ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಾಬಾ ಸತ್ಯಾಗ್ರಹ ಭಂಗ;ವಿಧಾನಸಭೆಯಲ್ಲಿ ಖಂಡನಾ ನಿರ್ಣಯ (Vidhana sowdha | BJP | Yeddyurappa | Ishwarappa | Bachhe gowda)
ಯೋಗ ಗುರು ಬಾಬಾ ರಾಮದೇವ್ ಅವರ ವಿರುದ್ಧ ಜೂ.4ರಂದು ಮಧ್ಯರಾತ್ರಿ ನಡೆಸಿದ ಪೊಲೀಸ್ ಕಾರ್ಯಾಚರಣೆ ಮತ್ತು ಕೇಂದ್ರ ಸರಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ ವಿರೋಧಿಸಿ ಸೋಮವಾರ ವಿಧಾನಸಭೆಯಲ್ಲಿ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಮಂಡಿಸಿದ ನಿರ್ಣಯವನ್ನು ಸಭಾಧ್ಯಕ್ಷ ಬೋಪಯ್ಯ ಮತಕ್ಕೆ ಹಾಕಿದಾಗ ಧ್ವನಿಮತದ ಅಂಗೀಕಾರ ದೊರಕಿತು.

ನಿರ್ಣಯ ಮಂಡಿಸಿದ ಬಚ್ಚೇಗೌಡರು, ದೇಶದ ದೊಡ್ಡ ಪಿಡುಗಾಗಿರುವ ಭ್ರಷ್ಟಾಚಾರದ ವಿರುದ್ಧ ಅಹಿಂಸಾ ಮಾರ್ಗದಲ್ಲಿ ಚಳವಳಿ ನಡೆಸುತ್ತಿದ್ದ ಬಾಬಾ ರಾಮದೇವ್ ಅವರನ್ನು ಜೂನ್ 4ರ ಮಧ್ಯರಾತ್ರಿ ಪೊಲೀಸರು ಬಂಧಿಸಿದ್ದು ಹೇಯಕೃತ್ಯ. ಈ ಕೃತ್ಯವನ್ನು ಸದನ ಖಂಡಿಸುತ್ತದೆ ಹಾಗೂ ಈ ಕಾರ್ಯಾಚರಣೆ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಆಗ್ರಹಿಸುತ್ತದೆ ಎಂದು ಹೇಳಿದರು.

ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಈ ನಿರ್ಣಯವನ್ನು ಇಡೀ ದೇಶವೇ ಸ್ವಾಗತ ಮಾಡುತ್ತದೆ ಎಂಬ ಭಾವನೆ ನನ್ನದಾಗಿದೆ. ಭ್ರಷ್ಟಾಚಾರದ ವಿರುದ್ಧ ಹಾಗೂ ವಿದೇಶಗಳಲ್ಲಿನ ಕಪ್ಪುಹಣವನ್ನು ವಾಪಸ್ ತರಬೇಕೆಂಬ ಬಾಬಾ ಹಾಗೂ ಅಣ್ಣಾ ಹಜಾರೆ ಅವರ ಹೋರಾಟದ ಕುರಿತು ಪ್ರತಿಯೊಬ್ಬ ರಾಜಕಾರಣಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯ ಇದೆ ಎಂದರು.

ಇದಕ್ಕೂ ಮುನ್ನ ನಿರ್ಣಯ ಪರ ಮಾತನಾಡಿದ ಹಿರಿಯ ಸದಸ್ಯ ಕೆ.ಎಸ್.ಈಶ್ವರಪ್ಪ, ಬಾಬಾ ಅವರನ್ನು ಬಂಧಿಸಿದ ದಿನ ಕರಾಳ ದಿನ. ಹಾಗೂ ಆ ರಾತ್ರಿ ಬಾಬಾ ಅವರು ನಿದ್ರಿಸುತ್ತಿದ್ದ ವೇಳೆ ಪೊಲೀಸ್ ಕಾರ್ಯಾಚರಣೆ ನಡೆಸಿರುವುದು ಅಕ್ಷಮ್ಯ ಅಪರಾಧ ಎಂದರು. ಈ ಕಾರ್ಯಾಚರಣೆ ಜಲಿಯನ್ ವಾಲಾಬಾಗ್ ದುರಂತದಂತಿತ್ತು ಎಂದು ಹೇಳಿದರು.
ಇವನ್ನೂ ಓದಿ