ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಹಣಕ್ಕಾಗಿ ವಿದ್ಯಾರ್ಥಿಗಳ ಹತ್ಯೆ; ಕೆಎಫ್‌ಡಿ ಸದಸ್ಯರ ಸೆರೆ (Students murder | KFD | Ashok | Hunasooru | Police | Arrest)
ಹುಣಸೂರಿನ ಇಬ್ಬರು ವಿದ್ಯಾರ್ಥಿಗಳನ್ನು ಅಪಹರಿಸಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಫೋರಂ ಫಾರ್ ಡಿಗ್ನಿಟಿ ಸಂಘಟನೆ (ಕೆಎಫ್‌ಡಿ) ಆರು ಮಂದಿ ಯುವಕರನ್ನು ವಶಕ್ಕೆ ತೆಗೆದುಕೊಂಡು ಪ್ರಕರಣವನ್ನು ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಬ್ಬಿಣ ಮತ್ತು ಸಿಮೆಂಟ್ ವ್ಯಾಪಾರಿ ಅಶೋಕ್ ಕುಮಾರ್ ಪುತ್ರ ಸುಧೀಂದ್ರ ಹಾಗೂ ಪ್ರಾವಿಷನ್ ಸ್ಟೋರ್ ಮಾಲೀಕ ಶ್ರೀನಾಥ್ ಪುತ್ರ ವಿಘ್ನೇಶ್ ಅವರನ್ನು ಜೂನ್ 8ರಂದು ಅಪಹರಿಸಿ ಐದು ಕೋಟಿ ರೂಪಾಯಿ ಒತ್ತೆ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಆದರೆ ಜೂನ್ 12ರಂದು ಚಿಕ್ಕಬಳ್ಳಾಪುರದ ಅಗಲಗುರ್ಕಿ ಬಳಿ ಸುಧೀಂದ್ರ ಮತ್ತು ವಿಘ್ನೇಶ್ ಶವಗಳು ಪತ್ತೆಯಾಗಿತ್ತು. ಆ ನಿಟ್ಟಿನಲ್ಲಿ ಆರೋಪಿಗಳ ಪತ್ತೆಗಾಗಿ ಸರಕಾರ 14 ವಿಶೇಷ ತಂಡಗಳನ್ನು ರಚಿಸಿತ್ತು.

ಪ್ರಕರಣದ ಕುರಿತು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವ ಆರ್.ಅಶೋಕ್, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಫ್‌ಡಿ ಸಂಘಟನೆಯ ಆದಿಲ್ ಪಾಶ್, ಕೌಸರ್, ಅಮಿನ್, ರೆಹಮಾನ್, ಸಬೀರ್ ಅಹ್ಮದ್, ಅಸಾವುರ್ ಖಾನ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

ಕೆಎಫ್‌ಡಿ ಸಂಘಟನೆಗೆ ಹಣ ಸಂಗ್ರಹಿಸುವ ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಅಪಹರಿಸಿದ್ದರು. ಆದರೆ ಒತ್ತೆ ಹಣ ದೊರೆಯದ ಆಕ್ರೋಶದಲ್ಲಿ ಅವರಿಬ್ಬರನ್ನೂ ಹತ್ಯೆಗೈದಿರುವುದಾಗಿ ಹೇಳಿದರು. ತಾವು ಕೆಎಫ್‌ಡಿ ಸಂಘಟನೆ ಸಕ್ರಿಯ ಸದಸ್ಯರು ಎಂಬುದನ್ನು ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿರುವುದಾಗಿ ವಿವರಿಸಿದರು.

ಅಷ್ಟೇ ಅಲ್ಲ ಬಂಧಿತರು ಈ ಮೊದಲು ಮೈಸೂರು ಕೋಮುಗಲಭೆಯಲ್ಲೂ ಭಾಗವಹಿಸಿದ್ದರು. ಇವರ ಮೇಲೆ ತಲಾ ನಾಲ್ಕು ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ಇತ್ತೀಚೆಗಷ್ಟೇ ಗುಲ್ಬರ್ಗಾ ಜೈಲಿನಿಂದ ಬಿಡುಗಡೆಗೊಂಡಿದ್ದರು ಎಂದರು. ಈ ಮೊದಲು ಎರಡು ಬಾರಿ ವಿದ್ಯಾರ್ಥಿಯನ್ನು ಅಪಹರಿಸಿ ಯತ್ನಿಸಿ ವಿಫಲರಾಗಿದ್ದರು. ಆದರೆ ಇದೀಗ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಇವನ್ನೂ ಓದಿ