ಅಕ್ರಮ ಗಣಿಗಾರಿಕೆ ಕುರಿತ ಲೋಕಾಯುಕ್ತರ ತನಿಖಾ ವರದಿಯಲ್ಲಿ ತಮ್ಮ ಮೇಲಿನ ಆರೋಪಗಳಿಗೆ ಬಗ್ಗೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸುವ ವರದಿ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದ್ದ ಸಚಿವ ಜನಾರ್ದನ ರೆಡ್ಡಿ ಬಾಂಬ್ ಹುಸಿಯಾಗಿದೆ.
ಲೋಕಾಯುಕ್ತರ ವರದಿಗೆ ಸಂಬಂಧಿಸಿದಂತೆ ಶನಿವಾರ ಹೊಸ ಬಾಂಬ್ ಸಿಡಿಸುವುದಾಗಿ ಮಾಧ್ಯಮದ ಮುಂದೇಯೇ ಹೇಳಿಕೆ ನೀಡಿದ್ದ ಜನಾರ್ದನ ರೆಡ್ಡಿ ಈಗ ಮೌನಕ್ಕೆ ಶರಣಾಗಿದ್ದಾರೆ.
ಮಂಗಳವಾರ ಕಾದು ನೋಡಿ... ಈ ಬಗ್ಗೆ ಶನಿವಾರ ಮತ್ತೊಂದು ಮಾಧ್ಯಮದ ಎದುರುಗಡೆ ಪ್ರತ್ಯಕ್ಷಗೊಂಡ ಜನಾರ್ದನ ರೆಡ್ಡಿ, ಲೋಕಾಯುಕ್ತರ ವರದಿ ಬಗ್ಗೆ ಸಂಪೂರ್ಣ ಮಾಹಿತಿ ಇನ್ನೂ ಸಿಕ್ಕಿಲ್ಲ. ಅಧ್ಯಯನ ನಡೆಯಸಲು ಕಾಲಾವಕಾಶ ಬೇಕಿದೆ. ಮಂಗಳವಾರ ಮತ್ತೆ ಪತ್ರಿಕಾಗೋಷ್ಠಿಯಲ್ಲಿ ಎಲ್ಲವನ್ನು ಬಹಿರಂಗಪಡಿಸುತ್ತೇನೆ ಎಂದು ಗುಡಿಗಿದ್ದಾರೆ.
ಲೋಕಾಯುಕ್ತರ ಗಣಿ ವರದಿ ನಮ್ಮ ಕೈ ಸೇರಿಲ್ಲ. ಸೋಮವಾರದೊಳಗೆ ಸಂಪೂರ್ಣ ವರದಿ ಸಿಗುವ ನಿರೀಕ್ಷೆಯಿದೆ. ಹೀಗಾಗಿ ಮಂಗಳವಾರ ಎಲ್ಲ ಆರೋಪಗಳಿಗೂ ಉತ್ತರಿಸುವುದಾಗಿ ತಿಳಿಸಿದ್ದಾರೆ.