ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆಯ ಮೇರೆಗೆ, ಕೆಲ ಸಚಿವರು ಕುಮಾರಸ್ವಾಮಿಯವರೊಂದಿಗೆ ಸಂಧಾನಕ್ಕಾಗಿ ಫ್ರೀಡಂ ಪಾರ್ಕ್‌ಗೆ ತೆರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ಆಸ್ತಿ ತನಿಖೆ ನಡೆಸುವಂತೆ ಒತ್ತಾಯಿಸಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನಡೆಸುತ್ತಿರುವ ನಿರಶನಕ್ಕೆ ಬೆಂಬಲಿಸಿ, ಮೈಸೂರು ಶಿವಮೊಗ್ಗ ಮತ್ತು ಗುಲ್ಬರ್ಗ ಜಿಲ್ಲೆಗಳ ಜೆಡಿಎಸ್ ಕಾರ್ಯಕರ್ತರು ಧರಣಿಯನ್ನು ಆರಂಭಿಸಿದ್ದಾರೆ.
ಶಿವಮೊಗ್ಗದಲ್ಲಿ ಧರಣಿ ನಡೆಸುತ್ತಿದ್ದ 50 ಜೆಡಿಎಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ ಎಂದು ಪಕ್ಷದ ವಕ್ತಾರರು ತಿಳಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಸರಕಾರದ ವಿರುದ್ಧ ಸಮಸ್ಯೆಗಳಿದ್ದಲ್ಲಿ ಸದನದಲ್ಲಿ ಚರ್ಚಿಸಬೇಕಾಗಿತ್ತು. ನಿರಶನ ನಡೆಸುವ ಮೂಲಕ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದಲ್ಲಿ, ಜನತೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ಶ್ರೀರಾಮಲು ಹೇಳಿದ್ದಾರೆ.
ನಿರಶನ ಆರಂಭಿಸಿದ ಕುಮಾರಸ್ವಾಮಿ. ತರಾಸು ಅವರ ಚಕ್ರೇಶ್ವರಿ, ಬುದ್ಧ, ಪೆರಿಯಾರ್, ಪೈಗಂಬರ್, ಲಾಲಾ ಬಹದ್ದೂರ್ ಶಾಸ್ತ್ರಿಯವರ 'ರಾಜಕಾರಣ' ಮತ್ತು ಲಂಕೇಶರ ಟೀಕೆ-ಟಿಪ್ಪಣಿ ಪುಸ್ತಕಗಳ ಅದ್ಯಯನದಲ್ಲಿ ತೊಡಗಿದ್ದಾರೆ.