ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಆಣೆ ಕೈಬಿಡಿ-ಸುತ್ತೂರುಶ್ರೀ, ಪೇಜಾವರ: ಸಿಎಂ ನಿಲುವು ಏನು? (Kumaraswamy | Yeddyurappa | Lord Manjunatha | Dharmasthala | Pejawara shree)
WD
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಪ್ರಮಾಣಕ್ಕೆ ಮುಂದಾಗುವುದು ಬೇಡ. ಆ ನಿಟ್ಟಿನಲ್ಲಿ ಇಬ್ಬರೂ ಆಣೆ ಪ್ರಮಾಣವನ್ನು ಕೈಬಿಟ್ಟು, ರಾಜ್ಯದ ಅಭಿವೃದ್ಧಿಗೆ ಗಮನಕೊಡುವಂತೆ ಸುತ್ತೂರು ಮಠದ ದೇಶೀಕೇಂದ್ರ ಸ್ವಾಮೀಜಿ ಸಲಹೆ ನೀಡಿದ್ದಾರೆ.

ಮಂಗಳವಾರ ಕನಕಪುರದಲ್ಲಿ ಸಿದ್ದಗಂಗಾಶ್ರೀಗಳ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಅವರು, ಈ ರೀತಿಯ ಆಣೆ ಪ್ರಮಾಣ ಸರಿಯಲ್ಲ. ಆರೋಪಗಳ ಸತ್ಯಾಸತ್ಯತೆ ಜನತಾ ನ್ಯಾಯಾಲಯದಲ್ಲಿ ತೀರ್ಮಾನವಾಗಲಿ ಎಂದರು. ಈ ಸಂದರ್ಭದಲ್ಲಿ ಯಡಿಯೂರಪ್ಪ ಕೂಡ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯಮಂತ್ರಿಗಳು ಆಣೆ ಮಾಡಲಿಕ್ಕಾಗಿಯೇ ಧರ್ಮಸ್ಥಳಕ್ಕೆ ಹೋಗೋದು ಬೇಡ. ಗಾಜಿನ ಮನೆಯಲ್ಲಿ ಕುಳಿತು ಒಬ್ಬರ ಮೇಲೊಬ್ಬರು ಕಲ್ಲು ಎಸೆಯುವ ಸಂಸ್ಕೃತಿ ಒಳ್ಳೆಯದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಶ್ರೀಗಳು, ಆಣೆ ಪ್ರಮಾಣದ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಮತ್ತೊಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಹೇಳಿದರು.

ಆರೋಪ, ಆಣೆ-ಪ್ರಮಾಣದ ಬಗ್ಗೆ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳ ಆತ್ಮಾವಲೋಕನ ಮಾಡಿಕೊಳ್ಳಲಿ. ಹಾಗಾಗಿ ಇಬ್ಬರೂ ಧರ್ಮಸ್ಥಳಕ್ಕೆ ತೆರಳಿ ದೇವರ ದರ್ಶನ ಪಡೆಯಲಿ. ಆದರೆ ಆಣೆ ಮಾಡೋದು ಬೇಡ. ಆಣೆ ಪ್ರಮಾಣದಿಂದ ರಾಜ್ಯದ ಜನತೆಗೆ ಅಗೌರವ ತೋರಿದಂತೆ ಆಗುತ್ತದೆ. ದೇವಸ್ಥಾನದಲ್ಲಿಯೇ ರಾಜ್ಯದ ಅಭಿವೃದ್ಧಿ ಬಗ್ಗೆ ಆರೋಗ್ಯ ಪೂರ್ಣ ಚರ್ಚೆ ನಡೆಸಲಿ ಎಂದು ತಿಳಿಸಿದರು.

ಆಣೆ ಪ್ರಮಾಣ ಕೈಬಿಡಿ-ಪೇಜಾವರಶ್ರೀ ಸಲಹೆ:
ಧರ್ಮಸ್ಥಳದ ಮಂಜುನಾಥನ ಹೆಸರಿನಲ್ಲಿ ಹಾಲಿ ಮತ್ತು ಮಾಜಿ ಮುಖ್ಯಮಂತ್ರಿಗಳು ಆಣೆ-ಪ್ರಮಾಣ ಮಾಡುವುದು ಸರಿಯಲ್ಲ ಎಂದಿರುವ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಇಬ್ಬರೂ ಆಣೆ ಪ್ರಮಾಣ ಕೈಬಿಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಆಣೆ ಪ್ರಮಾಣವನ್ನು ನಾನು ತೀವ್ರವಾಗಿ ವಿರೋಧಿಸುತ್ತೇನೆ. ಹಾಗಾಗಿ ಇಬ್ಬರೂ ಗಣ್ಯರು ಆಣೆ ಮಾಡುವ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಬ್ಬರನ್ನೂ ಮಂಜುನಾಥ ಸ್ವಾಮಿ ಅನುಗ್ರಹಿಸಲಿ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

