ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಅನಿವಾಸಿ ಕನ್ನಡಿಗ | ಓದುಗರ ಅಭಿಮತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಜ್ಯ ಸುದ್ದಿ » ಒತ್ತಡಕ್ಕೆ ಮಣಿದು ಯಾರನ್ನೋ ಸಿಎಂ ಮಾಡಲಾಗಲ್ಲ: ಅಶೋಕ್ (Yeddiyurappa | R.ashok | BJP | Chief minister)
PR
ನಾವೆಲ್ಲ ಪಕ್ಷದ ಶಿಸ್ತಿನ ಸಿಪಾಯಿಗಳು. ಬೇರೆ ಪಕ್ಷದತ್ತ ನಾವು ಇಲ್ಲಿಯವರೆಗೆ ಕಣ್ಣು ಹಾಯಿಸಿಲ್ಲ. ಒತ್ತಡಕ್ಕೆ ಮಣಿದು ಯಾರನ್ನೋ ಮುಖ್ಯಮಂತ್ರಿಯನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಆರ್ ಅಶೋಕ್ ಹೇಳಿದ್ದಾರೆ.

ಪಕ್ಷದ ಶಾಸಕರು, ವರಿಷ್ಠ ನಾಯಕರು ಸೂಚಿಸಿದವರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಗುವುದು.ಶಾಸಕರ ಅಭಿಪ್ರಾಯಗಳನ್ನು ಆಲಿಸಿ, ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲು ಹೈಕಮಾಂಡ್ ನಿರ್ಧರಿಸಿದೆ ಎಂದು ಹೇಳಿಕೆ ನೀಡಿ ಯಡ್ಡಿ ಬಯಕೆಗಳಿಗೆ ತಣ್ಣೀರು ಎರಚಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಎಂ ಹುದ್ದೆಗೆ ಶೋಭಾ ಕರಂದ್ಲಾಜೆ ಮತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಮ್ಮನ್ನು ಆಯ್ಕೆ ಮಾಡುವುದಲ್ಲದೇ, ತಾವು ಸೂಚಿಸಿದವರಿಗೆ ಮಂತ್ರಿ ಸ್ಥಾನಗಳನ್ನು ನೀಡಬೇಕು ಎನ್ನುವ ಷರತ್ತುಗಳನ್ನು ವಿಧಿಸಿದ್ದರು ಎನ್ನಲಾಗಿದೆ.

ಆದರೆ, ಯಡಿಯೂರಪ್ಪ ಷರತ್ತುಗಳಿಗೆ ಹೈಕಮಾಂಡ್ ಮಣಿಯದಿರಲು ನಿರ್ಧರಿಸಿ,ಮೊದಲು ಸಿಎಂ ರಾಜೀನಾಮೆ ನೀಡಲಿ ನಂತರ ಉಳಿದ ಮಾತುಕತೆ ಎಂದು ಸ್ಪಷ್ಟವಾದ ಮಾಹಿತಿಯನ್ನು ರಾಜ್ಯಕ್ಕೆ ರವಾನಿಸಿದೆ.
ಇವನ್ನೂ ಓದಿ
ಇದನ್ನು ಸಹ ಶೋಧಿಸು: ಯಡಿಯೂರಪ್ಪ, ಆರ್ಅಶೋಕ್, ಬಿಜೆಪಿ, ಮುಖ್ಯಮಂತ್ರಿ