ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗವರ್ನರ್-ಸಿಎಂ ಕಾನೂನು ಸಮರ:ಪೂರ್ಣಪೀಠಕ್ಕೆ ಪ್ರಕರಣ ವರ್ಗ (BJP | Governor | Yeddyurappa | High court | Land Scam | Congress)
PR
ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಭೂಹಗರಣಕ್ಕೆ ಸಂಬಂಧಿಸಿದಂತೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ಏಕಸದಸ್ಯ ಪೀಠ ಪ್ರಕರಣವನ್ನು ಪೂರ್ಣಪೀಠಕ್ಕೆ ವರ್ಗಾಯಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರ ಏಕಸದಸ್ಯ ಪೀಠ ಖ್ಯಾತ ವಕೀಲರಾದ ಪಿ.ಪಿ.ರಾವ್ ಮತ್ತು ರಾಮ್ ಜೇಠ್ಮಲಾನಿ ಅವರ ರಂಗೇರಿದ ವಾದ-ಪ್ರತಿವಾದವನ್ನು ಸುದೀರ್ಘವಾಗಿ ಆಲಿಸಿದ ನಂತರ, ಈ ಪ್ರಕರಣದಲ್ಲಿ ಗಂಭೀರವಾದ ಸಾಂವಿಧಾನಿಕ ಪ್ರಶ್ನೆ ಉದ್ಭವಿಸಿದೆ. ಹೀಗಾಗಿ, ಸುಪ್ರೀಂಕೋರ್ಟ್‌ನ ಹಿಂದಿನ ಕೆಲ ತೀರ್ಪುಗಳನ್ವಯ ವಿಚಾರಣೆಯನ್ನು ಉಚ್ಛನ್ಯಾಯಮೂರ್ತಿಯನ್ನೊಳಗೊಂಡ ವಿಸ್ತ್ರತ ಪೀಠಕ್ಕೆ ವರ್ಗಾಯಿಸಬೇಕಾಗಿದೆ ಎಂದು ತೀರ್ಪು ಪ್ರಕಟಿಸಿದರು.

ಉಚ್ಛ ನ್ಯಾಯಮೂರ್ತಿಗಳು ಈ ಕುರಿತು ಹೆಚ್ಚು ನ್ಯಾಯಾಧೀಶರನ್ನೊಳಗೊಂಡ ವಿಸ್ತ್ರತ ಪೀಠ ಈ ಬಗ್ಗೆ ಅಂತಿಮ ತೀರ್ಪು ನೀಡಲಿದೆ ಎಂದು ಹೇಳಿದರು.

ಸೋಮವಾರ ಕಿಕ್ಕಿರಿದು ತುಂಬಿದ್ದ ಹೈಕೋರ್ಟ್‌ನ ಹಾಲ್ 23ರಲ್ಲಿ 12ಗಂಟೆಗೆ ಆರಂಭವಾದ ವಿಚಾರಣೆ ಸುಮಾರು ಒಂದೂವರೆ ಗಂಟೆ ಕಾಲ ರಾಜ್ಯಪಾಲರ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾಡಿದ್ದ ಆರೋಪಗಳ ಅರ್ಜಿಯ ಪರ ವಾದ ಮಂಡಿಸಿದ ರಾಮ್ ಜೇಠ್ಮಲಾನಿ ಮೂರು ಆಧಾರಗಳ ಮೇಲೆ ರಾಜ್ಯಪಾಲರ ಕ್ರಮ ಆಧಾರ ರಹಿತ ಎಂದು ವಾದಿಸಿದರು.

ಮೊದಲನೆಯದಾಗಿ ರಾಜ್ಯಪಾಲರು ಪಕ್ಷಪಾತಿಯಾಗಿ ವರ್ತಿಸಿದ್ದಾರೆ. ಎರಡನೇಯದಾಗಿ ರಾಜ್ಯಪಾಲರು ಸಚಿವ ಸಂಪುಟದ ತೀರ್ಮಾನವನ್ನು ಅಲ್ಲಗಳೆದಿದ್ದಾರೆ. ಮೂರನೇಯದಾಗಿ ರಾಜ್ಯಪಾಲರು ಗೌರವಾನ್ವಿತ ಸ್ಥಾನದಲ್ಲಿರುವಾಗ ತಮ್ಮ ವಿವೇಚನಾ ಶಕ್ತಿಯನ್ನು ಸರಿಯಾಗಿ ಬಳಕೆ ಮಾಡಿಲ್ಲ ಎಂದು ವಾದ ಮಂಡಿಸಿದರು.

ಅರ್ಜಿದಾರ ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಸಲ್ಲಿಸಿರುವ ಅರ್ಜಿಯಲ್ಲಿ ಮತ್ತು 15 ಆರೋಪಗಳನ್ನು ಮಾಡಿದ್ದು, ಇದರಲ್ಲಿ 13 ಆರೋಪಗಳಲ್ಲಿ ಮುಖ್ಯಮಂತ್ರಿಗಳು ಅವ್ಯವಹಾರದಲ್ಲಿ ನಡೆದ ಲಾಭದ ಪಾಲುದಾರರಾಗಿದ್ದಾರೆ ಎಂದು ಆರೋಪಿಸಲಾಗಿದೆ. ಎರಡು ಪ್ರಕರಣಗಳಲ್ಲಿ ಮಾತ್ರ ನೇರವಾಗಿ ಆರೋಪಿಸಲಾಗಿದೆ ಎಂದು ವಾದಿಸಿದ್ದು, ಇದು ಸಂಪೂರ್ಣ ನಿರ್ಲಕ್ಷ್ಯದ ಕ್ರಮವಾಗಿದೆ ಎಂದು ಜೇಠ್ಮಲಾನಿ ಹೇಳಿದರು.

ಇದಕ್ಕೆ ಪ್ರತಿಯಾಗಿ ವಾದ ಮಂಡಿಸಿದ ವಕೀಲರಾದ ಸಿರಾಜಿನ್ ಬಾಷಾ ಮತ್ತು ಬಾಲರಾಜ್ ಪರ ಹಿರಿಯ ವಕೀಲ ಪಿ.ಪಿ.ರಾವ್ ಮುಖ್ಯಮಂತ್ರಿಗಳ ಈ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದರು. ರಾಜ್ಯಪಾಲರು ಸಚಿವ ಸಂಪುಟ ತೀರ್ಮಾನವನ್ನು ಪಾಲಿಸಬೇಕು. ಆದರೆ ಸಂಪುಟದ ಮುಖ್ಯಸ್ಥರು ಅಕ್ರಮವೆಸಗಿದಾಗ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟಾಗ ರಾಜ್ಯಪಾಲರು ತಮ್ಮ ವಿವೇಚನಾ ಶಕ್ತಿಯನ್ನು ಬಳಸಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ವಾದಿಸಿದ ರಾವ್, ಆರೋಪಗಳು ಲೋಕಾಯುಕ್ತ ತನಿಖೆಯಲ್ಲಿರುವಾಗ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದೆಂದು ಸಂಪುಟ ತೀರ್ಮಾನ ಮಾಡಿರುವುದು ಬೇಜವಾಬ್ದಾರಿ ಕ್ರಮ ಎಂದು ವಾದಿಸಿದರು.
ಇವನ್ನೂ ಓದಿ