ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಣಿ ಹಣದಿಂದ್ಲೇ ಎಚ್‌ಡಿಕೆ ಸಮ್ಮಿಶ್ರ ಸರ್ಕಾರ ರಚನೆ: ವಿಶ್ವನಾಥ್ (Congress | Kumaraswamy | Vishwanath | Lokayuktha | Illegal Mining | JDS)
ರಾಜ್ಯಕ್ಕೆ ಅಕ್ರಮ ಗಣಿ ಹಣ ಹರಿದು ಬರಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿಯೇ ಕಾರಣ ಎಂದು ಗಂಭೀರವಾಗಿ ಆರೋಪಿಸಿರುವ ಕಾಂಗ್ರೆಸ್ ಮುಖಂಡ, ಸಂಸದ ಎಚ್.ವಿಶ್ವನಾಥ್ ಗಣಿ ಹಣದಿಂದಲೇ 2007ರಲ್ಲಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ ಎಂದು ವಾಗ್ದಾಳಿ ನಡೆಸಿದರು.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಲೋಕಾಯುಕ್ತ ವರದಿ ಸೋರಿಕೆ ಕುರಿತು ಖಾಸಗಿ ಮಾಧ್ಯಮವೊಂದರ ಜತೆ ಮಾತನಾಡಿದ ಅವರು, ಅಕ್ರಮ ಗಣಿ ಹಗರಣದ ಅಂತಿಮ ವರದಿಯಲ್ಲಿ ಯಾವುದೇ ಪಕ್ಷದ ಮುಖಂಡರು ಶಾಮೀಲಾಗಿರಲಿ, ಅವರೆಲ್ಲರ ಮೇಲೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದರು.

ಆದರೆ ಗಣಿ ವರದಿ ಸೋರಿಕೆಯಾದ ಬೆನ್ನಲ್ಲೇ ಕುಮಾರಸ್ವಾಮಿಯವರು, ತಾನು ತಪ್ಪಿತಸ್ಥನಲ್ಲ. ಈ ಬಗ್ಗೆ ಯಾವುದೇ ತನಿಖೆಗೂ ಸಿದ್ದ ಎಂಬ ಹೇಳಿಕೆ ಕೊಟ್ಟಿದ್ದಾರೆ. ಆದರೆ ರಾಜ್ಯದಲ್ಲಿ ಗಣಿ ಹಣ ಹರಿದು ಬರಲು ಕುಮಾರಸ್ವಾಮಿಯೇ ಕಾರಣಿ ಪುರುಷ ಎಂದು ದೂರಿದರು.

ರಾಜ್ಯದಲ್ಲಿನ ಎಲ್ಲ ಭ್ರಷ್ಟಚಾರಕ್ಕೂ ಕುಮಾರಸ್ವಾಮಿಯೇ ಮೂಲಪುರುಷ. ಆದರೆ ಆ ಬಗ್ಗೆ ಯಾವುದೇ ತನಿಖೆ ನಡೆದಿಲ್ಲ. ಹಳೇ ಮೈಸೂರು ಭಾಗದ ಬಹಳಷ್ಟು ಜೆಡಿಎಸ್ ಶಾಸಕರಿಗೆ ಐದು ಎಕರೆಯಷ್ಟು ಜಮೀನು ಮಂಜೂರು ಮಾಡಿರುವುದು ಸೇರಿದಂತೆ ಹಲವಾರು ಅಕ್ರಮಗಳನ್ನು ಎಸಗಿರುವುದಾಗಿಯೂ ಈ ಸಂದರ್ಭದಲ್ಲಿ ಆರೋಪಿಸಿದರು.

ಆದರೆ ಅಕ್ರಮ ಗಣಿ ಕುರಿತಂತೆ ವರದಿ ಸೋರಿಕೆಯಿಂದ ಅದರ ಪಾವಿತ್ರ್ಯತೆ ಹಾಳಾಗಿದೆ ಎಂಬ ಬಿಜೆಪಿ ವಾದ ಸರಿಯಲ್ಲ. ಈ ರೀತಿ ಹೇಳುವ ಮೂಲಕ ಮತ್ತೊಂದು ಆಯೋಗ ರಚಿಸಿ ಸಮಯ ವ್ಯರ್ಥ ಮಾಡಬಹುದು ಎಂಬ ಹುನ್ನಾರ ಇದರ ಹಿಂದೆ ಇದೆ ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಕಾಂಗ್ರೆಸ್, ಕುಮಾರಸ್ವಾಮಿ, ವಿಶ್ವನಾಥ್, ಲೋಕಾಯುಕ್ತ, ಅಕ್ರಮ ಗಣಿ, ಸಂತೋಷ್ ಹೆಗ್ಡೆ, ಜೆಡಿಎಸ್