ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಇನ್ಮುಂದೆ ಗವರ್ನರ್ ವಿರುದ್ಧ ಒಂದು ಶಬ್ದ ಮಾತಾಡಲ್ಲ: ಸಿಎಂ (Yeddyurappa | HR Bhardwaj | BJP | President's Rule | Karnataka Crisis)
PR
ಆಡಳಿತಾರೂಢ ಬಿಜೆಪಿ ಮತ್ತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ನಡುವಿನ ಜಂಗೀಕುಸ್ತಿ ಅಂತ್ಯಗೊಂಡ ನಂತರ ಇದೀಗ, ತಾನು ಇನ್ಮುಂದೆ ಗವರ್ನರ್ ವಿರುದ್ಧ ಒಂದೇ ಒಂದು ಶಬ್ದ ಮಾತನಾಡಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಹೇಳುವ ಮೂಲಕ ಮೃದು ಧೋರಣೆ ತಳೆದಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲದೇ ಜೂನ್ 2ರಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಮತ್ತೊಮ್ಮೆ ಬಹುಮತ ಸಾಬೀತುಪಡಿಸುವುದಿಲ್ಲ. ಅದರ ಅವಶ್ಯಕತೆ ಕೂಡ ಇಲ್ಲ ಎಂದ ಮುಖ್ಯಮಂತ್ರಿಗಳು ಆಡಳಿತಾರೂಢ ಬಿಜೆಪಿ ಸರಕಾರಕ್ಕೆ ಬೇಕಾದ ಸ್ಪಷ್ಟ ಬಹುಮತ ಇದೆ ಎಂದರು.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಬಗ್ಗೆ ಹೇಳೋದೆಲ್ಲಾ ಹೇಳಿ ಆಗಿದೆ. ಹಾಗಾಗಿ ನಾನು ಇನ್ಮುಂದೆ ಅವರ ಬಗ್ಗೆ ಒಂದು ಶಬ್ದ ಕೂಡ ಆಡಲಾರೆ. ಅವರ ಸಂವಿಧಾನಬದ್ಧ ಹುದ್ದೆಯನ್ನು ಗೌರವಿಸುತ್ತೇನೆ. ಈ ಬಗ್ಗೆ ಉಳಿದದ್ದೆಲ್ಲ ಕೇಂದ್ರದ ನಾಯಕರಿಗೆ ಬಿಟ್ಟ ವಿಚಾರವಾಗಿದೆ. ನಾನು ಈ ಮೊದಲಿಗಿಂತಲೂ ಹೆಚ್ಚು ಕೆಲಸ ಮಾಡುವ ಹುಮ್ಮಸ್ಸಿನಲ್ಲಿದ್ದೇನೆ ಎಂದು ಹೇಳಿದರು.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕೆಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಕೇಂದ್ರಕ್ಕೆ ವಿಶೇಷ ವರದಿ ರವಾನಿಸಿ ಶಿಫಾರಸು ಮಾಡಿದ ಪರಿಣಾಮ ರಾಜ್ಯ ರಾಜಕಾರಣದಲ್ಲಿ ಒಂದು ವಾರಗಳ ಕಾಲ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿತ್ತು. ಗವರ್ನರ್ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ಮಾಡಿ, ವಾಗ್ದಾಳಿ ನಡೆಸಿತ್ತು. ಅಂತೂ ಮೇ 22ರಂದು ಕೇಂದ್ರ ಸರಕಾರ ರಾಜ್ಯಪಾಲರ ವರದಿಯನ್ನು ತಿರಸ್ಕರಿಸಿ ಬಿಕ್ಕಟ್ಟಿಗೆ ಅಂತ್ಯ ಹಾಡಿತ್ತು.

ರಾಜ್ಯಪಾಲರ ವರದಿ ತಿರಸ್ಕೃವಾದ ನಂತರವೂ ಸೋಮವಾರದವರೆಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರನ್ನು ವಾಪಸ್ ಕರೆಯಿಸಿಕೊಳ್ಳಬೇಕೆಂಬ ಹೋರಾಟವನ್ನು ಮುಂದುವರಿಸುವುದಾಗಿ ಹೇಳಿದ್ದರು.

ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರನ್ನು ವಾಪಸ್ ಕರೆಯಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ಸರಕಾರ ನೀಡಿರುವ ಹೇಳಿಕೆ ಬಗ್ಗೆ ಸುದ್ದಿಗಾರರು ಗಮನ ಸೆಳೆದಾಗ, ರಾಜ್ಯಪಾಲರ ವಿಷಯವಾಗಿ ಬಿಜೆಪಿ ಕೇಂದ್ರದ ನಾಯಕರು ನೋಡಿಕೊಳ್ಳುತ್ತಾರೆ. ನಾನು ಆ ಬಗ್ಗೆ ಗವರ್ನರ್ ವಿರುದ್ಧ ಒಂದು ಮಾತು ಆಡಲ್ಲ ಎಂದರು.

ಆದರೆ ಪಕ್ಷದ ರಾಜ್ಯ ಘಟಕ ಆ ಬಗ್ಗೆ ಸ್ವತಂತ್ರವಾಗಿದ್ದು, ಅದು ಗವರ್ನರ್ ವಿರುದ್ಧ ಪ್ರತಿಭಟನೆ ನಡೆಸಲು ಮುಕ್ತವಾಗಿದೆ. ಅದು ಪಕ್ಷದ ನೆಲೆಗಟ್ಟಿನ ಸಂಘಟನಾತ್ಮಕ ಮತ್ತು ಬೇರೆ ಕಾರಣಗಳಿಗೆ ಸಂಬಂಧಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.
ಇವನ್ನೂ ಓದಿ