಹುಮತ ಸಾಬೀತಿಗೆ ಇನ್ನೂ ಎರಡು ಸ್ಥಾನಗಳ ಅಗತ್ಯವಿದೆ. ಹಾಗಾಗಿ ಇದು ಬಿಜೆಪಿಗೆ ಮತ್ತೊಂದು ಅಗ್ನಿಪರೀಕ್ಷೆಯಾಗಿದೆ.
ಇವನ್ನೂ ಓದಿ