ನಗರದಲ್ಲಿರುವ ಸಾವಿರಾರು ಜನರಿಗೆ ಕೋಟ್ಯಾಂತರ ರೂಪಾಯಿಗಳ ಟೋಪಿ ಹಾಕಿದ್ದ ವಂಚಕಿ ಉಮಾದೇವಿಯನ್ನು, ತಮಿಳುನಾಡಿನ ಉಟಿಯಲ್ಲಿ ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನೆರೆಹೊರೆಯಲ್ಲಿದ್ದ ಜನತೆಗೆ ತಮ್ಮಲ್ಲಿ ಹೂಡಿಕೆ ಮಾಡಿದಲ್ಲಿ ಹೆಚ್ಚಿನ ಹಣ ಮರಳಿಸುವುದಾಗಿ ನಂಬಿಸಿ, ಸುಮಾರು 165 ಕೋಟಿ ರೂಪಾಯಿಗಳಿಗೂ ಮೀರಿ ಹೆಚ್ಚಿನ ಹಣವನ್ನು ವಂಚಿಸಿದ್ದಾಳೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಉಮಾದೇವಿಯನ್ನು ನಗರಕ್ಕೆ ಕರೆತರಲಾಗಿದ್ದು, ಕೆಂಗೇರಿ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಯಿಂದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.