ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » 'ಸಿಎಂ ರಾಜೀನಾಮೆ ಕೇಳೋ ಹಕ್ಕು ಲೋಕಾಯುಕ್ತರಿಗಿದೆ' (Lokayukta | Santhosh hegde | vacate office | Illegal Mining | Yeddyurappa | BJP)
PR
ಅಕ್ರಮ ಗಣಿಗಾರಿಕೆ ಅಂತಿಮ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗುವ ಮೊದಲೇ ರಾಜಕೀಯ ಪಕ್ಷಗಳಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಯಾಗಿದ್ದು, ಏತನ್ಮಧ್ಯೆ ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್ 13ರ ಅನ್ವಯ ಆರೋಪಿ ಸ್ಥಾನದಲ್ಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ನಾಲ್ವರು ಸಚಿವರ ರಾಜೀನಾಮೆ ಕೇಳುವ ಅಧಿಕಾರ ಇರುವುದು ಕೂಡ ದೊಡ್ಡ ಕಗ್ಗಾಂಟಾಗಿ ಪರಿಣಮಿಸಿದೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಲು ಲೋಕಾಯುಕ್ತಕ್ಕೆ ಶಿಫಾರಸು ಮಾಡಿರುವುದು ಸರ್ಕಾರವೇ. ಹಾಗಾಗಿ ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅವರ ರಾಜೀನಾಮೆ ಪಡೆಯುವ ಅಧಿಕಾರ ಕೂಡ ಲೋಕಾಯುಕ್ತ ಇದೆ.

ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ಅಂತಿಮ ವರದಿ ಕುರಿತು ಹೆಚ್ಚಿನ ಸ್ಫೋಟಕ ನಿರೀಕ್ಷೆಗಳು ಇಲ್ಲದಿದ್ದರೂ ಕೂಡ ಇದೀಗ ಲೋಕಾಯುಕ್ತ ನ್ಯಾಯಾಮೂರ್ತಿ ಸಂತೋಷ್ ಹೆಗ್ಡೆಯವರು ಅಕ್ರಮ ಗಣಿಗಾರಿಕೆ ಕುರಿತು ಶಾಮೀಲಾಗಿರುವವರ ವಿರುದ್ಧ ಮಾಡಿರುವ ಶಿಫಾರಸು ಆಡಳಿತಾರೂಢ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರಕ್ಕೆ ದೊಡ್ಡ ಹೊಡೆತವಾಗಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಅಷ್ಟೇ ಅಲ್ಲ ಲೋಕಾಯುಕ್ತರು ಅಕ್ರಮ ಗಣಿ ಹಗರಣದಲ್ಲಿ ಶಾಮೀಲಾಗಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಸಚಿವ ಸಂಪುಟದ ನಾಲ್ವರು ಸಚಿವರ ವಿರುದ್ಧ ಏನು ಕ್ರಮಕೈಗೊಳ್ಳಲಿದ್ದಾರೆ ಎಂಬ ಕುತೂಹಲದೊಂದಿಗೆ ಅವರು ಮಾಡಿರುವ ಶಿಫಾರಸಿನ ಬಗ್ಗೆ ಮೌನವಾಗಿಯೇ ಇದ್ದಾರೆ.

ಅಲ್ಲದೇ ರಾಜ್ಯಪಾಲರನ್ನು ಸಕ್ಷಮ ಪ್ರಾಧಿಕಾರಿಯಾಗಿ ಪರಿಗಣಿಸಿ ಲೋಕಾಯುಕ್ತರು ವರದಿಯನ್ನು ನೀಡಿದರೆ ನಾನು ಅದರ ಕುರಿತಂತೆ ಲೋಕಾಯುಕ್ತ ಕಾಯ್ದೆಯ ಸೆಕ್ಷನ್ 12 ಮತ್ತು 13ರಂತೆ ಕ್ರಮಕೈಗೊಳ್ಳುತ್ತೇನೆ. ಲೋಕಾಯುಕ್ತರ ಶಿಫಾರಸನ್ನು ನಾನು ಗಂಭೀರವಾಗಿ ಪರಿಗಣಿಸುತ್ತೇನೆ. ಅವರು ವರದಿ ಸಲ್ಲಿಸಿದ ನಂತರ ನನ್ನ ಕ್ರಮ ಏನೆಂಬುದನ್ನು ನಿಮಗೆ ತಿಳಿಯುತ್ತದೆ ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಕೂಡ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದರು.

