ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಾಲಿ-ಮಾಜಿ ಸಿಎಂ ಆಣೆ; ಕಾಂಗ್ರೆಸ್‌ ಗೋಲಿಯಾಟದ ಅಣಕ! (Yeddyurappa | Kumaraswamy | playing pebbles | Youth Congress | Dharmastala)
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡುವಿನ ಆಣೆ ಪ್ರಮಾಣವನ್ನು ರಾಜಕೀಯದ ಗೋಲಿಯಾಟದ ಮೂಲಕ ಅಣಕವಾಡಿದ ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ವಿನೂತನ ಪ್ರತಿಭಟನೆ ನಡೆಸಿ ಜನರ ಗಮನ ಸೆಳೆದರು.

ಮಹಾನಗರ ಯುವ ಕಾಂಗ್ರೆಸ್ ಕಾರ್ಯಕರ್ತರು ಆನಂದ್ ರಾವ್ ಸರ್ಕಲ್ ಸಮೀಪದ ಮಹಾತ್ಮಗಾಂಧಿ ಪ್ರತಿಮೆ ಮುಂಭಾಗ ಸೇರಿ ಗೋಲಿ ಆಟವಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಮಧ್ಯೆ ನಡೆಯುತ್ತಿುರವ ಆಣೆ ಪ್ರಮಾಣದ ಪೈಪೋಟಿಯನ್ನು ಅಣಕವಾಡಿದರು.

ಕುಮಾರಸ್ವಾಮಿ ಹಾಗೂ ಬಿ.ಎಸ್.ಯಡಿಯೂರಪ್ಪ ಅವರ ಮುಖವಾಡ ಧರಿಸಿದ ಇಬ್ಬರು ಕಾಂಗ್ರೆಸ್ ಕಾರ್ಯಕರ್ತರು ಗಾಂಧಿ ಪ್ರತಿಮೆ ಮುಂಭಾಗ ವೃತ್ತ ಹಾಕಿಕೊಂಡು ಅದರಲ್ಲಿ ಇಬ್ಬರು ಎದುರು ಬದುರು ಕುಳಿತುಕೊಂಡು ಗೋಲಿ ಹೊಡೆದು ಗೇಲಿ ಮಾಡಿದರು.ಮುಖವಾಡ ಧರಿಸಿ ಚಡ್ಡಿ ಧರಿಸಿದ ಕಾರ್ಯಕರ್ತರು ಗೋಲಿ ಹೊಡೆದು ಇತರ ಪ್ರತಿಭಟನಾ ನಿರತರಿಗಲ್ಲದೆ, ರಸ್ತೆಯಲ್ಲಿ ಹಾದು ಹೋಗುವವರಿಗೂ ಉಚಿತ ಮನರಂಜನೆ ನೀಡಿದರು.

ಭ್ರಷ್ಟಾಚಾರದ ದಾಖಲೆಗಳನ್ನು ಬಹಿರಂಗಪಡಿಸದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಧಾನಕ್ಕೆ ಆಹ್ವಾನಿಸಿದ ಆರೋಪದ ಬಗ್ಗೆ ಧರ್ಮಸ್ಥಳ ಮಂಜುನಾಥನ ಎದುರಿನಲ್ಲಿ ಪ್ರಮಾಣ ಮಾಡುವಂತೆ ಸಿಎಂ ಜಾಹೀರಾತಿನ ಮೂಲಕ ಕುಮಾರಸ್ವಾಮಿಗೆ ಬಹಿರಂಗವಾಗಿ ತಿಳಿಸಿದ್ದರು. ಆ ನಿಟ್ಟಿನಲ್ಲಿ ಹಾಲಿ ಮತ್ತು ಮಾಜಿ ಸಿಎಂಗಳು ಧರ್ಮಸ್ಥಳದ ಮಂಜುನಾಥನ ಸಮ್ಮುಖದಲ್ಲಿ ಜೂನ್ 27ರಂದು ಆಣೆ ಮಾಡಲು ಮುಹೂರ್ತ ನಿಗದಿ ಮಾಡಿದ್ದರು. ಇದೀಗ ರಾಜ್ಯರಾಜಕಾರಣದಲ್ಲಿ ಹಾಲಿ ಮತ್ತು ಮಾಜಿ ಸಿಎಂಗಳ ಆಣೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಅಲ್ಲದೇ ಮಠಾಧೀಶರೂ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವನ್ನೂ ಓದಿ