ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜ್ಯ ಸರಕಾರ ಉಳಿಯುತ್ತಾ...ಬೀಳುತ್ತಾ?: ಕ್ಷಣ, ಕ್ಷಣದ ಸುದ್ದಿ (Karnataka Crisis | BJP | Yeddyurappa | Bharadawaj | Congress)
PR
ಬಿಜೆಪಿ 11 ಮಂದಿ ಸೇರಿದಂತೆ ಹದಿನಾರು ಶಾಸಕರ ಅನರ್ಹತೆ ರದ್ದು ಮಾಡಿ ಸುಪ್ರೀಂ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ವಿಧಾನಸಭೆಯನ್ನು ಅಮಾನತಿನಲ್ಲಿಟ್ಟು ರಾಷ್ಟ್ರಪತಿ ಆಡಳಿತ ಹೇರುವಂತೆ ರಾಜ್ಯಪಾಲರು ಮಾಡಿರುವ ಶಿಫಾರಸಿಗೆ ಗ್ರೀನ್ ಸಿಗ್ನಲ್ ಕೊಡಲು ಕೇಂದ್ರ ಸರಕಾರ ಮೀನಮೇಷ ಎಣಿಸುತ್ತಿದೆ. ಏತನ್ಮಧ್ಯೆ ರಾಷ್ಟ್ರಪತಿ ಆಡಳಿತ ಹೇರುವಂತೆ ಒತ್ತಾಯಿಸಿ ಕಾಂಗ್ರೆಸ್ ಬೀದಿಗಿಳಿದಿದೆ. ಮತ್ತೊಂದೆಡೆ ರಾಜ್ಯಪಾಲರ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಒಟ್ಟಾರೆ ರಾಜ್ಯ ಸರಕಾರ ಉಳಿಯುತ್ತಾ...ಬೀಳುತ್ತಾ ಎಂಬುದರ ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ...


6-00-ರಾಜ್ಯಪಾಲರ ಶಿಫಾರಸು ತಿರಸ್ಕರಿಸಲು ರಾಷ್ಟ್ರಪತಿಗೆ ಮನವಿ
5-50-ರಾಷ್ಟ್ರಪತಿ ಎದುರು ಬಿಜೆಪಿಯ 114 ಶಾಸಕರ ಪರೇಡ್ ಅಂತ್ಯ
5-45-ಪಕ್ಷೇತರ ಶಾಸಕರಾದ ನರೇಂದ್ರ ಸ್ವಾಮಿ, ಶಿವರಾಜ್ ತಂಗಡಗಿ ರಾಜಭವನಕ್ಕೆ ಭೇಟಿ
5-40-ರಾಜಭವನಕ್ಕೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ದಿಢೀರ್ ಭೇಟಿ
4-58-ಶಾಸಕರ ಜತೆ ಬಿಜೆಪಿ ಮುಖಂಡರಾದ ಅರುಣ್ ಜೇಟ್ಲಿ, ಅಡ್ವಾಣಿ, ಸುಷ್ಮಾ, ಧರ್ಮೇಂದ್ರ ಪ್ರಧಾನ್ ಸಾಥ್
4-57-ರಾಷ್ಟ್ರಪತಿ ಭವನದ ಗೇಟ್ ನಂಬರ್ 2ರಿಂದ ಶಾಸಕರ ಪ್ರವೇಶ
4-56-ರಾಷ್ಟ್ರಪತಿ ಭವನ ತಲುಪಿದ ಮುಖ್ಯಮಂತ್ರಿ, ಬಿಜೆಪಿ ಶಾಸಕರು
4-40-ಸುಷ್ಮಾ ನಿವಾಸದಿಂದ ರಾಷ್ಟ್ರಪತಿ ಭವನಕ್ಕೆ ಪ್ರಯಾಣ
