ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಬಿಎಂಪಿ ಆಯುಕ್ತ ಸಿದ್ದಯ್ಯಗೆ ಹೈಕೋರ್ಟ್ ವಾರಂಟ್, ದಂಡ (BBMP | High court | Yeddyurappa | Bangalore | Siddayya)
ನಿವೇಶನವೊಂದರ ವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ಖುದ್ದು ಹಾಜರಾಗದ ಬಿಬಿಎಂಪಿ ಆಯುಕ್ತ ಸಿದ್ದಯ್ಯ ಅವರಿಗೆ 25 ಸಾವಿರ ರೂ.ದಂಡ ವಿಧಿಸಿರುವ ಕೋರ್ಟ್, ಅವರ ಖುದ್ದು ಹಾಜರಿಗೆ ಆದೇಶಿಸಿ ಶುಕ್ರವಾರ ವಾರಂಟ್ ಜಾರಿಗೊಳಿಸಿದೆ.

ಸಿದ್ದಯ್ಯ ವಿರುದ್ಧ ಎ.ವೆಂಕಟೇಶಯ್ಯ ಎನ್ನುವವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ವಿ.ಜಿ.ಸಭಾಹಿತ ಹಾಗೂ ರವಿ ಮಳೀಮಠ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ. ವಿಚಾರಣೆ ವೇಳೆಗೆ ಸಿದ್ದಯ್ಯ ಅವರಾಗಲೀ, ಅವರ ಪರ ವಕೀಲರಾಗಲಿ ಹಾಜರಿಲ್ಲದ್ದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ಜುಲೈ 4ರಂದು ಹಾಜರು ಇರುವಂತೆ ಸೂಚಿಸಿದೆ.

1996ರಲ್ಲಿ ವೆಂಕಟೇಶಯ್ಯ ಅವರಿಗೆ ಕೆಂಗೇರಿ ಪುರಸಭೆ ವತಿಯಿಂದ 30-40ನಿವೇಶನ ಮಂಜೂರಾಗಿತ್ತು. ಇದಕ್ಕೆ ಸಂಪೂರ್ಣ ಹಣವನ್ನೂ ಅರ್ಜಿದಾರರು ಪಾವತಿ ಮಾಡಿದ್ದರು. ಆದರೆ ಇವರ ನಿವೇಶನ ಸೇರಿದಂತೆ ಇನ್ನೂ ಹಲವರ ನಿವೇಶನಗಳನ್ನು ಹರಾಜು ಮಾಡಲು 2004ರಲ್ಲಿ ಪಾಲಿಕೆ ಮುಂದಾಯಿತು. ಇದಕ್ಕೆ ಸರಕಾರ ಅನುಮತಿ ನೀಡದೆ ನಿವೇಶನಗಳನ್ನು ಮಾಲೀಕರಿಗೆ ಹಿಂದಿರುಗಿಸುವಂತೆ ಸೂಚಿಸಿತು. ಆದರೆ ನಿವೇಶನ ಹಿಂದಿರುಗಿಸುವಂತೆ ಅರ್ಜಿದಾರರು ಮಾಡಿಕೊಂಡ ಮನವಿಯನ್ನು 2009ರಲ್ಲಿ ಪಾಲಿಕೆ ತಿರಸ್ಕರಿಸಿತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.
ಇವನ್ನೂ ಓದಿ