ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಅಕ್ರಮ ಗಣಿ ವರದಿ: 600 ಅಧಿಕಾರಿಗಳು, ಮುನಿಯಪ್ಪ ಹೆಸರು (Lokayuktha | illegal mining | yeddyurappa | kumaraswamy | janardhana reddy)
ಅಕ್ರಮ ಗಣಿ ವರದಿ: 600 ಅಧಿಕಾರಿಗಳು, ಮುನಿಯಪ್ಪ ಹೆಸರು
ಬೆಂಗಳೂರು, ಗುರುವಾರ, 21 ಜುಲೈ 2011( 14:01 IST )
PR
ಅಕ್ರಮ ಗಣಿ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮುನ್ನವೇ ಸೋರಿಕೆಯಾಗಿದ್ದು, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸೇರಿದಂತೆ ಮೂರು ಪಕ್ಷಗಳ ರಾಜಕೀಯ ನಾಯಕರಲ್ಲಿ ತಳಮಳ ಉಂಟಾಗಿದೆ. ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ತಮ್ಮ ಪ್ರಭಾವ ಬಳಸಿರುವ ಸಚಿವ ವಿ.ಮುನಿಯಪ್ಪ ಅವರ ಹೆಸರು ವರದಿಯಲ್ಲಿ ಉಲ್ಲೇಖವಾಗಿದೆ.
ಹಾಲಿ ಸಚಿವರಾಗಿರುವ ಮುನಿಯಪ್ಪ ಅಂದು ದೊಡ್ಡ ಪ್ರಮಾಣದಲ್ಲಿ ಅರಣ್ಯ ಪ್ರದೇಶವನ್ನು ಗಣಿಗಾರಿಕೆಗೆ ನೀಡಿರುವ ಆರೋಪ ವರದಿಯಲ್ಲಿದೆ.
ಅಕ್ರಮ ಗಣಿ ವರದಿಯಲ್ಲಿ ರಾಜ್ಯದ ವಿವಿಧ ದರ್ಜೆಯ 600ಕ್ಕೂ ಅಧಿಕ ಅಧಿಕಾರಿಗಳು ಭಾಗಿಯಾಗಿರುವುದನ್ನು ಲೋಕಾಯುಕ್ತ ತಂಡ ಪತ್ತೆ ಹಚ್ಚಿದೆ. ಇದರಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಐಎಎಸ್, ಐಪಿಎಸ್, ಐಎಫ್ಎಸ್ ಅಧಿಕಾರಿಗಳು ಶಾಮೀಲಾಗಿರುವ ಅಂಶವೂ ವರದಿಯಲ್ಲಿ ಉಲ್ಲೇಖವಾಗಿದೆ.
ಬಳ್ಳಾರಿಯ ಲೋಕಾಯುಕ್ತ ಎಸ್‌ಪಿ ಅಶೋಕ್ ಸದಲಗಿ, ರಾಯಚೂರು ಲೋಕಾಯುಕ್ತ ಎಸ್‌ಪಿ ಬಿ.ಮಹಾಂತೇಶ್ ಸೇರಿದಂತೆ ಬೆಳಗಾವಿ ಮತ್ತಿತರ ಜಿಲ್ಲೆಗಳ ಹತ್ತಕ್ಕೂ ಹೆಚ್ಚು ಲೋಕಾಯುಕ್ತ ಪೊಲೀಸರು ಗಣಿ ಉದ್ಯಮಿಗಳಿಂದ ಲಂಚ ಪಡೆಯುತ್ತಿದ್ದಾರೆಂಬ ಅಂಶವೂ ಅಕ್ರಮ ಗಣಿ ವರದಿಯಲ್ಲಿದೆ. ಒಟ್ಟಾರೆ ಅಕ್ರಮ ಗಣಿ ವರದಿ ರಾಜ್ಯ ರಾಜ್ಯಕಾರಣದಲ್ಲಿ ಮತ್ತೊಂದು ಸಂಚಲನ ಮೂಡಿಸಿದೆ.