4-35-ಸುಷ್ಮಾ ಸ್ವರಾಜ್ ನಿವಾಸದತ್ತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಯಾಣ
4-30-ಕರ್ನಾಟಕ ಭವನದಿಂದ ತೆರಳಿದ ಬಿಜೆಪಿ ಶಾಸಕರು
4-00-ರಾಷ್ಟ್ರಪತಿ ಆಡಳಿತದ ಶಿಫಾರಸು ವರದಿ ವಾಪಸ್ ಪಡೆಯುವಂತೆ ಗವರ್ನರ್ ಮೇಲೆ ಬಿಜೆಪಿ ಕಾರ್ಯಕರ್ತರ ಒತ್ತಡ
3-45-ರಾಜ್ಯಪಾಲರ ವಿರುದ್ಧ ಹೋಬಳಿ ಮಟ್ಟದಲ್ಲಿ ಪ್ರತಿಭಟನೆ ನಡೆಸಲು ಬಿಜೆಪಿ ಸಜ್ಜು
3-15-ರಾಜಭವನದಿಂದ ಸಿದ್ದರಾಮಯ್ಯ, ದೇವೇಗೌಡ ನಿರ್ಗಮನ
3-10-ನಾನು ಹುಟ್ಟು ಹಬ್ಬದ ಶುಭಾಶಯ ಕೋರಲು ಬಂದಿದ್ದೆ ವಿನಃ ಬೇರೆ ಯಾವು ವಿಷಯದ ಪ್ರಸ್ತಾಪವೂ ಇಲ್ಲ-ಗೌಡ
2-10-ಕುತೂಹಲ ಹುಟ್ಟಿಸಿದ ಜೆಡಿಎಸ್ ವರಿಷ್ಠ ದೇವೇಗೌಡ, ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ರಾಜ್ಯಪಾಲರ ಭೇಟಿ
2-00-ಕಾಂಗ್ರೆಸ್, ಬಿಜೆಪಿ ಪ್ರತಿಭಟನೆ ಅಂತ್
1-05-ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಸುದ್ದಿಗೋಷ್ಠಿ-ಗವರ್ನರ್ ವಿರುದ್ಧ ವಾಗ್ದಾಳಿ
12-56-ಅಮಾನತು ಅವಧಿ ನಾಯಕತ್ವ ಬದಲಾವಣೆಗೆ ಬಳಕೆ?
12-55-ಮತ್ತೆ ತಿರುಗಿ ಬಿದ್ದ ಭಿನ್ನ ಶಾಸಕರು, ನಾಯಕತ್ವ ಬದಲಾವಣೆಗೆ ಪಟ್ಟು ಸಾಧ್ಯತೆ?
12-52-ವಿಧಾನಸಭೆ ಅಮಾನತುಗೊಳ್ಳುವ ಸಾಧ್ಯತೆ?
12-50-ರಾಜ್ಯರಾಜಕಾರಣದಲ್ಲಿ ದಿಢೀರ್ ಹೊಸ ಬೆಳವಣಿಗ
12-05-ಯಲಹಂಕ ಕೋಗಿಲು ಕ್ರಾಸ್ ಬಳಿ ರಸ್ತೆ ತಡೆ ನಡೆಸಿದ ಸಿದ್ದರಾಮಯ್ಯ ಸೇರಿ ಹಲವರ ಬಂಧ
11-50-ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಶಾಸಕರು, ಸಂಸದರು ಜೊತೆ ಸಮಾಲೋಚನ
11-45-ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರಿಂದ ಸುದ್ದಿಗೋಷ್ಠಿ
11-40-ರಾಷ್ಟ್ರಪತಿ ಆಡಳಿತ ಹೇರದಿದ್ರೆ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಗುಡ್ ಬೈ-ಮೋಟಮ್ಮ ಬೆದರಿಕ
11-05-ಬಿಜೆಪಿ ಕಾರ್ಯಕರ್ತರಿಂದ ರಾಜ್ಯಪಾಲ ಭಾರದ್ವಾಜ್ ಅವರ ಅಣಕು ಶವಸಂಸ್ಕಾ
11-00-ನಗರದ ವಿವಿಧೆಡೆ ಕಾಂಗ್ರೆಸ್ ಪ್ರತಿಭಟನೆ-ಟ್ರಾಫಿಕ್ ಜಾಮ್‌ನಿಂದ ವಾಹನ ಸವಾರರ ಪರದಾ
10-50-ಗವರ್ನರ್ ಹಠಾವೋ-ರಾಜ್ಯದ ವಿವಿಧೆಡೆ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿ ಪ್ರತಿಭಟನೆ
10-45-ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಒತ್ತಾಯ-ಕಾಂಗ್ರೆಸ್ ಪ್ರತಿಭಟನೆ ಆರಂಭ
10-40-ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ನೇತೃತ್ವದಲ್ಲಿ ಕರ್ನಾಟಕ ಭವನದಲ್ಲಿ ಶಾಸಕರು, ಸಂಸದರ ಜತೆ ಚರ್ಚೆ
10-05-ನವದೆಹಲಿಯಲ್ಲಿ ಎಲ್.ಕೆ.ಅಡ್ವಾಣಿ-ಯಡಿಯೂರಪ್ಪ ಭೇಟಿ ಅಂತ್ಯ
10-03-ರಾಜಭವನದಲ್ಲೇ ಉಳಿದುಕೊಂಡ ಗನರ್ನರ್, ಕೇಂದ್ರ ಯಾವ ಗಿಫ್ಟ್ ಕೊಡುತ್ತೆ?
10-00-ಜಟಾಪಟಿಯ ನಡುವೆಯೇ ರಾಜ್ಯಪಾಲ ಭಾರದ್ವಾಜ್ 74ನೇ ಹುಟ್ಟುಹಬ್ಬದ ಸಂಭ್ರಮ
9-55-ಬಿಜೆಪಿಯ ಎಲ್ಲಾ ಶಾಸಕರಿಂದ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಭೇಟಿಗೆ ನಿರ್ಧಾರ
9-51-ನವದೆಹಲಿಯಲ್ಲಿನ ಅಡ್ವಾಣಿ ನಿವಾಸಕ್ಕೆ ಸಿಎಂ ಭೇಟಿ
9-50-ಸಂಸದರು, ಶಾಸಕರಿಂದ ಸಂಜೆ ರಾಷ್ಟ್ರಪತಿ ಭೇಟಿ
9-48-ಕೇಂದ್ರ ಸಚಿವರಲ್ಲೇ ಭಿನ್ನಾಭಿಪ್ರಾಯ ಹಿನ್ನೆಲೆ ರಾಷ್ಟ್ರಪತಿ ಆಡಳಿತ ಅಂಕಿತಕ್ಕೆ ಹಿಂದೇಟು ಸಾಧ್ಯತೆ
9-45-ಇಂದು ಕೇಂದ್ರ ಸಚಿವ ಸಂಪುಟ ಸಭೆ ಅನುಮಾನ
9-40-ರಾಜ್ಯಪಾಲರ ಧೋರಣೆ ಖಂಡಿಸಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆಗೆ ಬಿಜೆಪಿ ಸಜ್ಜು
9-35-ರಾಷ್ಟ್ರಪತಿ ಆಡಳಿತ ಹೇರುವಂತೆ ಬೀದಿಗಿಳಿದ ಕಾಂಗ್ರೆಸ್
9-32-ರಾಘವೇಂದ್ರ ಸ್ವಾಮಿ ಮೊರೆ ಹೋದ ಸಿಎಂ ಬಿಎಸ್‌ವೈ
9-30-ಕಷ್ಟ ಎದುರಿಸುವಂತೆ ದೇವರಲ್ಲಿ ಪ್ರಾರ್ಥನೆ-ಯಡಿಯೂರಪ್ಪ
ಇವನ್ನೂ ಓದಿ