ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹೌದು...ನಾನು ಸತ್ಯಹರಿಶ್ಚಂದ್ರನೇ: ಪುಟ್ಟಸ್ವಾಮಿ ಉವಾಚ (BJP | Yeddyurappa | Puttaswamy | Deve gowda | JDS | Kumaraswamy)
PR
ಹೌದು...ನಾನು ಸತ್ಯ ಹರಿಶ್ಚಂದ್ರನೇ...ಅದರಲ್ಲಿ ಅನುಮಾನ ಬೇಡ. ನನ್ನಿಂದ ಯಾವುದೇ ರೀತಿಯ ಮೋಸ, ಭ್ರಷ್ಟಾಚಾರ ನಡೆದಿಲ್ಲ. ನಾನು ನಿಯತ್ತಾಗಿದ್ದೀನಿ. ಹಾಗಿಲ್ಲದಿದ್ದರೆ ಗೌಡರ ಕುಟುಂಬ ನನ್ನ ಸುಮ್ಮನೆ ಬಿಡ್ತಿತ್ತಾ?...ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜಕೀಯ ಕಾರ್ಯದರ್ಶಿ ಪುಟ್ಟಸ್ವಾಮಿ ಸ್ಪಷ್ಟ ನುಡಿ.

ಮಾಜಿ ಶಾಸಕ ಹಾಗೂ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ಅವರ ಸಹೋದರ ಎಂ.ಡಿ.ಮೂರ್ತಿಯವರ ಪುತ್ರನ ವಿವಾಹ ಸಮಾರಂಭಕ್ಕೆ ಆಗಮಿಸಿದ್ದ ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ನನ್ನ ಕೈ, ಮನಸ್ಸು ಶುದ್ಧ. ಇಲ್ಲದಿದ್ದರೆ ಗೌಡರ ಕುಟುಂಬ ಹಾಗೂ ಸಿದ್ದರಾಮಯ್ಯನವರು ನನ್ನನ್ನು ನೆಮ್ಮದಿಯಿಂದ ಇರಲು ಬಿಡುತ್ತಿದ್ದರೇ? ನನ್ನಿಂದ ತಪ್ಪಾಗಿದೆ ಎಂದು ತಿಳಿದಿದ್ದರೆ ನನ್ನ ತಿಂದು ಮುಗಿಸುತ್ತಿದ್ದರು.

ನಾನು ಪ್ರಾಮಾಣಿಕವಾಗಿರುವುದರಿಂದ ಅವರು ನನ್ನನ್ನೇನು ಮಾಡಲಾಗುತ್ತಿಲ್ಲ. ನಾನೇನು ಪ್ರಬಲ ಜಾತಿಯವನಲ್ಲ. ಯಾವುದೋ ಸಣ್ಣ ಜಾತಿಯಿಂದ ಬಂದವನು, ಆದರೆ, ಅವರ ವಿರುದ್ಧ ಧ್ವನಿ ಎತ್ತಿದ್ದರಿಂದ ನನ್ನ ಮೇಲೆ ಕತ್ತಿ ಮಸೆಯುತ್ತಿದ್ದಾರೆ. ಅದು ಅಸಾಧ್ಯ, ಏಕೆಂದರೆ ಸರಕಾರ ಸೂಕ್ತ ಬಂದೋಬಸ್ತ್ ನೀಡಿದೆ. ಹಾಗಾಗಿ ನಾನು ಧೈರ್ಯವಾಗಿ ತಿರುಗಾಡುತ್ತಿದ್ದೇನೆ ಎಂದರು.
ಇವನ್ನೂ ಓದಿ