ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಗಣಿ ವರದಿ, ಬಿಜೆಪಿ ತಲ್ಲಣ: ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ ನೋಡಿ... (Illegal Mining Report | Lokayukta | Santhosh hegde | BJP | Yeddyurappa)
ಗಣಿ ವರದಿ, ಬಿಜೆಪಿ ತಲ್ಲಣ: ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ ನೋಡಿ...
ಬೆಂಗಳೂರು, ಬುಧವಾರ, 27 ಜುಲೈ 2011( 19:56 IST )
PR
ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಅಕ್ರಮ ಗಣಿಗಾರಿಕೆಯ ಲೋಕಾಯುಕ್ತರ ಅಂತಿಮ ವರದಿ ಸಲ್ಲಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಮತ್ತೊಂದೆಡೆ ದಕ್ಷಿಣ ಭಾರತದ ಮೊಟ್ಟ ಮೊದಲ ಬಿಜೆಪಿ ಸರ್ಕಾರದ ಪ್ರಶ್ನಾತೀತ ನಾಯಕ ಎಂದೇ ಬಿಂಬಿಸಲ್ಪಟ್ಟಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಭವಿಷ್ಯ ಕೂಡ ನಿರ್ಧಾರವಾಗಲಿದೆ. ಗಣಿ ವರದಿ ಸ್ಫೋಟದ ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ....
* ತನಿಖಾ ವರದಿಯನ್ನು ಪರಿಶೀಲಿಸುತ್ತಿರುವೆ, ನಾಳೆ ಮಧ್ಯಾಹ್ನ ತುರ್ತು ಸಂಪುಟ ಸಭೆ ನಡೆಯಲಿದೆ-ಸಿಎಂ * ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ ಹಾಗೂ ಹಲವು ಮುಖಂಡರ ಜತೆ ನವದೆಹಲಿಗೆ ಪ್ರಯಾಣ * ನನ್ನಿಂದ ಸರ್ಕಾರಕ್ಕೆ ಯಾವುದೇ ನಷ್ಟವಾಗಿಲ್ಲ, ಗಣಿ ಅನುಮತಿಗೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದೆ-ಎಚ್‌ಡಿಕೆ * ನಾನು ಯಾವುದೇ ತಪ್ಪು ಮಾಡಿಲ್ಲ, ತಪ್ಪು ಮಾಡಿದ್ದರೆ ತಲೆದಂಡಕ್ಕೆ ಸಿದ್ದ-ಸೋಮಣ್ಣ * ಅಕ್ರಮ ಗಣಿ ವರದಿಯಲ್ಲಿ ರೆಡ್ಡಿ ಸಹೋದರರು, ಎಚ್‌ಡಿಕೆ, ಸೋಮಣ್ಣ, ಅನಿಲ್ ಲಾಡ್ ಪತ್ನಿ, ಶಾಸಕ ನಾಗೇಂದ್ರ ಹೆಸರು * ಸರ್ಕಾರದ ಮುಖ್ಯಕಾರ್ಯದರ್ಶಿ ಎಸ್.ವಿ.