ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಪಕ್ಷೇತರರನ್ನ ಕ್ಯಾರೆ ಮಾಡದ ಯಡಿಯೂರಪ್ಪ; ಐವರು ತಟಸ್ಥ (BJP | Yeddyurappa | Indipendent MLA | Supreme court | Goolihuty Shekar)
PR
ರಾಜ್ಯ ರಾಜಕಾರಣದ ದಿಢೀರ್ ಬೆಳವಣಿಗೆಯಲ್ಲಿ 10 ಮಂದಿ ಶಾಸಕರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಬೆಂಬಲ ಘೋಷಿಸಿದ್ದರೆ, ಶಾಸಕ ಶಂಕರಲಿಂಗೇಗೌಡ ತಮ್ಮ ಬೆಂಬಲ ಇಲ್ಲ ಎಂದು ಪ್ರಕಟಿಸಿದ್ದಾರೆ. ಏತನ್ಮಧ್ಯೆ ಐವರು ಪಕ್ಷೇತಶಾಸಕರನ್ನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕ್ಯಾರೇ ಎನ್ನದ ಕಾರಣ ಐವರು ತಟಸ್ಥರಾಗಿ ಉಳಿಯಲು ನಿರ್ಧರಿಸಿದ್ದಾರೆ.

ಭಾನುವಾರ ನವದೆಹಲಿಯ ಖಾಸಗಿ ಹೋಟೆಲ್‌ನಲ್ಲಿ 10 ಮಂದಿ ಶಾಸಕರು ಸುದ್ದಿಗೋಷ್ಠಿ ನಡೆಸಿ, ತಾವು ಈ ಹಿಂದೆ ತಪ್ಪು ಮಾಡಿದ್ದೇವು. ಈಗ ನಮಗೆ ಬುದ್ದಿ ಬಂದಿದೆ. ಆ ನಿಟ್ಟಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಬೇಷರತ್ ಬೆಂಬಲ ನೀಡುವುದಾಗಿ ಅಧಿಕೃತವಾಗಿ ಘೋಷಿಸುವ ಮೂಲಕ ಬಿಕ್ಕಟ್ಟಿಗೆ ಅಂತ್ಯ ಹಾಡಿದ್ದರು.

ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರಕಾರ ಅಧಿಕಾರಕ್ಕೇರಲು ನೆರವಾಗಿದ್ದ ಪಕ್ಷೇತರರು ಮಾತ್ರ ಇದೀಗ ತ್ರಿಶಂಕು ಸ್ಥಿತಿ ಅನುಭವಿಸುವಂತಾಗಿದೆ. ನಾವು 16 ಮಂದಿ ಒಗ್ಗಟ್ಟಾಗಿದ್ದೇವೆ ಎಂದು ಹೇಳುತ್ತಿದ್ದ ಶಾಸಕರು ಕೂಡ ಪಕ್ಷೇತರರನ್ನು ಅವರ ಪಾಡಿಗೆ ಬಿಟ್ಟು ಬಿಟ್ಟಿದ್ದಾರೆ.

WD
ಸಿಎಂ ನಡವಳಿಕೆ ಬೇಸರ ತರಿಸಿದೆ-ಪಕ್ಷೇತರರು:
11 ಮಂದಿ ಶಾಸಕರ ಜತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತುಕತೆ ನಡೆಸಿದ್ದರು. ಆದರೆ ಪಕ್ಷೇತರರನ್ನು ಅವರು ಸಂಪರ್ಕಿಸಿಲ್ಲ ಎಂದು ಹೇಳಿರುವ ಪಕ್ಷೇತರರು, ಸಿಎಂ ನಡವಳಿಕೆಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆ ನಿಟ್ಟಿನಲ್ಲಿ ತಾವು ತಟಸ್ಥರಾಗಿ ಉಳಿಯಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.

ಸರಕಾರಕ್ಕೆ ಕೇವಲ 10 ಮಂದಿ ಶಾಸಕರು ಮಾತ್ರ ಬೆಂಬಲಿಸಿ ಪತ್ರಕ್ಕೆ ಸಹಿ ಹಾಕಿದ್ದಾರೆ. ನಾವು ಐವರು (ಗೂಳಿಹಟ್ಟಿ ಶೇಖರ್,ವರಾಜ್ ತಂಗಡಗಿ, ನರೇಂದ್ರಸ್ವಾಮಿ, ವೆಂಕಟರಮಣಪ್ಪ, ಡಿ.ಸುಧಾಕರ್) ಪಕ್ಷೇತರರು ಯಾವುದೇ ಪತ್ರಕ್ಕೆ ಸಹಿ ಹಾಕಿಲ್ಲ ಎಂದು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ.

ಸದ್ಯಕ್ಕೆ ತಟಸ್ಥರಾಗಿದ್ದೇವೆ-ಗೂಳಿಹಟ್ಟಿ ಶೇಖರ್:
ಸದ್ಯದ ಸ್ಥಿತಿಯಲ್ಲಿ ನಾವು ಬಿಜೆಪಿಗೆ ಬೆಂಬಲ ನೀಡಿಲ್ಲ. ಹಾಗಾಗಿ ನಾವು ಐವರು ತಟಸ್ಥರಾಗಿದ್ದೇವೆ. ಒಂದು ಬಾರಿ ಪತ್ರಕ್ಕೆ ಕಣ್ಮುಚ್ಚಿ ಸಹಿ ಹಾಕಿ ಸಾಕಾಗಿದೆ. ಆ ನಿಟ್ಟಿನಲ್ಲಿ ಸರಕಾರಕ್ಕೆ ಬೆಂಬಲ ನೀಡುವ ಕುರಿತು ಕಾನೂನು ತಜ್ಞರ ಜತೆ ಚರ್ಚಿಸಿ ಮುಂದಿನ ನಿರ್ಧಾರವನ್ನು ಪ್ರಕಟಿಸುವುದಾಗಿ ಪಕ್ಷೇತರ ಶಾಸಕ ಗೂಳಿಹಟ್ಟಿ ಶೇಖರ್ ತಿಳಿಸಿದ್ದಾರೆ. ರಾಜಕಾರಣದಲ್ಲಿ ನ್ಯಾಯ, ನಿಯತ್ತು ಇರುತ್ತೆ ಅಂದುಕೊಂಡಿದ್ದೆ. ಆದರೆ ಅದು ಎಷ್ಟು ಹೊಲಸು ಎಂಬುದು ಈಗ ಗೊತ್ತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇವನ್ನೂ ಓದಿ