ರಾಜ್ಯ ಬಿಜೆಪಿ ಸರಕಾರದಲ್ಲಿ ಮೊದಲ ಬಾರಿಗೆ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಸಲು ನಿರ್ಧರಿಸಲಾಗಿದೆ. ಜಾತಿ ವೋಟ್ ಬ್ಯಾಂಕ್ ಲೆಕ್ಕಾಚಾರದ ಮೇಲೆ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬ್ರಾಹ್ಮಣ ಸಮುದಾಯಕ್ಕೆ ಮುಖ್ಯಮಂತ್ರಿ ಸ್ಥಾನ ಸಿಕ್ಕಲ್ಲಿ ಲಿಂಗಾಯಿತ ಕೋಮಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲು ನಿರ್ಧರಿಸಲಾಗಿದೆ.ಪಕ್ಷ ಅಧಿಕಾರಕ್ಕೆ ಬರಲು ಲಿಂಗಾಯುತ ಸಮುದಾಯದ ಬೆಂಬಲ ಪ್ರಮುಖ ಎಂಬ ಅಭಿಪ್ರಾಯ ಬಿಜೆಪಿಯಲ್ಲಿದೆ.
ಮುಖ್ಯಮಂತ್ರಿ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪ ನಿರ್ಗಮಿಸಿದರೆ ಲಿಂಗಾಯತ ಕೋಮಿನವರು ಬೇಸರಗೊಂಡು ಪಕ್ಷದಿಂದ ದೂರ ಸರಿಯುವಂತೆ ನೋಡಿಕೊಳ್ಳುವ ಉದ್ದೇಶದಿಂದ ಈ ತೀರ್ಮಾನಕ್ಕೆ ಬರಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಯಾರಾಗಬೇಕು ಎನ್ನುವ ನಿರ್ಧಾರವಾಗಿಲ್ಲ.ಶಾಸಕರ ಅಭಿಪ್ರಾಯದಂತೆ ಮುಖ್ಯಮಂತ್ರಿ ಆಯ್ಕೆ ನಡೆಯಲಿದೆ. ಹೀಗಾಗಿ ಯಾವ ಸಮುದಾಯಕ್ಕೆ ಯಾವ ಹುದ್ದೆ ಎನ್ನುವುದು ನಿಖರವಾಗದ ಕಾರಣ ಅದಕ್ಕೊಂದು ಸೂತ್ರ ಸಿದ್ಧಪಡಿಸಕೊಳ್ಳಲಾಗಿದೆ ಎನ್ನುವುದು ಬಿಜೆಪಿ ಹಿರಿಯ ಶಾಸಕರ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.