ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ನಾನು ತಪ್ಪು ಮಾಡಿಲ್ಲ, ತಲೆದಂಡಕ್ಕೂ ಸಿದ್ದ: ಸೋಮಣ್ಣ (Illegal Mining Report | Lokayukta | BJP | Somanna | Yeddyurappa | Hegde)
PR
ನಾನು ಯಾವುದೇ ಪಾಪದ ಕೆಲಸ ಮಾಡಿಲ್ಲ. ನನ್ನ ಜೀವನದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಅಕ್ರಮ ಗಣಿಗಾರಿಕೆ ವರದಿಯಲ್ಲಿ ಯಾಕಾಗಿ ನನ್ನ ಹೆಸರು ಬಳಕೆ ಮಾಡಿದಾರೋ ಗೊತ್ತಿಲ್ಲ. ವರದಿ ಪೂರ್ಣ ಪರಿಶೀಲಿಸಿದ ನಂತರ ಈ ಬಗ್ಗೆ ಪ್ರತಿಕ್ರಿಯಿಸಿಸುತ್ತೇನೆ'...ಇದು ವಸತಿ ಸಚಿವ ವಿ.ಸೋಮಣ್ಣ ಪ್ರತಿಕ್ರಿಯೆ.

ರಾಜ್ಯದಲ್ಲಿ ನಡೆದಿರುವ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಲೋಕಾಯುಕ್ತರ ಅಂತಿಮ ವರದಿಯಲ್ಲಿ ವಿ.ಸೋಮಣ್ಣ ಅವರ ಹೆಸರು ಕೂಡ ಪ್ರಸ್ತಾಪವಾಗಿದ್ದು, ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ ಅವರು ಈ ರೀತಿ ಪ್ರತಿಕ್ರಿಯೆ ನೀಡಿದರು.

ಅಕ್ರಮ ಗಣಿಗಾರಿಕೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಕಾಯಕಕ್ಕೆ ಹೆಚ್ಚಿನ ಆದ್ಯತೆ ನೀಡಿದವನು. ವರದಿಯಲ್ಲಿ ನನ್ನ ಹೆಸರಿದೆ ಎಂಬ ಅಂಶ ಆಘಾತ ತಂದೊಡ್ಡಿರುವುದಾಗಿ ಹೇಳಿದರು.

ವರದಿಯಲ್ಲಿ ಯಾಕಾಗಿ ನನ್ನ ಹೆಸರು ಸೇರ್ಪಡೆಗೊಂಡಿದೆ ಎಂಬುದು ಗೊತ್ತಿಲ್ಲ. ಒಂದು ವೇಳೆ ನನ್ನ ವಿರುದ್ಧದ ಆರೋಪ ಸಾಬೀತಾದರೆ ತಲೆದಂಡಕ್ಕೆ ಸಿದ್ದ ಎಂದು ಸೋಮಣ್ಣ ಈ ಸಂದರ್ಭದಲ್ಲಿ ತಿಳಿಸಿದರು.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಅಕ್ರಮ ಗಣಿ ವರದಿ, ಲೋಕಾಯುಕ್ತ, ಬಿಜೆಪಿ, ಸೋಮಣ್ಣ, ಸಂತೋಷ್ ಹೆಗ್ಡೆ, ಯಡಿಯೂರಪ್ಪ