ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಸೋನಿಯಾಳನ್ನು ಇಟಲಿಗೆ ಒದ್ದೋಡಿಸ್ಬೇಕು: ಮುತಾಲಿಕ್ ಕಿಡಿ (Sonia gandhi | Italy | Pramod muthalik | Congress | Ram dev | Black money)
PR
ಕಪ್ಪು ಹಣ ವಾಪಸಾತಿ ಮತ್ತು ಭ್ರಷ್ಟಾಚಾರದ ವಿರುದ್ಧ ಧ್ವನಿಎತ್ತಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಯೋಗಗುರು ಬಾಬಾ ರಾಮದೇವ್ ಅವರ ಉಪವಾಸಕ್ಕೆ ಅಡ್ಡಿಪಡಿಸಿ ಪೊಲೀಸರು ದಾಳಿ ನಡೆಸಿರುವ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಶ್ರೀರಾಮಸೇನೆ ವರಿಷ್ಠ ಪ್ರಮೋದ್ ಮುತಾಲಿಕ್, ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ಚಿಂತಾಮಣಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ ಲೇಡಿ ಜನರಲ್ ಡಾಯರ್ ಇದ್ದಂತೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳು, ಹೆಂಗಸರ ಮೇಲೆ ಲಾಠಿಚಾರ್ಜ್ ಮಾಡಿಸಿರುವುದು ಭಯಾನಕ ಕೃತ್ಯ, ಇದು ಸೋನಿಯಾ ಕುಮ್ಮಕ್ಕಿನಿಂದಲೇ ನಡೆದ ಕೃತ್ಯ ಎಂದು ಆರೋಪಿಸಿದ ಅವರು ಸೋನಿಯಾಳನ್ನು ಇಟಲಿಗೆ ಒದ್ದು ಓಡಿಸಬೇಕು ಎಂದು ಕಿಡಿಕಾರಿದರು.

ವಿದೇಶಗಳಲ್ಲಿರುವ ಕಪ್ಪು ಹಣ ವಾಪಸ್ ತರಬೇಕೆಂದು ಒತ್ತಾಯಿಸಿ ರಾಮಲೀಲಾ ಮೈದಾನದಲ್ಲಿ ಶಾಂತಿಯುತವಾಗಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಬಾಬಾ ಅವರನ್ನು ಬಂಧಿಸಿರುವುದು ಮತ್ತು ಮಕ್ಕಳು, ಹೆಂಗಸರ ಮೇಲೆ ಅಮಾನವೀಯವಾಗಿ ನಡೆದುಕೊಂಡಿರುವುದು ದೇಶದ 121 ಕೋಟಿ ಜನರು ಕ್ಷಮಿಸದ ಕೆಲಸ ಮಾಡಿರುವುದಾಗಿ ಗುಡುಗಿದರು.

ಈ ರೀತಿ ಅಮಾನವೀಯವಾಗಿ ನಡೆದುಕೊಂಡ ಘಟನೆಗೆ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಜನರಿಗೆ ಉತ್ತರ ಕೊಡಬೇಕಾಗಿದೆ ಎಂದರು. ಅಲ್ಲದೇ ಸೋನಿಯಾ ಅವರು ಲೇಡಿ ಜನರಲ್ ಡಯಾರ್‌ನಂತೆ ನಡೆದುಕೊಳ್ಳುತ್ತಿರುವುದು ಉತ್ತಮವಾದ ಬೆಳವಣಿಗೆ ಅಲ್ಲ ಎಂದರು.

ಯೋಗ ಗುರು ಬಾಬಾ ರಾಮದೇವ್ ಅವರದ್ದು ನಿಜವಾದ ಹೋರಾಟವಲ್ಲ, ರಾಜಕೀಯದ ನೆಲೆಗಾಗಿ ಗಿಮಿಕ್ ಮಾಡುತ್ತಿದ್ದಾರೆ ಎಂದು ಹೇಳಿಕೆ ನೀಡಿರುವ ಬಾಲಿವುಡ್ ಕಿಂಗ್ ಶಾರುಖ್ ಖಾನ್ ವಿರುದ್ದವೂ ಕಿಡಿಕಾರಿದ ಮುತಾಲಿಕ್, ಶಾರುಖ್ ರಾಮದೇವ್ ಅವರ ತೃಣಕ್ಕೆ ಸಮಾನ. ಖಾನ್‌ಗೆ ಸಾಧು ಸಂತರ ಬಗ್ಗೆ ಗೌರವವಿರಲಿ ಎಂದು ಸಲಹೆ ನೀಡಿದರು.
ಇವನ್ನೂ ಓದಿ