ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಭ್ರಷ್ಟತೆ ಬಗ್ಗೆ ಮಾತಾಡೋರು ಆಸ್ತಿ ಘೋಷಣೆ ಮಾಡ್ಲಿ: ಪಾಟೀಲ್ (BJP | Congress | HK Patil | Black money | Ram dev | Hunger strike)
ಭ್ರಷ್ಟತೆ ಬಗ್ಗೆ ಮಾತಾಡೋರು ಆಸ್ತಿ ಘೋಷಣೆ ಮಾಡ್ಲಿ: ಪಾಟೀಲ್
ಗದಗ, ಬುಧವಾರ, 8 ಜೂನ್ 2011( 09:47 IST )
ದೇಶದಲ್ಲಿ ಕಪ್ಪು ಹಣ ಮತ್ತು ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಪ್ರತಿಯೊಬ್ಬರೂ ಮೊದಲು ತಮ್ಮ ಆಸ್ತಿ ಘೋಷಣೆ ಮಾಡಲಿ, ನಂತರ ಅದರ ಬಗ್ಗೆ ಮಾತನಾಡುವುದು ಸೂಕ್ತ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಅವರು ಮಂಗಳವಾರ ಬೆಟಗೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಾಬಾ ರಾಮದೇವ್ ಅವರ ಆಸ್ತಿ ಪರಿಶೀಲನೆಗೆ ಕೇಂದ್ರ ಸರಕಾರ ಮುಂದಾಗಿರುವುದರ ಹಿಂದಿನ ಉದ್ದೇಶವೇನು ಎನ್ನುವ ಪ್ರಶ್ನೆಗೆ ಅವರ ಪ್ರತಿಕ್ರಿಯೆ ಇದಾಗಿತ್ತು.
ಕೇಂದ್ರ ಸರಕಾರ ಯೋಗ ಗುರು ಬಾಬಾ ರಾಮದೇವ್ ಅವರನ್ನು ಬಂಧಿಸಿರುವ ಕುರಿತು ಕೇಳಿದ ಪ್ರಶ್ನೆಗೆ, ಕೇಂದ್ರ ಸರಕಾರದ ಕ್ರಮವನ್ನು ಖಂಡಿಸುವ ಬಾಬಾ ಅವರು ರಾತ್ರಿ ವೇಷ ಬದಲಾಯಿಸಿಕೊಂಡು ಬೇರೆಡೆ ತೆರಳುವ ಅವಶ್ಯಕತೆ ಇತ್ತಾ?ಈ ರೀತಿ ಹೆದರಿ ಹೋಗುವಂತಹ ತಪ್ಪನ್ನು ಅವರೇನಾದರೂ ಮಾಡಿದ್ದರೇ ಎನ್ನುವ ಪ್ರಶ್ನೆ ಸಹಜವಾಗಿ ಸಾರ್ವಜನಿಕರಲ್ಲಿ ಮೂಡುತ್ತಿದ್ದು, ಅದಕ್ಕೆ ಅವರು ಉತ್ತರ ನೀಡಬೇಕು ಎಂದರು.
ಎನ್‌ಡಿಎ ಸರಕಾರ ಆರು ವರ್ಷ ಕಾಲ ಅಧಿಕಾರ ನಡೆಸಿದ ವೇಳೆಯಲ್ಲಿ ಈ ಕಪ್ಪು ಹಣದ ಬಗ್ಗೆ ಯಾಕೆ ಹೋರಾಟ ಮಾಡಲಿಲ್ಲ. ಅವರಿಗೆ ಈ ವಿಷಯ ಗೊತ್ತಿದ್ದರೂ ಸುಮ್ಮನೇ ಕುಳಿತದ್ದೇಕೇ ಎಂದು ಪ್ರಶ್ನಿಸಿದರು.