ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸುಷ್ಮಾ ಯಾವ ವ್ಯಕ್ತಿ ಪರ ಇಲ್ಲ, ಪಕ್ಷದ ಪರ: ಈಶ್ವರಪ್ಪ (Sushama swaraj | Eshwarappa | BJP | Reddy |Court bail)
ತಾವು ಯಾವುದೇ ವ್ಯಕ್ತಿಯ ಪರವಾಗಿಲ್ಲ ಪಕ್ಷದ ಪರವಾಗಿದ್ದೇನೆ ಎಂದು ಸುಷ್ಮಾ ಸ್ವರಾಜ್‌ ಅವರು ಮೊದಲಿನಿಂದಲೂ ಹೇಳುತ್ತಿದ್ದಾರೆ. ಆದರೆ ಅವರು ರೆಡ್ಡಿ ಸಹೋದರರ ಪರ ವಕಾಲತ್ತು ವಹಿಸುತ್ತಿದ್ದಾರೆ ಎಂದು ಮಾಧ್ಯಮಗಳು ಮಾಡುತ್ತಿರುವ ವರದಿಯಿಂದಾಗಿ ತಪ್ಪು ಕಲ್ಪನೆ ಬಂದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್‌.ಈಶ್ವರಪ್ಪ ಹೇಳಿದರು.

ತಾವು ರೆಡ್ಡಿ ಸಹೋದರರ ಪರವಾಗಿ ಎಂದೂ ವಕಾಲತ್ತು ವಹಿಸಿರಲಿಲ್ಲ ಎಂದು ಬಿಜೆಪಿ ಮುಖಂಡರಾದ ಸುಷ್ಮಾಸ್ವರಾಜ್‌ ಅವರು ಔಟ್‌ಲುಕ್‌‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಈಶ್ವರಪ್ಪ, ಸುಷ್ಮಾ ಅವರದು ಮೊದಲಿಂದಲೂ ಒಂದೇ ನಿಲುವು, ಅವರು ಯಾರ ಪರವಾಗಿಯೂ ವಕಾಲತ್ತು ವಹಿಸುವುದಿಲ್ಲ ಎಂದು ಸಮಜಾಯಿಷಿ ನೀಡಿದೆ.

ಈಶ್ವರಪ್ಪಗೆ ಷರತ್ತು ಬದ್ಧ ಜಾಮೀನು:
ಬೆಂಗಳೂರು ಬಂದ್‌ಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎ.ಎಸ್‌.ಈಶ್ವರಪ್ಪ ಅವರಿಗೆ ಬೆಂಗಳೂರು ಏಳನೇ ಎಸಿಎಂಎಂ ನ್ಯಾಯಾಲಯ ಶನಿವಾರ ಷರತ್ತು ಬದ್ಧ ಜಾಮೀನು ನೀಡಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಕ್ರಮ ಆಸ್ತಿಯ ಬಗ್ಗೆ ತನಿಖೆಯಾಗಬೇಕು ಎಂದು ವಕೀಲರಾದ ಸಿರಾಜಿನ್‌ ಬಾಷಾ ಅವರು ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ರಾಜ್ಯಪಾಲರು ಸಿಎಂ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅನುಮತಿ ನೀಡಿರುವುದನ್ನು ವಿರೋಧಿಸಿ ಜ.22ರಂದು ಬಿಜೆಪಿ ಕರ್ನಾಟಕ ರಾಜ್ಯ ಬಂದ್‌ಗೆ ಕರೆ ನೀಡಿತ್ತು. ಬಂದ್‌ ಸಂದರ್ಭದಲ್ಲಿ ಅಪಾರ ಆಸ್ತಿ ಪಾಸ್ತಿಗೆ ನಷ್ಟವಾಗಿದೆ ಎಂದು ಆಪಾದಿಸಿ ವಕೀಲ ಬೋಪಣ್ಣ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಹಾಜರಾದ ಈಶ್ವರಪ್ಪ, ಈ ಕುರಿತ ಪ್ರಕರಣವನ್ನು ಹೈಕೋರ್ಟ್‌ ವಜಾಗೊಳಿಸಿರುವುದರಿಂದ ಜಾಮೀನು ಕೋರಿದರು. ಬಿಜೆಪಿ ಮಾಧ್ಯಮ ಕಾರ್ಯದರ್ಶಿ ಗಿರೀಶ್‌ ನೀಡಿದ ವೈಯಕ್ತಿಕ ಬಾಂಡ್‌ ಆಧಾರದ ಮೇಲೆ ಈಶ್ವರಪ್ಪ ಅವರಿಗೆ ಜಾಮೀನು ನೀಡಲಾಗಿದೆ. ಪ್ರಕರಣದ ವಿಚಾರಣೆಯನ್ನು ಆಗಸ್ಟ್‌ 27ಕ್ಕೆ ಮುಂದೂಡಲಾಗಿದೆ.



ಇವನ್ನೂ ಓದಿ