ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಏನಾಗಲಿದೆ ಎಂಬುದೇ ನಮ್ಮ ಕುತೂಹಲ: ಕುಮಾರಸ್ವಾಮಿ (Kumaraswamy | BJP | Congress | JDS | H R Bhardwaj | President's rule | Karnataka crisis)
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಜ್ಯದ ಬೆಳವಣಿಗೆ ಕುರಿತಂತೆ ಏನು ಶಿಫಾರಸು ಮಾಡಿದ್ದಾರೆಂಬುದು ನಮಗೆ ಗೊತ್ತಿಲ್ಲ. ನಮ್ಮಿಂದ ಬೇರೇನು ಮಾಡಲು ಸಾಧ್ಯ. ಆದರೆ ಮುಂದೇನಾಗಲಿದೆ ಎಂಬ ಕುತೂಹಲ ಇರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ರಾಜ್ಯಪಾಲರು ಶಿಫಾರಸು ಮಾಡಿರುವ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರ ಖಾಸಗಿ ಚಾನೆಲ್‌ವೊಂದರ ಜತೆ ಮಾತನಾಡಿದ ಅವರು, ರಾಜ್ಯಪಾಲರು ಯಾವ ಅಂಶದ ಹಿನ್ನೆಲೆಯಲ್ಲಿ ಏನು ಶಿಫಾರಸು ಮಾಡಿದ್ದಾರೆಂಬುದು ನಮಗೇನೂ ಗೊತ್ತಿಲ್ಲ. ನಾವು ಕೇವಲ ಊಹಾಪೋಹದ ಮೇಲೆ ಮಾತನಾಡುವುದು ಸರಿಯಲ್ಲ ಎಂದರು.

ಕಾಂಗ್ರೆಸ್ ಮತ್ತು ಬಿಜೆಪಿ ರಾಷ್ಟ್ರೀಯ ಪಕ್ಷಗಳಾಗಿವೆ. ನಮ್ಮದು ಸಣ್ಣ ಪಕ್ಷ, ಹಾಗಾಗಿ ನಾವು ಮುಂದಿನ ಬೆಳವಣಿಗೆ ಕಾದು ನೋಡುವುದಷ್ಟೇ ನಮ್ಮ ಕೆಲಸ ಬಿಟ್ಟರೆ ನಮ್ಮಿಂದ ಬೇರೇನು ಮಾಡಲು ಸಾಧ್ಯ ಎಂದು ಮಾರ್ಮಿಕವಾಗಿ ನುಡಿದರು.

ಆದರೆ ಆಡಳಿತಾರೂಢ ಬಿಜೆಪಿ ಸರಕಾರ ರಾಜ್ಯಪಾಲರ ವಿರುದ್ಧ ಕೆಟ್ಟದಾಗಿ ನಡೆದುಕೊಂಡಿದೆ. ಅವರು ಸಂವಿಧಾನದ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಾರೆ. ರಾಜ್ಯಪಾಲರು ಸರಕಾರದ ಗಮನಕ್ಕೆ ತರುವ ವಿಷಯದ ಮೇಲೆ ಗಮನಹರಿಸಬೇಕೇ ವಿನಃ ಕೆಸರೆರಚಾಟ ಮಾಡುವುದು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯಪಾಲರ ನಡವಳಿಕೆಯಿಂದ ರಾಜ್ಯದ ಜನರ ಸ್ವಾಭಿಮಾನಕ್ಕೆ ಧಕ್ಕೆ ತಂದಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಖಾರವಾಗಿ ತಿರುಗೇಟು ನೀಡಿದ ಕುಮಾರಸ್ವಾಮಿ, ಬಿಜೆಪಿ ನಾಯಕರ ನಡವಳಿಕೆಯಿಂದಾಗಿಯೇ ರಾಜ್ಯದ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ ವಿನಃ, ರಾಜ್ಯಪಾಲರ ನಡವಳಿಕೆಯಿಂದ ರಾಜ್ಯದ ಜನರ ಸ್ವಾಭಿಮಾನಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಹೇಳಿದರು.
ಇವನ್ನೂ ಓದಿ