ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಣ ಯಾರದ್ದು...ಬಿಜೆಪಿ ಪರೇಡ್‌ಗೆ ಖರ್ಚು 1 ಕೋಟಿ! (BJP | Karnataka Crisis | Yeddyurappa | BJP strength | Congress | Governor)
ಹಣ ಯಾರದ್ದು...ಬಿಜೆಪಿ ಪರೇಡ್‌ಗೆ ಖರ್ಚು 1 ಕೋಟಿ!
ಬೆಂಗಳೂರು, ಗುರುವಾರ, 19 ಮೇ 2011( 10:11 IST )
ಬಿಜೆಪಿ ಶಾಸಕರ ಬಲಪ್ರದರ್ಶನ ಮಾಡುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ದೆಹಲಿಯಲ್ಲಿ ನಡೆಸಿದ ಪರೇಡ್‌ಗೆ ಖರ್ಚಾಗಿದ್ದು ಸುಮಾರು ಒಂದು ಕೋಟಿ ರೂಪಾಯಿಯಂತೆ.
ಇದೀಗ ಪ್ರಶ್ನೆ ಈ ಖರ್ಚು ಭರಿಸುವವರು ಯಾರು? ಖರ್ಚು ಮಾಡಿರುವ ಹಣ ಯಾರದು?ನಿಯಮದ ಪ್ರಕಾರ ಈ ಖರ್ಚನ್ನು ಪಕ್ಷ ಭರಿಸಬೇಕು. ಆದರೆ ಸದ್ಯಕ್ಕೆ ಈ ಖರ್ಚನ್ನು ಸರಕಾರ ಭರಿಸಿದೆ. ಮುಂದಿನ ದಿನಗಳಲ್ಲಿ ಪಕ್ಷ ಈ ಹಣವನ್ನು ಸರಕಾರಕ್ಕೆ ನೀಡಬೇಕು.
ರಾಷ್ಟ್ರಪತಿಗಳ ಮುಂದೆ ಪರೇಡ್ ನಡೆಸುವ ಸಲುವಾಗಿ 114 ಶಾಸಕರು, ವಿಧಾನಪರಿಷತ್ ಸದಸ್ಯರು, ಸಂಸದರು, ಇನ್ನಿತರರು ಸೇರಿ 200 ಮಂದಿ ಮೂರು ತಂಡಗಳಾಗಿ ದೆಹಲಿಗೆ ತೆರಳಿದ್ದರು.
ವಿಮಾನ ಪ್ರಯಾಣ, ಸೋಮವಾರ ಸಂಜೆಯಿಂದ ಬುಧವಾರ ಬೆಳಗ್ಗಿನ ಜಾವದವರೆಗೆ ಉಳಿದುಕೊಳ್ಳಲು ವ್ಯವಸ್ಥೆ, ಜತೆಗೆ ಎಲ್ಲರಿಗೂ ಗೌರವಪೂರ್ವಕ ಆತಿಥ್ಯ ಒದಗಿಸಲು ಪ್ರತಿಯೊಬ್ಬರಿಗೂ ತಲಾ ಅಂದಾಜು 50 ಸಾವಿರದವರೆಗೆ ಖರ್ಚಾಗಿದೆ.
ಮುಖ್ಯಮಂತ್ರಿ, ಸಚಿವರು ಸೇರಿದಂತೆ ಮುಖಂಡರು ವಿಮಾನದಲ್ಲಿ ಸಾಮಾನ್ಯ ದರ್ಜೆಯಲ್ಲಿ ಪ್ರಯಾಣಿಸುವುದಿಲ್ಲ. ಹೀಗಾಗಿ ಅವರಿಗೆ ಎಕ್ಸಿಕ್ಯೂಟಿವ್ ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು. ಇನ್ನು ಪ್ರಧಾನಿ ನಿವಾಸ, ರಾಷ್ಟ್ರಪತಿ ಭವನ ಸೇರಿದಂತೆ ಓಡಾಡಲು ವಾಹನದ ವ್ಯವಸ್ಥೆ ಇತ್ತು. ಇಷ್ಟೆಲ್ಲಾ ಖರ್ಚುಗಳ ಪೈಕಿ ವಿಮಾನ ಪ್ರಯಾಣದ ವೆಚ್ಚವನ್ನು ಸದ್ಯಕ್ಕೆ ಸರಕಾರವೇ ಭರಿಸಿದೆ. ಅಂತೂ ರಾಜಕೀಯ ಜಂಗೀಕುಸ್ತಿಯಲ್ಲಿ ಜನರ ತೆರಿಗೆ ಹಣವನ್ನೇ ವ್ಯಯಿಸಿದ್ದಾರೆ.