ಮಠಾಧೀಶರು ರಾಜಗುರುವಿದ್ದಂತೆ-ಸಿಎ
ಧರ್ಮಸ್ಥಳದ ಮಂಜುನಾಥನ ಸನ್ನಿಧಿಯಲ್ಲಿ ಆಣೆ ಮಾಡುವ ವಿಚಾರದ ಕುರಿತು ಸುತ್ತೂರು ಶ್ರೀ ಸೇರಿದಂತೆ ಹಲವು ಮಠಾಧೀಶರು ತೀವ್ರ ವಿರೋಧ ವ್ಯಕ್ತಪಡಿಸಿದ ನಿಟ್ಟಿನಲ್ಲಿ ಆ ಬಗ್ಗೆ ಮರು ಚಿಂತನೆ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಕನಕಪುರದಲ್ಲಿ ಸಿದ್ದಗಂಗಾಶ್ರೀಗಳ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಉಪಸ್ಥಿತರಿದ್ದ ಹಲವು ಮಠಾಧೀಶರು ಆಣೆ-ಪ್ರಮಾಣದ ಬಗ್ಗೆ ಮುಖ್ಯಮಂತ್ರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

ಇದೀಗ ಮಠಾಧೀಶರ ವಿರೋಧ ಹಿನ್ನೆಲೆಯಲ್ಲಿ ಆಣೆ ಪ್ರಮಾಣದ ಬಗ್ಗೆ ಮರುಚಿಂತನೆ ಮಾಡುವ ಅಂತಿಮ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಆದರೆ ಮುಖ್ಯಮಂತ್ರಿಗಳು ಈ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ನೀಡಿಲ್ಲ. ಮುಖ್ಯಮಂತ್ರಿಗಳು ತಮ್ಮ ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳಿ ಆಣೆ ಮಾಡುವುದು ಖಚಿತ ಎಂದು ಗೃಹ ಸಚಿವ ಆರ್.ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಯಾರು ಬರಲಿ, ಬಿಡಲಿ ನಾನಂತೂ ಧರ್ಮಸ್ಥಳಕ್ಕೆ ಹೋಗಿ ಆಣೆ ಮಾಡ್ತೇನೆ-ಎಚ್‌ಡಿಕೆ
ರಾಜಕೀಯ ಮೇಲಾಟದಲ್ಲಿ ಆಣೆ ಪ್ರಮಾಣ ಮಾಡುವುದು ಸರಿಯಲ್ಲ ಎಂದು ಮಠಾಧೀಶರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕಿವಿ ಮಾತು ಹೇಳಿ, ಆ ಬಗ್ಗೆ ಮರು ಚಿಂತನೆ ನಡೆಸುವಂತೆ ಸಲಹೆ ನೀಡಿದ್ದರು. ಏತನ್ಮಧ್ಯೆ, ಆಣೆ ಪ್ರಮಾಣಕ್ಕೆ ಮೊದಲು ಕರೆದವರು ಮುಖ್ಯಮಂತ್ರಿಗಳೇ ಹಾಗಾಗಿ ಅವರೇ ಆ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಬೇಕು. ನಾನಂತೂ ಧರ್ಮಸ್ಥಳಕ್ಕೆ ತೆರಳಿ ಆಣೆ ಮಾಡೋದು ಖಚಿತ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಧರ್ಮಸ್ಥಳಕ್ಕೆ ಆಣೆ ಮಾಡಲು ಬನ್ನಿ ಎಂದು ಮುಖ್ಯಮಂತ್ರಿಗಳೇ ಬಹಿರಂಗವಾಗಿ ಕರೆ ಕೊಟ್ಟಿದ್ದರು. ಆ ಸಂದರ್ಭದಲ್ಲಿ ನಾನು ಬೇರೆ ಯಾವುದಾದರೂ ನೆಪವೊಡ್ಡಿ ತಪ್ಪಿಸಿಕೊಂಡಿದ್ದರೆ, ನನಗೆ ಪಲಾಯನವಾದಿ ಎಂದು ಹಣೆಪಟ್ಟಿ ಕಟ್ಟುತ್ತಿದ್ದರು. ಹಾಗಾಗಿ ನಾನು ಮಾಡಿರುವ ಆರೋಪದಲ್ಲಿ, ಹೇಳಿಕೆಯಲ್ಲಿ ಯಾವುದೇ ಸುಳ್ಳಿಲ್ಲ. ನನಗೆ ಯಾವ ಭಯವೂ ಇಲ್ಲ. ಅದಕ್ಕಾಗಿ ನಾನಂತೂ ನಿಗದಿತ ದಿನಾಂಕದಂದು ಧರ್ಮಸ್ಥಳಕ್ಕೆ ತೆರಳಿ ಪ್ರಮಾಣ ಮಾಡುವುದಾಗಿ ಪುನರುಚ್ಚರಿಸಿದ್ದಾರೆ.
ಇವನ್ನೂ ಓದಿ