ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯದಲ್ಲಿ ಕಾಂಗ್ರೆಸ್ ಇನ್ನೂ ಅಸ್ತಿತ್ವ ಕಳೆದುಕೊಂಡಿಲ್ಲ: ಪರಮೇಶ್ವರ್ (BJP | By poll | Election | KPCC | Congress | Parameshwar | Supreme court)
PR
16 ಮಂದಿ ಶಾಸಕರನ್ನು ಅನರ್ಹಗೊಳಿಸಿರುವ ಸ್ಪೀಕರ್ ಕೆಜಿ ಬೋಪಯ್ಯ ಅವರ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿ ಮಹತ್ವದ ತೀರ್ಪು ನೀಡಿದೆ. ಈ ತೀರ್ಪು ಸಿಎಂಗೆ ತಕ್ಕ ಪಾಠ ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಅವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇದ್ದರೆ ಸ್ಪೀಕರ್ ಮತ್ತು ಯಡಿಯೂರಪ್ಪ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಬಿಜೆಪಿಯ 11 ಮಂದಿ ಹಾಗೂ ಐವರು ಪಕ್ಷೇತರ ಶಾಸಕರ ಅನರ್ಹತೆಯನ್ನು ಸುಪ್ರೀಂಕೋರ್ಟ್ ರದ್ದುಪಡಿಸಿ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.

ಈ ತೀರ್ಪಿನಿಂದ ಬಿಜೆಪಿ ಮತ್ತು ಸ್ಪೀಕರ್‌ಗೆ ತಕ್ಕ ಪಾಠ ಕಲಿಸಿದಂತಾಗಿದೆ. ಅಲ್ಲದೇ ಇನ್ಮುಂದೆ ರೂಲಿಂಗ್ ನೀಡುವ ಸ್ಪೀಕರ್‌ಗಳು ಎಚ್ಚರವಹಿಸಬೇಕು ಎಂದರು. ಸುಪ್ರೀಂಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಸಿಎಂ ತರಾತುರಿಯಲ್ಲಿ ವಿಧಾನಸಭೆ ಅಧಿವೇಶನ ಕರೆದಿದ್ದಾರೆ. ಈ ರೀತಿ ಎಮರ್ಜೆನ್ಸಿಯಾಗಿ ಸದನ ಕರೆಯುವ ಅಗತ್ಯವಾದರು ಏನಿದೆ ಎಂದು ಗಂಭೀರವಾಗಿ ಪ್ರಶ್ನಿಸಿದರು.

ಏನು ನೂರಾರು ಜನ ಸತ್ತಿದ್ದಾರೆಯೇ? ಬಜೆಟ್ ಅಧಿವೇಶನ ಮುಗಿದಿದೆ, ಇದೀಗ ದಿಢೀರ್ ಅಂತ ಸದನ ಕರೆದಿರುವುದು ಯಾಕೆ? ತಾನು ಸರಕಾರ ಉಳಿಸಿಕೊಳ್ಳಲು ಸದನ ಕರೆದಿದ್ದೇನೆ ಅಂತ ಯಡಿಯೂರಪ್ಪ ನೇರವಾಗಿ ಹೇಳಲಿ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಂಡಿಲ್ಲ:
ರಾಜ್ಯದ ಮೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಂಡು ಗೆಲುವು ಸಾಧಿಸಿದೆ. ಹಾಗಂತ ಕಾಂಗ್ರೆಸ್ ಕಾರ್ಯಕರ್ತರು ಎದೆಗುಂದಬೇಕಾಗಿಲ್ಲ ಎಂದು ಪರಮೇಶ್ವರ್ ಹೇಳಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಂಡಿಲ್ಲ ಎಂದರು.

ಸೋಲು-ಗೆಲುವು ರಾಜಕಾರಣದಲ್ಲಿ ಸಹಜ, ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಕೂಡಲೇ ಅದನ್ನೇ ತುಂಬಾ ಮಹತ್ವ ಎಂದು ಭಾವಿಸಬೇಕಾಗಿಲ್ಲ. ನಾವು ಮೂರು ಕ್ಷೇತ್ರಗಳ ಮತಗಳಿಕೆಯಲ್ಲಿ ಕೇವಲ ಶೇ.2.5ರಷ್ಟು ಕುಸಿತ ಕಂಡಿರುವುದಾಗಿ ಸಮಜಾಯಿಷಿ ನೀಡಿದರು.
ಇವನ್ನೂ ಓದಿ