ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಯಡಿಯೂರಪ್ಪ ಜನತಾದರ್ಶನಕ್ಕೆ ಬಂದಿದ್ದು 10 ಜನ! (BJP | Yeddyurappa | Congress | Karnataka crisis | Governor | Janatha Darsh)
ರಾಜ್ಯರಾಜಕಾರಣದಲ್ಲಿ ಬಿಕ್ಕಟ್ಟಿನ ನಡುವೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮಹತ್ವಾಕಾಂಕ್ಷೆಯ ಜನತಾದರ್ಶನಕ್ಕೆ ಗುರುವಾರ ಬಂದಿದ್ದು ಕೇವಲ ಹತ್ತು ಜನ ಮಾತ್ರ!

ತಮ್ಮ 5ನೇ ಜನತಾದರ್ಶನ ನಡೆಸಲು ಗೃಹಕಚೇರಿ ಕೃಷ್ಣಾಗೆ ಆಗಮಿಸಿದ ಅವರಿಗೆ ಜನತೆಯನ್ನು ನೋಡಿ ಒಂದು ಕ್ಷಣ ಹೌಹಾರಿದರು. ಏಕೆಂದರೆ ಸಿಎಂ ಬಳಿ ಸಮಸ್ಯೆ ಹೇಳಲು ರಾಜ್ಯದ ನಾನಾ ಜಿಲ್ಲೆಗಳಿಂದ ಬಂದಿದ್ದು ಕೇವಲ ಹತ್ತು ಜನ ಮಾತ್ರ.

ಕೇವಲ ಎಂಟು ನಿಮಿಷದಲ್ಲೇ ಜನತಾದರ್ಶನ ಮುಗಿಸಿದ ಯಡಿಯೂರಪ್ಪ, ಸಮಸ್ಯೆ ಹೊತ್ತು ತಂದವರ ಮೂಗಿಗೆ ತುಪ್ಪ ಸವರಿ ಬಂದಷ್ಟೇ ಬೇಗ ಅಲ್ಲಿಂದ ನಿರ್ಗಮಿಸಿದರು. ಸೋಮವಾರದಿಂದ ಶನಿವಾರದವರೆಗೆ ಜನತಾದರ್ಶನ ನಡೆಸಲು ತೀರ್ಮಾನಿಸಿರುವ ಯಡಿಯೂರಪ್ಪ ಅವರಿಗೆ ಇಂದಿನ ಜನತಾದರ್ಶನ ಕಂಡು ಮುಜುಗರಕ್ಕೀಡಾದರು. ಕಳೆದ ಬಾರಿ 200ಕ್ಕೂ ಹೆಚ್ಚಿನ ಜನರು ಜನತಾದರ್ಶನಕ್ಕೆ ಬಂದಿದ್ದರು.

ಮೈಸೂರು, ಮಂಡ್ಯ, ದಾವಣಗೆರೆ, ಶಿವಮೊಗ್ಗ ಸೇರಿದಂತೆ ಇತರೆ ಜಿಲ್ಲೆಗಳಿಂದ ಕೇವಲ ಹತ್ತು ಮಂದಿ ಮಾತ್ರ ಬಂದಿದ್ದರು. ಹೃದ್ರೋಗ, ಕ್ಯಾನ್ಸರ್, ವೃದ್ದಾಪ್ಯ ವೇತನ, ಪಿಂಚಣಿ ಸೇರಿದಂತೆ ಮತ್ತಿತರ ಸಮಸ್ಯೆಗಳಿಗೆ ಎಂಟೇ ನಿಮಿಷದಲ್ಲಿ ಭರವಸೆ ನೀಡಿ ತೆರಳಿದ್ದರು.
ಇವನ್ನೂ ಓದಿ