ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಲೋಕಾಯುಕ್ತರೇ ಜನರ ಕ್ಷಮೆ ಕೇಳ್ಬೇಕು: ರೆಡ್ಡಿ ಕಿಡಿ (Lokayukta | Illegal Mining Report | Karunakar Reddy | Santhosh hegde)
WD
'ಸಂತೋಷ್ ಹೆಗ್ಡೆ ನ್ಯಾಯಮೂರ್ತಿಯಾಗಿ, ಲೋಕಾಯುಕ್ತರಾಗಿ ಅವರ ಬಗ್ಗೆ ಎರಡು ಮಾತಿಲ್ಲ. ಆದರೆ ಅಕ್ರಮ ಗಣಿ ವರದಿ ಬಗ್ಗೆ ಅಸಮಾಧಾನವಿದೆ. ನನ್ನ ಮೇಲಿನ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಹಾಗಾಗಿ ಅವರು ಜನರ ಕ್ಷಮೆ ಕೇಳಲಿ' ಎಂದು ಕಂದಾಯ ಸಚಿವ ಕರುಣಾಕರ ರೆಡ್ಡಿ ಆಗ್ರಹಿಸಿದ್ದಾರೆ.

ಕ್ಷಣ ಕ್ಷಣದ ತಾಜಾ ಸುದ್ದಿ, ವಿಶೇಷ ವರದಿ-ಲೇಖನಗಳಿಗಾಗಿ ನಿಮ್ಮ ವೆಬ್‌ದುನಿಯಾಕ್ಕೆ ಭೇಟಿ ಕೊಡಿ

ಓಬಳಾಪುರಂ ಮೈನಿಂಗ್ ಕಂಪನಿಗೂ ನನಗೂ ಯಾವುದೇ ಸಂಬಂಧವಿಲ್ಲ. ಆದರೂ ಅಕ್ರಮ ಗಣಿ ವರದಿಯಲ್ಲಿ ನನ್ನ ಹೆಸರನ್ನು ಯಾಕಾಗಿ ಸೇರಿದ್ದಾರೋ ಗೊತ್ತಿಲ್ಲ. ನನಗೆ ಲೋಕಾಯುಕ್ತರ ಮೇಲೆ ಅಪಾರ ಗೌರವವಿದೆ. ಆದರೆ ವರದಿಯಲ್ಲಿ ತಮ್ಮ ಹೆಸರು ಸೇರಿಸಿರುವುದು ಸರಿಯಲ್ಲ ಎಂದರು.

ನನ್ನ ಮೇಲೆ ಸುಮ್ಮನೆ ಆರೋಪ ಹೊರಿಸಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಈ ಬಗ್ಗೆ ಅವರು ಸಾರ್ವಜನಿಕರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.

ರೆಡ್ಡಿಗೆ ಹೆಗ್ಡೆ ತಿರುಗೇಟು:
ಅಕ್ರಮ ಗಣಿ ವರದಿಗೆ ಸಂಬಂಧಿಸಿದಂತೆ ಲೋಕಾಯುಕ್ತರೇ ಜನರ ಕ್ಷಮೆ ಕೇಳಬೇಕೆಂಬ ಕರುಣಾಕರ ರೆಡ್ಡಿ ಹೇಳಿಕೆಗೆ ನ್ಯಾ.ಸಂತೋಷ್ ಹೆಗ್ಡೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಏನು ತಪ್ಪಾಗಿದೆ ಎಂದು ರೆಡ್ಡಿ ನಮ್ಮ ಕಚೇರಿಗೆ ಬಂದು ಹೇಳಲಿ. ನನ್ನ ಬಳಿ ಎಲ್ಲದಕ್ಕೂ ದಾಖಲೆಗಳಿವೆ. ಅದನ್ನು ಪರಿಶೀಲಿಸಿದ ನಂತರ ಮಾತನಾಡಲಿ ಎಂದು ತಿರುಗೇಟು ನೀಡಿದ್ದಾರೆ.

ಕರುಣಾಕರ ರೆಡ್ಡಿಯ ಅಕ್ರಮವನ್ನು ದಾಖಲೆ ಸಮೇತ ಸಾಬೀತುಪಡಿಸುವೆ. ವರದಿಯನ್ನು ಮೇಲ್ನೋಟಕ್ಕೆ ನೋಡಿ ಈ ರೀತಿ ಹೇಳಿಕೆ ಕೊಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೆಗ್ಡೆ ತಿಳಿಸಿದ್ದಾರೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಲೋಕಾಯುಕ್ತ, ಅಕ್ರಮ ಗಣಿ ವರದಿ, ಕರುಣಾಕರ ರೆಡ್ಡಿ, ಸಂತೋಷ್ ಹೆಗ್ಡೆ, ಬಿಜೆಪಿ, ಯಡಿಯೂರಪ್ಪ