ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಣಿ ವರದಿ: ಸಚಿವ ಜನಾರ್ದನ ರೆಡ್ಡಿ ಮಾರಿಷಸ್‌ಗೆ ದೌಡು (Marishes | Yeddyurappa | Janardana Reddy | Santhosh hegde | Illegal Mining)
WD
ಅಕ್ರಮ ಗಣಿ ಕುರಿತ ವರದಿ ಸೋರಿಕೆಯಾದ ಬೆನ್ನಲ್ಲೇ ಪ್ರವಾಸೋದ್ಯಮ ಸಚಿವ ಜನಾರ್ದನ ರೆಡ್ಡಿ ಮಾರಿಷಸ್‌ಗೆ ದೌಡಾಯಿಸಿದ್ದಾರೆ. ಈಗಾಗಲೇ ಮಾರಿಷಸ್‌ನಲ್ಲಿ ಠಿಕಾಣಿ ಹೂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆ ಚರ್ಚಿಸಲು ಅವರು ತೆರಳಿರುವುದಾಗಿ ಮೂಲಗಳು ತಿಳಿಸಿವೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಕ್ರಮ ಗಣಿಯ ಅಂತಿಮ ವರದಿಯ ಪ್ರಮುಖ ಅಂಶ ಮಾಧ್ಯಮಗಳಲ್ಲಿ ಸ್ಫೋಟಗೊಳ್ಳುತ್ತಿದ್ದಂತೆಯೇ, ಬಳ್ಳಾರಿ ಗಣಿ ಧಣಿ, ಸಚಿವ ಜನಾರ್ದನ ರೆಡ್ಡಿ ಮುಖ್ಯಮಂತ್ರಿಗಳಿಗೆ ದೂರವಾಣಿ ಕರೆ ಮಾಡಿದ್ದಾರೆನ್ನಲಾಗಿದೆ. ಆದರೆ ಮುಖ್ಯಮಂತ್ರಿಗಳು ರೀ...ನಮ್ಮ ಫೋನ್ ಕೂಡ ಕದ್ದಾಲಿಕೆಯಾಗುತ್ತಿದೆ ಹುಷಾರ್ ಎಂದು ಎಚ್ಚರಿಸಿದ್ದರು ಎನ್ನಲಾಗಿದೆ.

ಆ ಬಳಿಕ ದೂರವಾಣಿ ಮಾತುಕತೆ ಕೈಬಿಟ್ಟ ಜನಾರ್ದನ ರೆಡ್ಡಿ ಮುಂಬೈಯಿಗೆ ಆಗಮಿಸಿ ಅಲ್ಲಿಂದ ಮಾರಿಷಸ್‌ಗೆ ತೆರಳಿದ್ದಾರೆ. ಗಣಿ ವರದಿ ಸೋರಿಕೆ, ಅದರಲ್ಲಿ ಬಳ್ಳಾರಿ ಗಣಿಧಣಿಗಳ ಹೆಸರು ಪ್ರಸ್ತಾಪ ಸೇರಿದಂತೆ ಮುಂದಿನ ಹೆಜ್ಜೆಯ ಕುರಿತು ಮಾತುಕತೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ.

ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಗಣಿ ವರದಿಯನ್ನು ಜುಲೈ 23ಕ್ಕೆ ಸರ್ಕಾರಕ್ಕೆ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದರು. ಏತನ್ಮಧ್ಯೆ ವರದಿಯ ಅಂಶ ಮಾಧ್ಯಮವೊಂದರಲ್ಲಿ ಸೋರಿಕೆಯಾಗಿರುವುದು ಲೋಕಾಯುಕ್ತ ಸೇರಿದಂತೆ ರಾಜ್ಯರಾಜಕಾರಣದಲ್ಲಿ ಬಿರುಸಿನ ಸಂಚನ ಮೂಡಿಸಿದೆ.

ಅಕ್ರಮ ಗಣಿಗಾರಿಕೆ ವರದಿಯಲ್ಲಿ ಆಡಳಿತಾರೂಢ ಬಿಜೆಪಿಯ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ನಾಲ್ವರು ಸಚಿವರು, ಕಾಂಗ್ರೆಸ್ ಮುಖಂಡರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೆಸರು ಕೂಡ ಉಲ್ಲೇಖವಾಗಿರುವುದು ಬಹಿರಂಗವಾಗಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಜನಾರ್ದನ ರೆಡ್ಡಿ, ಗಣಿ ವರದಿ ಸೋರಿಕೆ, ಅಕ್ರಮ ಗಣಿಗಾರಿಕೆ, ಲೋಕಾಯುಕ್ತ, ಸಂತೋಷ್ ಹೆಗ್ಡೆ, ಮಾರಿಷಸ್, ಯಡಿಯೂರಪ್ಪ