ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಬಿಎಸ್‌ವೈ ತಲೆದಂಡ; ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ ನೋಡಿ (BJP | Yeddyurappa | Lokayukta | Illegal Mining Report | High commond | Resign)
ಬಿಎಸ್‌ವೈ ತಲೆದಂಡ; ಕ್ಷಣ, ಕ್ಷಣದ ಮಾಹಿತಿ ಇಲ್ಲಿದೆ ನೋಡಿ
ಬೆಂಗಳೂರು, ಗುರುವಾರ, 28 ಜುಲೈ 2011( 20:31 IST )
PR
ಅಕ್ರಮ ಗಣಿ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತರು ಅಂತಿಮ ವರದಿ ಸಲ್ಲಿಸಿದ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಬಿ.ಎಸ್.ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಪದವಿ ತ್ಯಜಿಸುವಂತೆ ಸೂಚನೆ ನೀಡಿದ್ದಾರೆ. ಆದರೆ ಯಡಿಯೂರಪ್ಪ ಈವರೆಗೂ ಯಾವುದೇ ಸ್ಪಷ್ಟ ನಿಲುವು ಪ್ರಕಟಿಸಿಲ್ಲ. ಮತ್ತೊಂದೆಡೆ ಬಳ್ಳಾರಿ ರೆಡ್ಡಿ ಸಹೋದರರು ಕೂಡ ರಾಜೀನಾಮೆ ನೀಡುತ್ತಾರೋ ಇಲ್ಲವೇ ಎಂಬ ಕುತೂಹಲ ಕೂಡ ಮೂಡಿದ್ದು, ಏತನ್ಮಧ್ಯೆ ರಾಜ್ಯ ರಾಜಕಾರಣದಲ್ಲಿನ ಕ್ಷಣ, ಕ್ಷಣದ ಬೆಳವಣಿಗೆ ಇಲ್ಲಿದೆ....
*ಶುಕ್ರವಾರ ನಡೆಯಲಿರುವ ಶಾಸಕಾಂಗ ಸಭೆಗೆ ಯಡಿಯೂರಪ್ಪ ಹಾಜರ್ *ನಿರ್ಗಮನದ ವೇಳೆ ಗದ್ಗದಿತರಾದ ಅಬಕಾರಿ ಸಚಿವ ರೇಣುಕಾಚಾರ್ಯ *ಬಹುತೇಕ ಸಚಿವರು, ಶಾಸಕರು ಸಿಎಂಗೆ ಬೆಂಬಲ-ನಿರಾಣಿ *ಎಲ್ಲಾ ಸಚಿವರು, ಶಾಸಕರನ್ನು ಬೀಳ್ಕೊಟ್ಟ ಯಡಿಯೂರಪ್ಪ *ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿನ ಸಭೆ ಮುಕ್ತಾಯ *ಬಿಜೆಪಿ ಹೈಕಮಾಂಡ್ ನಿರ್ಧಾರಕ್ಕೆ ನಾವು ಬದ್ಧ-ಜನಾರ್ದನ ರೆಡ್ಡಿ *ನವದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ ಬಿಜೆಪಿ ನಾಯಕ ವೆಂಕಯ್ಯ ನಾಯ್ಡು *ಜುಲೈ 31ರಂದು ರಾಜೀನಾಮೆ ನೀಡಲು ಯಡಿಯೂರಪ್ಪ ತೀರ್ಮಾನ-ಲೇಹರ್ ಸಿಂಗ್ *ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆಂಬ ಸುದ್ದಿ ಊಹಾಪೋಹ ಅಷ್ಟೇ-ರೇಣುಕಾಚಾರ್ಯ *ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ಇನ್ನೂ ರಾಜೀನಾಮೆ ಕೊಟ್ಟಿಲ್ಲ-ರೇಣುಕಾಚಾರ್ಯ ಸ್ಪಷ್ಟನೆ *ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿಗೆ ರಾಜೀನಾಮೆ ಪತ್ರ ರವಾನೆ-ಬಿಜೆಪಿ ಮೂಲಗಳು *ಕೊನೆಗೂ ಪಕ್ಷದ ವರಿಷ್ಠರ ಒತ್ತಡಕ್ಕೆ ಮಣಿದ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ *ವರಿಷ್ಠರ ಸೂಚನೆ ಮೇರೆಗೆ ಶಾಸಕಾಂಗ ಪಕ್ಷದ ಸಭೆ ಕರೆದ ಈಶ್ವರಪ್ಪ *ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಗೆ ಯಡಿಯೂರಪ್ಪಗೂ ಆಹ್ವಾನ *ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಆರಂಭಿಸಿದ್ದೇ ಕಾಂಗ್ರೆಸ್-ಸಿದ್ದು *ದೆಹಲಿಗೆ ತೆರಳಿದ್ದ ಡಿ.ವಿ.ಸದಾನಂದ ಗೌಡ ಬೆಂಗಳೂರಿಗೆ ವಾಪಸ್ *ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿರುವ ಸಿಎಂ *ಸಂಜೆ 5-30ಕ್ಕೆ ಸಚಿವರು, ಶಾಸಕರ ಸಭೆ ಕರೆದ ಸಿಎಂ *ಹೈಕಮಾಂಡ್ ಆದೇಶ ಧಿಕ್ಕರಿಸಿ ಸಚಿವರು, ಶಾಸಕರ ಸಭೆ ಕರೆದ ಯಡಿಯೂರಪ್ಪ *ಯಡಿಯೂರಪ್ಪ ರಾಜೀನಾಮೆಗೆ ಸೂಚನೆ ಕೊಡಲಾಗಿದೆ-ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ *ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ನೇತೃತ್ವದಲ್ಲಿ ಸಭೆ, *ಜನಾರ್ದನ ರೆಡ್ಡಿ ನಿವಾಸಕ್ಕೆ ಗೃಹ ಸಚಿವ ಆರ್.ಅಶೋಕ್, ಅರವಿಂದ ಲಿಂಬಾವಳಿ ಆಗಮನ *ಬಿ.ಎಸ್.ಯಡಿಯೂರಪ್ಪ ಮನೆಯಿಂದ ಜಾಗ ಖಾಲಿ ಮಾಡಿದ ಬಿಜೆಪಿ ಸಚಿವರು, ಶಾಸಕರು *ರಾಜೀನಾಮೆ ನೀಡಲು ಯಡಿಯೂರಪ್ಪಗೆ ಹೈಕಮಾಂಡ್ 12 ಗಂಟೆ ಡೆಡ್‌ಲೈನ್ *ಪಕ್ಷ ಒಡೆಯುವ ಕೆಲಸ ಮಾಡಲ್ಲ-ಕುಮಾರಸ್ವಾಮಿ ಸ್ಪಷ್ಟನೆ *ರಾಜ್ಯ ಉಸ್ತುವಾರಿ ಧರ್ಮೇಂದ್ರ ಪ್ರಧಾನ್ ಬೆಂಗಳೂರಿಗೆ ಆಗಮನ *ಜಗದೀಶ್ ಶೆಟ್ಟರ್‌ಗೆ ಸಿಎಂ ಸ್ಥಾನ ನೀಡಿ-ಮೂರು ಸಾವಿರ ಮಠಾಧೀಶರು *ಬೆಂಗಳೂರಿನಲ್ಲಿರುವ ಜನಾರ್ದನ ರೆಡ್ಡಿ ನಿವಾಸದಿಂದ ಬೊಮ್ಮಾಯಿ ನಿರ್ಗಮನ *ಬಿಜೆಪಿಯೇತರ ಸರ್ಕಾರ ರಚನೆಗೆ ಜೆಡಿಎಸ್ ಬೆಂಬಲ ಇಲ್ಲ-ಕುಮಾರಸ್ವಾಮಿ *ಗೊರಗುಂಟೆ ಪಾಳ್ಯದಲ್ಲಿ ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಬಂಧನ *ಮುಖ್ಯಮಂತ್ರಿ ಯಡಿಯೂರಪ್ಪ ರೇಸ್‌ಕೋರ್ಸ್ ನಿವಾಸಕ್ಕೆ ಆಗಮಿಸಿದ ಶ್ರೀರಾಮುಲು *ಸಿಎಂ ಸಭೆಯಿಂದ ಬೊಮ್ಮಾಯಿ ನಿರ್ಗಮನ, ಸಚಿವ ಜನಾರ್ದನ ರೆಡ್ಡಿ ಮನೆಗೆ ಬೊಮ್ಮಾಯಿ ಪ್ರಯಾಣ *ಬಿಎಸ್‌ವೈ ರಾಜೀನಾಮೆಗೆ ಆಗ್ರಹಿಸಿ ಬಳ್ಳಾರಿ, ಗದಗ, ರಾಯಚೂರು ಸೇರಿದಂತೆ ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ *ಯಡಿಯೂರಪ್ಪ ಕುರ್ಚಿ ಬಿಟ್ಟು ಕೆಳಗಿಳಿಯಲಿ-ಜೆಡಿಎಸ್ ವಿನೂತನ ಪ್ರತಿಭಟನೆ *ಕೆ.ಎಸ್.ಈಶ್ವರಪ್ಪ ಸ್ಥಾನದ ಮೇಲೆ ಯಡಿಯೂರಪ್ಪ ಕಣ್ಣು *ರಾಜ್ಯ ಸರ್ಕಾರ ವಜಾಗೊಳಿಸುವಂತೆ ಗವರ್ನರ್‌ಗೆ ಮನವಿ ಮಾಡಿದ ಕಾಂಗ್ರೆಸ್ *ನನಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಕೊಟ್ರೆ ರಾಜೀನಾಮೆ ಕೊಡುವೆ-ಸಿಎಂ ಸೂತ್ರ *ನೂತನ ಮುಖ್ಯಮಂತ್ರಿಯಾಗಿ ಡಿ.ವಿ.ಸದಾನಂದ ಗೌಡ ಸಾಧ್ಯತೆ-ಬಿಜೆಪಿ ಮೂಲ *ಸಿಎಂ ಸಭೆಯಲ್ಲಿ ರೇಣುಕಾಚಾರ್ಯ, ಶೋಭಾ, ಬೊಮ್ಮಾಯಿ, ಕತ್ತಿ, ಸಿಸಿ ಪಾಟೀಲ್ ಹಾಜರ್ *ಹೈಕಮಾಂಡ್ ಸೂಚಿಸಿದರೆ ನಾವು ರಾಜೀನಾಮೆ ನೀಡಲು ಸಿದ್ದ *ಬಳ್ಳಾರಿ ರೆಡ್ಡಿ ಸಹೋದರರಿಂದ ದಿಢೀರ್ ಸಭೆ, *ಹೈಕಮಾಂಡ್ ಆದೇಶ ಧಿಕ್ಕರಿಸಿ ಸಭೆ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ *ಯಡಿಯೂರಪ್ಪ ಕರೆದ ಸಭೆಗೆ ಯಾವುದೇ ಕಾರಣಕ್ಕೂ ಸಚಿವರು, ಶಾಸಕರು ಭಾಗವಹಿಸಬಾರದು-ಹೈಕಮಾಂಡ್ *ಸಚಿವರು, ಶಾಸಕರ ಸಭೆ ಕರೆಯಬೇಡಿ, ಗೌರವಯುತವಾಗಿ ರಾಜೀನಾಮೆ ನೀಡಿ-ಹೈಕಮಾಂಡ್ *ರಾಜೀನಾಮೆ ನೀಡುವಂತೆ ಬಿ.ಎಸ್.ಯಡಿಯೂರಪ್ಪಗೆ ಹೈಕಮಾಂಡ್ ಸೂಚನೆ *ಬಿ.ಎಸ್.ಯಡಿಯೂರಪ್ಪ ರಾಜೀನಾಮೆಗೆ ಎಲ್.ಕೆ.ಅಡ್ವಾಣಿ ಗ್ರೀನ್ ಸಿಗ್ನಲ್