PR
ಲೋಕಾಯುಕ್ತ ಕಾನೂನು ಏನು ಹೇಳುತ್ತೆ?
ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್ 13ರ ಅನ್ವಯ, ಅಕ್ರಮ ಗಣಿ ಕುರಿತ ತನಿಖೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಾಯುಕ್ತರು ಅಥವಾ ಉಪ ಲೋಕಾಯುಕ್ತರು ಜನಪ್ರತಿನಿಧಿಗಳಿಗೆ ರಾಜೀನಾಮೆ ನೀಡುವಂತೆ ನೇರವಾಗಿ ಕೇಳಬಹುದಾಗಿದೆ. ಗಣಿ ಹಗರಣದಲ್ಲಿ ಶಾಮೀಲಾಗಿರುವ ಜನಪ್ರತಿನಿಧಿಗಳು ತಮ್ಮ ಸಚಿವ ಅಥವಾ ಸಿಎಂ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು ಎಂಬುದಾಗಿ ಹೇಳಬಹುದಾಗಿದೆ.

ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತ ಸೆಕ್ಷನ್ 12(3) ಅನ್ವಯ ವರದಿಯನ್ನು ಸಲ್ಲಿಸಿ ಅದರ ಜಾರಿ ಬಗ್ಗೆ ಪ್ರಕಟಣೆ ಹೊರಡಿಸಬಹುದು. ಆದರೆ ಒಂದು ವೇಳೆ ಸಂವಿಧಾನದ ಮುಖ್ಯಸ್ಥರಾದ ರಾಜ್ಯಪಾಲರು ಅಥವಾ ರಾಜ್ಯಸರ್ಕಾರ ಅಥವಾ ಮುಖ್ಯಮಂತ್ರಿಗಳು ವರದಿಯನ್ನು ಸ್ವೀಕರಿಸಬಹುದು ಇಲ್ಲವೇ ತಿರಸ್ಕರಿಸಬಹುದಾಗಿದೆ.

ಒಂದು ವೇಳೆ ಸರ್ಕಾರಕ್ಕೆ ಸಲ್ಲಿಸಿದ ವರದಿಯನ್ನು ನಿಗದಿತ ಅವಧಿ ಮೂರು ತಿಂಗಳೊಳಗೆ ತಿರಸ್ಕರಿಸದೇ ಇದ್ದಲ್ಲಿ ವರದಿ ಅಂಗೀಕಾರಗೊಂಡಿದೆ ಎಂದೇ ಭಾವಿಸತಕ್ಕದ್ದು ಎಂಬುದಾಗಿ ಕಾಯ್ದೆ ಹೇಳುತ್ತದೆ. ಅಲ್ಲದೇ ಅಕ್ರಮ ಗಣಿ ಕುರಿತು ಶಾಮೀಲಾಗಿರುವವರ ವಿರುದ್ಧ ಕೈಗೊಳ್ಳಬೇಕಾದ ಶಿಫಾರಸಿನ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಲೋಕಾಯುಕ್ತ ನ್ಯಾ.ಹೆಗ್ಡೆ ತಿಳಿಸಿದ್ದಾರೆ. ಈ ಬಗ್ಗೆ ಒಂದೆರಡು ದಿನಗಳಲ್ಲಿ ತಮ್ಮ ಹಿರಿಯ ಸಹೋದ್ಯೋಗಿಗಳೊಂದಿಗೆ ಚರ್ಚೆ ನಡೆಸಿ ಕೈಗೊಳ್ಳಬೇಕಾದ ಶಿಫಾರಸಿನ ಬಗ್ಗೆ ಅಂತಿಮ ರೂಪು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಾಯುಕ್ತ, ಸಂತೋಷ್ ಹೆಗ್ಡೆ, ರಾಜೀನಾಮೆ ಅಧಿಕಾರ, ಅಕ್ರಮ ಗಣಿ ವರದಿ, ಯಡಿಯೂರಪ್ಪ, ಬಿಜೆಪಿ