ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ರಾಜಕೀಯಕ್ಕೆ ಬಂದು ಕೆಲವು ತಪ್ಪು ಮಾಡಿದೆ: ಗವರ್ನರ್ (Governor | BJP | Congress | Politics | Karnataka Crisis | Yeddyurappa)
PR
'ನಾನೊಬ್ಬ ಶಿಸ್ತುಬದ್ಧ ವಕೀಲನಾಗಿದ್ದೆ. ಆದರೆ ನಾನು ರಾಜಕೀಯಕ್ಕೆ ಬಂದಿದ್ದು ಕಾಕತಾಳೀಯ. ರಾಜಕೀಯಕ್ಕೆ ಬಂದು 28 ವರ್ಷಗಳಾಯಿತು. ಅಲ್ಲದೇ ರಾಜಕೀಯಕ್ಕೆ ಬಂದು ಕೆಲವು ತಪ್ಪು ಮಾಡಿದೆ'...ಇದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರ ಆತ್ಮವಿಮರ್ಶೆಯ ನುಡಿಗಳು.

ಗುರುವಾರ ನಗರದಲ್ಲಿ ಕುವೆಂಪು ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ರಾಜ್ಯಪಾಲನಾಗಿಯೂ ನಾನು ರಾಜಭವನದಲ್ಲಿ ಕೈದಿಯಂತೆ ಬದುಕುತ್ತಿದ್ದೇನೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕುವೆಂಪು ಪ್ರಕೃತಿ ಆರಾಧಕರಾಗಿದ್ದರು, ಅಲ್ಲದೇ ಜಾತ್ಯತೀತ ತತ್ವ ಅಳವಡಿಸಿಕೊಂಡಿದ್ದರು. ನಾನು ಮೈಸೂರು ವಿಶ್ವವಿದ್ಯಾಲಯಕ್ಕೆ ಭೇಟಿ ಕೊಟ್ಟಾಗ ಅವರ ನಾಡಗೀತೆ ಬಗ್ಗೆ ತಿಳಿದುಕೊಂಡಿದ್ದೆ. ಕುವೆಂಪು ಅವರು ಗಾಂಧಿ ನಂತರದ ಸ್ಥಾನದಲ್ಲಿದ್ದಾರೆ ಎಂದು ಈ ಸಂದರ್ಭದಲ್ಲಿ ವಿಶ್ಲೇಷಿಸಿದರು.

ಇತ್ತೀಚೆಗಷ್ಟೇ 11 ಬಿಜೆಪಿ ಮತ್ತು ಐವರು ಪಕ್ಷೇತರ ಶಾಸಕರನ್ನು ಅಮಾನತುಗೊಳಿಸಿದ್ದ ಸ್ಪೀಕರ್ ಆದೇಶವನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿದ ನಂತರ, ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು. ರಾಜ್ಯಪಾಲರ ಈ ಕ್ರಮ ರಾಜ್ಯರಾಜಕಾರಣದಲ್ಲಿ ಒಂದು ವಾರಗಳ ಕಾಲ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿತ್ತು.

ಕಾಂಗ್ರೆಸ್, ಜೆಡಿಎಸ್ ರಾಷ್ಟ್ರಪತಿ ಆಡಳಿತ ಹೇರುವಂತೆ ಕೇಂದ್ರದ ಮೇಲೆ ಒತ್ತಡ ಹೇರುವ ತಂತ್ರ ಅನುಸರಿಸಿದ್ದರೆ, ಆಡಳಿತರೂಢ ಬಿಜೆಪಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಎದುರು ಶಾಸಕರ ಪರೇಡ್ ನಡೆಸಿ ಬಲ ಪ್ರದರ್ಶನದೊಂದಿಗೆ ಬಹುಮತ ತೋರಿಸಿತ್ತು. ಅಂತೂ ಕೊನೆಗೂ ಕೇಂದ್ರ ಸರಕಾರ ರಾಜ್ಯಪಾಲರ ಶಿಫಾರಸು ವರದಿಯನ್ನು ತಿರಸ್ಕರಿಸಿತ್ತು. ಆ ಮೂಲಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಮುಖಭಂಗ ಅನುಭವಿಸಿದ್ದರು.
ಇವನ್ನೂ ಓದಿ