ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಣಿ ವರದಿ ಸೋರಿಕೆ; ಸುದ್ದಿಗೋಷ್ಠಿಯಲ್ಲಿ ಕಣ್ಣೀರಿಟ್ಟ ನ್ಯಾ.ಹೆಗ್ಡೆ (Lokayuktha | Santhosh hegde | Illigal mining | BJP | Yeddyurappa | Congress)
PR
ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗೋ ಮುನ್ನವೇ ಸೋರಿಕೆಯಾಗಿರುವುದರಿಂದ ಮನನೊಂದ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಕಣ್ಣೀರಿಟ್ಟ ಪ್ರಸಂಗ ಗುರುವಾರ ನಡೆಯಿತು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಕ್ರಮ ಗಣಿಯ ಅಂತಿಮ ವರದಿ ಮಾಧ್ಯಮವೊಂದರಲ್ಲಿ ಬಹಿರಂಗವಾಗಿರುವುದರ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವರದಿಯನ್ನು ನಾನು ಸರ್ಕಾರಕ್ಕೆ ಅಧಿಕೃತವಾಗಿ ಸಲ್ಲಿಕೆಯಾಗುವ ಮೊದಲೇ ಸೋರಿಕೆಯಾಗಿರುವುದು ನನಗೆ ನಿಜಕ್ಕೂ ಆಘಾತ ತಂದಿದೆ ಎಂದು ಹೇಳಿದರು.

ಗಣಿ ಕುರಿತ ಅಂತಿಮ ವರದಿಯ ಸಾರಾಂಶ ಮಾಧ್ಯಮದಲ್ಲಿ ಪ್ರಸಾರವಾಗಿರುವ ವಿಷಯ ಸತ್ಯವೇ ಎಂಬ ಅಂಶದ ಬಗ್ಗೆ ಪ್ರಶ್ನಿಸಿದಾಗ, ಅದು ಸತ್ಯ ಎಂದು ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಸಂತೋಷ್ ಹೆಗ್ಡೆ ಗದ್ಗದಿತರಾದರು.

ನನ್ನ ದೂರವಾಣಿಯನ್ನು ಕದ್ದಾಲಿಸುವ ಮೂಲಕ ಈ ಸೋರಿಕೆ ನಡೆದಿರುವುದಾಗಿ ಅನುಮಾನ ವ್ಯಕ್ತಪಡಿಸಿದ ಅವರು, ದೂರವಾಣಿ ಕದ್ದಾಲಿಕೆ ಬಗ್ಗೆ ಕೆಲ ತಿಂಗಳಿನಿಂದ ಶಂಕೆ ಇದ್ದಿರುವುದಾಗಿ ಅವರು ಹೇಳಿದರು.

ಅಂತಿಮ ವರದಿಯನ್ನು ನಾಳೆ ಸರ್ಕಾರಕ್ಕೆ ಸಲ್ಲಿಸಬೇಕೆಂದು ನಿರ್ಧರಿಸಿದ್ದೆ. ಆದರೆ ಅಷ್ಟರೊಳಗೆ ವ್ಯವಸ್ಥಿತವಾಗಿ ವರದಿಯನ್ನು ಸೋರಿಕೆ ಮಾಡಿರುವುದರ ಹಿಂದೆ ರಾಜಕೀಯ ಪಿತೂರಿ ಇರುವುದಾಗಿ ಆರೋಪಿಸಿದರು. ಆದರೆ ಗಣಿ ವರದಿ ಸೋರಿಕೆಯ ಹಿಂದೆ ಲೋಕಾಯುಕ್ತ ಅಧಿಕಾರಿಗಳ ಕೈವಾಡ ಇಲ್ಲ ಎಂದು ಸ್ಪಷ್ಟಪಡಿಸಿದರು.

ವರದಿ ನಿಜಕ್ಕೂ ಸೋರಿಕೆಯಾಗಬಾರದಿತ್ತು. ಹಾಗಂತ ವರದಿ ಸೋರಿಕೆಯಾಗಿರುವುದರಿಂದ ಅದರ ಮಹತ್ವ ಕಳೆದುಕೊಂಡಿದೆ ಎಂಬ ವಾದದಲ್ಲಿ ಹುರುಳಿಲ್ಲ. ವರದಿ ಸೋರಿಕೆಗೆ ನಾನೇ ಜವಾಬ್ದಾರಿ ಹೊರಬೇಕಾಗುತ್ತದೆ. ಹಾಗಂತ ನಾನು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ಏನು ಪ್ರಯೋಜನ? ನನ್ನ ಅವಧಿ ಇರುವುದೇ ಕೇವಲ ಹತ್ತು ದಿನ. ಹಾಗಾಗಿ ರಾಜೀನಾಮೆ ಕೊಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿ. ಸುದ್ದಿಗೋಷ್ಠಿ ಮುಗಿಯುತ್ತಿದ್ದಂತೆಯೇ ಸದಾಶಿವನಗರದ ತಮ್ಮ ಮನೆಯಿಂದ ಹೊರನಡೆದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಾಯುಕ್ತ, ಸಂತೋಷ್ ಹೆಗ್ಡೆ, ಅಕ್ರಮ ಗಣಿ ವರದಿ, ಬಿಜೆಪಿ, ಯಡಿಯೂರಪ್ಪ, ಕಾಂಗ್ರೆಸ್