ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಸೆಮಣೆ ಏರಿ 8 ದಿನಕ್ಕೆ ಪತ್ನಿ ಕೊಂದು ಪತಿ ಪರಾರಿ! (Police | Bangalore | Marketing manager | Marriage | Murder)
ಕೇವಲ ಎಂಟು ದಿನಗಳ ಹಿಂದಷ್ಟೇ ಹಸೆಮಣೆ ಏರಿದ್ದ ಯುವತಿಯನ್ನು ಆಕೆಯ ಗಂಡನೇ ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ.

ನಗರದ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಭರತ್ ಎಂಬಾತ ಎಂಟು ದಿನಗಳ ಹಿಂದೆ ಹೇಮಾ ರೆಡ್ಡಿ (27) ಎಂಬಾಕೆಯನ್ನು ವಿವಾಹವಾಗಿದ್ದ.

ಮದುವೆಗೂ ಹೆಚ್.ಎ.ಎಲ್‌ನ ಬಸವ ನಗರದಲ್ಲಿ ವಾಸವಾಗಿದ್ದ ಭರತ್, ಮದುವೆ ನಂತರ ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಸಂದ್ರದಲ್ಲಿ ಮನೆ ಮಾಡಿದ್ದ.

ಕಳೆದ ಮೂರು ದಿನಗಳಿಂದ ಭರತ್ ಕೆಲಸಕ್ಕೆ ಬಾರದ ಕಾರಣ ಕಂಪನಿಯ ಭದ್ರತಾ ಕೆಲಸಗಾರರು ಆತನ ಮನೆಗೆ ಶನಿವಾರ ತೆರಳಿದಾಗ ಮನೆಯ ಬಾಗಿಲು ಹಾಕಿರಲಿಲ್ಲವಾಗಿತ್ತು. ಒಳ ಹೋಗಿ ನೋಡಿದಾಗ ಕೊಳೆತು ಹೋದ ಹೇಮಾ ರೆಡ್ಡಿ ಅಲಿಯಾಸ್ ರೂಪ ರೆಡ್ಡಿಯ ಶವ ಕಂಡು ಬಂದಿತ್ತು. ಕೂಡಲೇ ಈ ಬಗ್ಗೆ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ಆರೋಪಿ ಭರತ್ ಪತ್ನಿ ಹೇಮಾ ರೆಡ್ಡಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದು, ಆತನ ಪತ್ತೆಗೆ ಶೋಧ ಕಾರ್ಯ ನಡೆಸುತ್ತಿರುವುದಾಗಿ ಹೇಳಿದ್ದಾರೆ.
ಇವನ್ನೂ ಓದಿ