ರಂಗನಾಥ್‌ಗೆ ಗವರ್ನರ್ ಬುಲಾವ್ * ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳೋ ಅಧಿಕಾರ ಗವರ್ನರ್‌ಗೆ ಇದೆ. ಅವರಿಗೂ ವರದಿ ಪ್ರತಿ ಸಲ್ಲಿಕೆ. * ರಾಜ್ಯ ಸರ್ಕಾರದ ಬೊಕ್ಕಸಕ್ಕೆ 16,085 ಕೋಟಿ ರೂಪಾಯಿ ನಷ್ಟ-ಹೆಗ್ಡೆ *ಲೋಕಾಯುಕ್ತ ಸಂತೋಷ್ ಹೆಗ್ಡೆಯವರಿಂದ ಸುದ್ದಿಗೋಷ್ಠಿ * 3 ಮಂದಿ ಕಾನೂನು ತಜ್ಞರ ಜತೆ ನ್ಯಾ.ಸಂತೋಷ್ ಹೆಗ್ಡೆ ಸಮಾಲೋಚನೆ *ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವರದಿ ತಲುಪಿಸಿದ ಮುಖ್ಯ ಕಾರ್ಯದರ್ಶಿ *ಅಕ್ರಮ ಗಣಿಗಾರಿಕೆ ಕುರಿತ ವರದಿಯ ಒಂದು ಪ್ರತಿಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೂ ಸಲ್ಲಿಸಿದ್ದಾರೆ. *ಲೋಕಾಯುಕ್ತ ರಿಜಿಸ್ಟ್ರಾರ್ ನಾಯರ್ ಮೂಲೆ ಅವರಿಂದ ಸರ್ಕಾರದ ಮುಖ್ಯಕಾರ್ಯದರ್ಶಿ ರಂಗನಾಥ್‌ಗೆ ಗಣಿ ವರದಿ ಸಲ್ಲಿಕೆ *ಲೋಕಾಯುಕ್ತ ಕಚೇರಿಯಿಂದ ವಿಧಾನಸೌಧಕ್ಕೆ ತೆರಳಿದ ರಿಜಿಸ್ಟ್ರಾರ್ *ಕುಮಾರಕೃಪಾದಿಂದ ವಿಧಾನಸೌಧಕ್ಕೆ ತೆರಳಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ *ಅಂತಿಮ ವರದಿ ಲೋಕಾಯುಕ್ತ ನ್ಯಾ.ಹೆಗ್ಡೆ ಸಹಿ ಹಾಕುವ ಮೂಲಕ ಅಂಕಿತ *9 ಸಾವಿರಕ್ಕೂ ಹೆಚ್ಚು ಪುಟಗಳ ವರದಿ, 450ಕ್ಕೂ ಹೆಚ್ಚು ಪುಟಗಳ ಶಿಫಾರಸು ವರದಿ *ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತ ವರದಿಗೆ ನ್ಯಾ.ಸಂತೋಷ್ ಹೆಗ್ಡೆ ಸಹಿ. *ಮತ್ತೆ ಸಮಯ ಬದಲಾವಣೆ, ನಾಲ್ಕು ಗಂಟೆಗೆ ವರದಿ ಸಲ್ಲಿಕೆಗೆ ಮುಹೂರ್ತ ಫಿಕ್ಸ್ *ವರದಿಯ ಪ್ರತಿ ತಂದ ಹಿರಿಯ ಅರಣ್ಯಾಧಿಕಾರಿ ಯು.ವಿ.ಸಿಂಗ್ *ಲೋಕಾಯುಕ್ತರ ಕಚೇರಿ ತಲುಪಿದ ಅಕ್ರಮ ಗಣಿ ವರದಿ *ಸಂಜೆ 7 ಗಂಟೆಗೆ ಯಡಿಯೂರಪ್ಪ, ಈಶ್ವರಪ್ಪ ದೆಹಲಿಗೆ ಪ್ರಯಾಣ * 4 ಗಂಟೆಗೆ ಧನಂಜಯ್ ಕುಮಾರ್ ದೆಹಲಿಗೆ ಪ್ರಯಾಣ *ಬಿಜೆಪಿ ಹೈಕಮಾಂಡ್‌ನಿಂದ ಧನಂಜಯ್ ಕುಮಾರ್, ಸಿಎಂ ಹಾಗೂ ಈಶ್ವರಪ್ಪಗೆ ಬುಲಾವ್ *ಶಕ್ತಿ ಪ್ರದರ್ಶನಕ್ಕೆ ಮುಂದಾದ ಯಡಿಯೂರಪ್ಪ,ಹೈಕಮಾಂಡ್‌ಗೆ ಪರೋಕ್ಷ ಸಂದೇಶ ರವಾನೆ *ಸರ್ಕಾರದ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಕುಮಾರಕೃಪಾ ಗೆಸ್ಟ್ ಹೌಸ್‌ಗೆ ಭೇಟಿ *ಮಧ್ಯಾಹ್ನ 3ಗಂಟೆಗೆ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಬಿಜೆಪಿ ಸಭೆ *ಬಳ್ಳಾರಿ ಸೇರಿದಂತೆ ರಾಜ್ಯಾದ್ಯಂತ ಗಣಿ ವರದಿ ಮಾಹಿತಿ ತಿಳಿಯಲು ಟಿವಿ ಮುಂದೆ ಜಮಾಯಿಸಿದ ಜನರು *ಗಣಿ ವರದಿ ಸ್ಫೋಟದ ಹಿನ್ನೆಲೆಯಲ್ಲಿ ಜನಸಾಮಾನ್ಯರಲ್ಲಿ ಹೆಚ್ಚಿದ ತೀವ್ರ ಕುತೂಹಲ *ಆರ್ಎಸ್ಎಸ್ ಕಚೇರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಭೇಟಿ *ಬಿ,ಎಸ್.ಯಡಿಯೂರಪ್ಪ ಸಂಜೆ ದೆಹಲಿಗೆ ಪ್ರಯಾಣ *ಸಿಎಂ ಆಪ್ತ ಲೇಹರ್ ಸಿಂಗ್ ದಿಡೀರ್ ದೆಹಲಿಗೆ ಪ್ರಯಾಣ *ದೆಹಲಿಯಲ್ಲಿ ಬಿರುಸುಗೊಂಡ ರಾಜಕೀಯ ಚಟುವಟಿಕೆ *ಸಂಜೆ 4-30ಕ್ಕೆ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಸುದ್ದಿಗೋಷ್ಠಿ *ಅಕ್ರಮ ಗಣಿಯ ಲೋಕಾಯುಕ್ತ ವರದಿ ಮೂರು ಪ್ರತಿಗಳು ಸಿದ್ದ *ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಒಂದು ಪ್ರತಿ, ರಾಜ್ಯಪಾಲರು ಬಯಸಿದರೆ ಒಂದು, ಲೋಕಾಯುಕ್ತರ ಬಳಿ ಒಂದು ಪ್ರತಿ *ರಾಜೀನಾಮೆ ಪ್ರಶ್ನೆಯೇ ಇಲ್ಲ, ವಿಧಾನಸಭೆ ವಿಸರ್ಜಿಸುವುದೂ ಇಲ್ಲ-ಸಿಎಂ *ಹೈಕಮಂಡ್ ಆಹ್ವಾನಿಸಿದರೆ ದೆಹಲಿಗೆ ತೆರಳುವೆ-ಈಶ್ವರಪ್ಪ *ಸದಾನಂದ ಗೌಡರಿಗೆ ಬಿಜೆಪಿ ಹೈಕಮಾಂಡ್‌ನಿಂದ ದೆಹಲಿಗೆ ಬುಲಾವ್ *ನಾವು ಇಂದು ಮಧ್ಯಾಹ್ನ 2-30ಕ್ಕೆ ಅಕ್ರಮ ಗಣಿ ವರದಿ ಸಲ್ಲಿಸುತ್ತೇವೆ-ಲೋಕಾಯುಕ್ತ *ಸರ್ಕಾರದ ಮುಖ್ಯಕಾರ್ಯದರ್ಶಿ ಇನ್ನೂ ಸಮಯ ನಿಗದಿ ಪಡಿಸಿಲ್ಲ-ಹೆಗ್ಡೆ *ಸರ್ಕಾರಕ್ಕೆ ವರದಿ ನೀಡಲು ನಾನು ರೆಡಿ-ಸಂತೋಷ್ ಹೆಗ್ಡೆ *ನ್ಯಾ.ಸಂತೋಷ್ ಹೆಗ್ಡೆ ಪತ್ರಿಕಾಗೋಷ್ಠಿ *ಗೃಹ ಕಚೇರಿ ಕೃಷ್ಣಾದಲ್ಲಿ ಜನತಾ ದರ್ಶನಕ್ಕೆ ಬಂದವರಿಗೆ ತಿಮ್ಮಪ್ಪನ ಲಾಡು ಹಂಚಿದ ಸಿಎಂ *ದೆಹಲಿಗೆ ಬರುವಂತೆ ಹೈಕಮಾಂಡ್ ಸೂಚಿಸಿಲ್ಲ, ರಾಜೀನಾಮೆ ಪ್ರಶ್ನೆ ಇಲ್ಲ-ಸಿಎಂ *ತಿರುಪತಿಯಿಂದ ಬೆಂಗಳೂರಿಗೆ ವಾಪಸ್ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