ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಜಾರ್ಜ್ ಶೀಟ್ ಪದ ಕೈಬಿಡಲು ಸರಕಾರ ಸಮ್ಮತಿ (Kumaraswamy | Yaddyurappa | Ashok | Karnatka)
ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಮಾಡಿರುವ ಆರೋಪಗಳನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಬೇಡಿಕೆಯೊಂದಿಗೆ ಆಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ್ದ ಜೆಡಿಎಸ್ ರಾಜ್ಯ ಘಟದ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಮನವೊಳಿಸುವಲ್ಲಿ ಸರಕಾರ ಪ್ರಯತ್ನ ಆರಂಭಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ


ಎಚ್‌ಡಿಕೆ ನಿರಶನ ಸಮರವು ಎರಡನೇ ದಿನಕ್ಕೆ ಕಾಲಿಟ್ಟ ಹಿನ್ನಲೆಯಲ್ಲಿ ಮನವೊಳಿಕೆಗೆ ಮೂವರು ಸಚಿವರ ಪ್ರಯತ್ನ ಆರಂಭಿಸಿದ್ದು, ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಮಾಜಿ ಸಿಎಂ ಜತೆ ಚರ್ಚೆ ನಡೆಸಿದ್ದಾರೆ.

ಭಾನುವಾರ ಬೆಳಗ್ಗೆಯೇ ಫ್ರೀಡಂಪಾರ್ಕ್‌ಗೆ ಭೇಟಿ ನೀಡಿದ ಗೃಹ ಸಚಿವ ಆರ್. ಅಶೋಕ್, ವಿ. ಸೋಮಣ್ಣ ಹಾಗೂ. ಬಿ. ಎನ್. ಬಚ್ಚೇಗೌಡ ಆರೋಗ್ಯ ದೃಷ್ಟಿಯಿಂದ ತಮ್ಮ ನಿರಶನ ಕೈಬಿಡುವಂತೆ ಎಚ್‌ಡಿಕೆಗೆ ಸಲಹೆ ಮಾಡಿದರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!


'ಜಾರ್ಜ್‌ಶೀಟ್ ಅಲ್ಲ ಆಪಾದನೆ'
ಈ ನಡುವೆ ಕುಮಾರಸ್ವಾಮಿ ವಿರುದ್ಧ ಬಿಡುಗಡೆ ಮಾಡಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದ್ದ 'ಜಾರ್ಜ್ ಶೀಟ್' ಎಂಬ ಪದ ಬದಲು ಕೇವಲ 'ಆರೋಪ' ಮಾತ್ರ ಎಂದು ಸೀಮಿತಗೊಳಿಸಲು ಸರಕಾರ ಒಪ್ಪಿಗೆ ಸೂಚಿಸಿದೆ. ಆ ಮೂಲಕ ಬಿಗಿ ಪಟ್ಟು ಹಿಡಿದಿರುವ ಕುಮಾರಸ್ವಾಮಿ ಮನವೊಳಿಕೆಗೆ ಸರಕಾರ ಮುಂದಾಗಿದೆ.

ಸರ್ಕಾರ ಪತ್ರಕ್ಕೆ ಉತ್ತರವಾಗಿ ಕುಮಾರಸ್ವಾಮಿ ಒಂದು ಗಂಟೆ ಅವಧಿಯನ್ನು ಕೇಳಿದ್ದಾರೆ. ಹೀಗಾಗಿ ಸರಕಾರದ ಸಂಧಾನ ಬಹುತೇಕ ಯಶಸ್ವಿಯಾಗುವ ಸಾಧ್ಯತೆಗಳು ಕಂಡುಬರುತ್ತಿವೆ. ಹೀಗಿದ್ದರೂ ಅಕ್ರಮ ಅಸ್ತಿ ಬಗ್ಗೆ ಸಿಬಿಐ ತನಿಖೆ ಇಲ್ಲ ಎಂಬುದು ಸರಕಾರದ ನಿಲುವಾಗಿದೆ.

ಮಾತುಕತೆಯ ನಂತರ ಮಾತನಾಡಿದ ಆರ್. ಅಶೋಕ್, ಆರೋಗ್ಯ ಖಾಲಜಿ ವಹಿಸಿ ನಿರಶನ ಕೈಬಿಡುವಂತೆ ಮನವಿ ಮಾಡಲಾಗಿದೆ ಎಂದಿದ್ದಾರೆ. ಆಪಾದನೆಗಳು ರಾಜಕೀಯದಲ್ಲಿ ಸಹಜ. ಸವಾಲು, ಆರೋಪಗಳನ್ನು ರಾಜಕೀಯವಾಗಿ ಸ್ವೀಕರಿಸಿ ಎಂದು ಸಲಹೆ ಮಾಡಿದ್ದಾರೆ.

ಮಾಜಿ ಸಿಎಂ ಆರೋಗ್ಯ ಬಗ್ಗೆ ನಮಗೆ ಕಳಕಳಿ ಇದೆ. ಉಳಿದ ಕ್ರಮಗಳನ್ನು ಸಿಎಂ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂಬ ಭರವಸೆ ನೀಡಲಾಗಿದೆ. ಇದಕ್ಕವರು ಒಂದು ಗಂಟೆ ಟೈಂ ಕೇಳಿದ್ದಾರೆ ಎಂದು ಅಶೋಕ್ ಸ್ಪಷ್ಟಪಡಿಸಿದ್ದಾರೆ.

ಒಟ್ಟಿನಲ್ಲಿ ತಮ್ಮ ಹಾಗೂ ಕುಟುಂಬದ ವಿರುದ್ಧ ರಾಜ್ಯ ಸರಕಾರ ಮಾಡಲಾಗಿದ್ದ 1,500 ಕೋಟಿ ರೂಪಾಯಿಗಳ ಆಪಾದನೆ ತನಿಖೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಬಲವಾದ ಬೇಡಿಕೆಯೊಂದಿಗೆ ಶನಿವಾರದಿಂದ ಆಮರಣಾಂತ ನಿರಶನ ಆರಂಭಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಇದೀಗ ತಮ್ಮ ಸತ್ಯಾಗ್ರಹ ಕೈಬಿಡುತ್ತಾರೋ ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.
ಇವನ್ನೂ ಓದಿ