ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ತಾಯಿ ಹಾಗೂ ಪಕ್ಷದ ಒತ್ತಡಕ್ಕೆ ಮಣಿದ ಎಚ್‌ಡಿಕೆ ನಿರಶನ ಅಂತ್ಯ (Kumaraswamy | JDS | Indefinite fast | Yaddyurappa)
ತಮ್ಮ ಹಾಗೂ ತಮ್ಮ ಕುಟುಂಬದ ವಿರುದ್ಧ ಮಾಡಿದ್ದ ಅಕ್ರಮ ಅಸ್ತಿ ಆರೋಪಗಳನ್ನು ಸರಕಾರ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಬೇಡಿಕೆಯೊಂದಿಗೆ ಕಳೆದೊಂದು ದಿನದಿಂದ ಆಮರಣ ನಿರಶನ ನಿರತರಾಗಿದ್ದ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಕೊನೆಗೂ ತಾಯಿ ಹಾಗೂ ಪಕ್ಷದ ಕಾರ್ಯಕರ್ತರ ಒತ್ತಡಕ್ಕೆ ಮಣಿದು ಉಪವಾಸ ಸತ್ಯಾಗ್ರಹ ಕೈಬಿಡಲು ನಿರ್ಧರಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಹಿರಿಯ ಸಾಹಿತಿ ಯು. ಆರ್. ಅನಂತಮೂರ್ತಿ ಅವರಿಂದ ಜ್ಯೂಸ್ ಕುಡಿಯುವ ಮೂಲಕ ಕುಮಾರಸ್ವಾಮಿ ತಮ್ಮ ಆಮರಣ ನಿರಶನಕ್ಕೆ ಅಂತ್ಯ ಹಾಡಿದರು. ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಯಿ ಹಾಗೂ ಹಿರಿಯರ ಮಾತುಗಳಿಗೆ ಬೆಲೆ ಕೊಟ್ಟು ನಿರಶನ ಅಂತ್ಯಗೊಳಿಸುವುದಾಗಿ ತಿಳಿಸಿದರು.

ರಾಜ್ಯದ ಹಿತದೃಷ್ಟಿಯಿಂದ ನಿರಶನದಲ್ಲಿ ಕೂರುವುದು ಸರಿಯಲ್ಲ. ಜನತೆಯ ಹಲವಾರು ರೀತಿಯ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿರುವ ಜವಾಬ್ದಾರಿ ನನಗಿದ್ದು ಅದಕ್ಕಾಗಿ ಹೋರಾಟ ಮುಂದುವರಿಸಬೇಕಾಗಿದೆ. ಈ ಹಿನ್ನಲೆಯಲ್ಲಿ ಸತ್ಯಾಗ್ರಹ ಕೈಬಿಡುವಂತೆ ಹಿರಿಯ ಸಾಹಿತಿಗಳು ಅನಂತಮೂರ್ತಿ ಮನವರಿಕೆ ಮಾಡಿದ್ದಾರೆ ಎಂದರು.

ಬೆಳಗ್ಗೆ ತಾಯಿಯವರು ಸಹ ಮಾತನಾಡಿದ್ದರು. ಅವರಲ್ಲಿಯೂ ದುಃಖ ಮಡುಗಟ್ಟಿತ್ತು. ತಾಯಿಯ ನೋವಿಗೆ ಮಣಿದು, ಹಿರಿಯ ಮಾತುಗಳಿಗೆ ಬೆಲೆ ಕೊಡುವುದು ನನ್ನ ಜವಾಬ್ದಾರಿ ಆಗಿದೆ. ಹೀಗಾಗಿ ನಿರಶನ ಕೈಬಿಡುವುದಾಗಿ ತಿಳಿಸಿದರು.

ನನ್ನ ಈ ಹೋರಾಟಕ್ಕೆ ರಾಜ್ಯದ ಲಕ್ಷ ಲಕ್ಷಾಂತರ ಕಾರ್ಯಕರ್ತರು ಬೆಂಬಲ ನೀಡಿದ್ದು, ಶಾಂತಿಯುತವಾಗಿ ಸಹಕರಿಸಿದ್ದಾರೆ. ಹೀಗಾಗಿ ಹೋರಾಟಕ್ಕೆ ಸಹಕರಿಸಿದ್ದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ವೈಯಕ್ತಿಕವಾಗಿ ನಿರಶನ ಬಯಸಿದ್ದೆ...
ಇದೇ ಸಂದರ್ಭದಲ್ಲಿ ತಮ್ಮ ನಿಲುವು ಖಚಿತಪಡಿಸಿದ ಮಾಜಿ ಸಿಎಂ ಕುಮಾರಸ್ವಾಮಿ, ವೈಯಕ್ತಿಕವಾಗಿ ಸತ್ಯಾಗ್ರಹ ಮುಂದುವರಿಸಲು ಬಯಸಿರುವುದಾಗಿ ತಿಳಿಸಿದರು.

ರಾಜ್ಯ ಸಿಎಂಗೆ ಹೇಳ ಬಯಸುತ್ತೇನೆಂದರೆ, ನೀವು ಏನು ಕ್ಷುಲಕ ಆರೋಪಗಳನ್ನು ಮಾಡಿದ್ದೀರಾ, ಇದು ವರ್ಚಸ್ಸಿಗೆ ತಕ್ಕದ್ದಲ್ಲ. ಹಾಗೇನಿದ್ದರೂ ನೀವೇ ಅಧಿಕಾರದಲ್ಲಿದ್ದೀರಾ, ಮತ್ತೆ ಯಾಕಾಗಿ ತನಿಖೆಗೆ ಹಿಂದೇಟು ಹಾಕುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಯಡಿಯೂರಪ್ಪ ಮಾಡಿರುವ ಆರೋಪದ ಹಿನ್ನಲೆಯಲ್ಲಿ ಜನತೆಗೆ ಸತ್ಯಾಸತ್ಯತೆಯನ್ನು ಮನವರಿಕೆ ಮಾಡಬೇಕಾಗಿರುವುದು ನನ್ನ ಕತ್ಯರ್ವವಾಗಿತ್ತು. ಈ ಸಂದರ್ಭದಲ್ಲಿ ನನ್ನ ನಿಲುವನ್ನು ಜನತೆಯ ಮುಂದೆ ತಲುಪಿಸಿದ ಮಾಧ್ಯಮದ ಸ್ನೇಹಿತರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ರಕ್ಷಣಾ ಇಲಾಖೆಯ ಅಧಿಕಾರಿಗಳು ಸಹ ಪ್ರತಿಭಟನೆಗೆ ಸರಿಯಾದ ಅವಕಾಶ ಮಾಡಿ ಕೊಟ್ಟಿದ್ದಾರೆ. ಅಲ್ಲದೆ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ರಾಜ್ಯದ ಪಕ್ಷದ ಕಾರ್ಯಕರ್ತರಿಗೆ ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದರು.

ವೆಬ್‌ದುನಿಯಾ ಓದುಗರೇ! ಕಾಮೆಂಟ್ ಮಾಡೋ ಮುನ್ನ ಇಲ್ಲೊಮ್ಮೆ ಓದಿ ನೋಡಿ!
ಇವನ್ನೂ ಓದಿ